ರಾಯಚೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಲಂ ನಿವಾಸಿಗಳಿಗೆ ಮಾಲೀಕತ್ವದ ಪತ್ರ ನೀಡದ ರಾಯಚೂರು ನಗರಸಭೆ

By ರಾಯಚೂರು ಪ್ರತಿನಿಧಿ
|
Google Oneindia Kannada News

ರಾಯಚೂರು, ಜೂ27: ಕೊಳಗೇರಿಗಳ ಅಭಿವೃದ್ಧಿಗಾಗಿ ಸರ್ಕಾರದಿಂದ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಆದರೆ, ಕೊಳಗೇರಿ ನಿವಾಸಿಗಳ ಕಲ್ಯಾಣವು ಕಡತಗಳಿಗಷ್ಟೇ ಸೀಮಿತವಾಗಿದ್ದು ವಾಸ್ತವದಲ್ಲಿ ಹತ್ತಾರು ಸಮಸ್ಯೆಗಳು ತಾಂಡವವಾಡುತ್ತಿವೆ. ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತೆ ಹಕ್ಕುಪತ್ರಕ್ಕಾಗಿ ಮೂಲಸೌಕರ್ಯಕ್ಕಾಗಿ ಕೊಳೆಗೇರಿ ನಿವಾಸಿಗಳು ನಿರಂತರ ಪ್ರತಿಭಟನೆಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.

ನಗರಸಭೆಯಿಂದ ಹಕ್ಕುಪತ್ರ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡುತ್ತಿದ್ದಾರೆ ವಿನಾ ಕಾರ್ಯರೂಪಕ್ಕೆ ಬರುತ್ತಿಲ್ಲ ಎನ್ನುವ ಅಸಮಾಧಾನ ಕೊಳೆಗೇರಿ ನಿವಾಸಿಗಳಲ್ಲಿ ಮನಮಾಡಿದೆ. ಘೋಷಿತ, ಅಘೋಷಿತ ಹಾಗೂ ಖಾಸಗಿ ಮಾಲೀಕತ್ವದ ಜಮೀನುಗಳಲ್ಲಿ ದಶಕಗಳಿಂದ ವಾಸಿಸುತ್ತಿರುವ ಬಡವರಿಗೂ ಹಕ್ಕುಪತ್ರ ವಿತರಿಸುವುದಕ್ಕೆ ಅಧಿಕಾರಿಗಳು ಕ್ರಮ ವಹಿಸಬೇಕು ಎನ್ನುವುದು ಕೊಳೆಗೇರಿ ನಿವಾಸಿಗಳ ಬೇಡಿಕೆಯಾಗಿದೆ.

ಮುಂಗಾರು ಪೂರ್ವ ಮಳೆ ನಂಬಿ ಬಿತ್ತನೆ ಮಾಡಿ ಮೋಸ ಹೋದ ರಾಯಚೂರು ರೈತರುಮುಂಗಾರು ಪೂರ್ವ ಮಳೆ ನಂಬಿ ಬಿತ್ತನೆ ಮಾಡಿ ಮೋಸ ಹೋದ ರಾಯಚೂರು ರೈತರು

ಬಯಲಲ್ಲೇ ಬಹಿರ್ದೆಸೆ

ಬಯಲಲ್ಲೇ ಬಹಿರ್ದೆಸೆ

ಕೊಳೆಗೇರಿಗಳಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ ವೈಯಕ್ತಿಕ ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬರೀ ಕಲ್ಲುಗಳಿರುವುದರಿಂದ ಸೇಪ್ಟಿ ಟ್ಯಾಂಕ್ ಕೂಡಾ ಅಳವಡಿಕೆ ಅಸಾಧ್ಯವಾಗಿರುವ ಕಾರಣ ನಗರದ ಬಹುತೇಕ ಕೊಳಗೇರಿ ನಿವಾಸಿಗಳು ಈಗಲೂ ಬಹಿರ್ದೆಸೆಗೆ ಬಯಲಲ್ಲೇ ನೆಚ್ಚಿಕೊಂಡಿದ್ದಾರೆ. ನಗರವು ದಿನ ಕಳೆದಂತೆ ಬೆಳೆಯುತ್ತಿರುವುದರಿಂದ ಕೊಳೆಗೇರಿ ನಿವಾಸಿಗಳು ಬಯಲು ಬಹಿರ್ದೆಸೆಗೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೊಳೆಗೇರಿಗಳಲ್ಲಿ ವ್ಯಾಪಕವಾಗಿ ಸಾಮೂಹಿಕ ಶೌಚಾಲಯಗಳನ್ನು ನಗರಸಭೆಯಿದ ನಿರ್ಮಾಣ ಮಾಡಬೇಕು ಅಲ್ಲಿ ನೀರಿನ ವಯವಸ್ಥೆ ವ್ಯವಸ್ಥೆ ಕಲ್ಪಿಸಿ ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಕೆಲವು ಕಡೆ ಸಾಮೂಹಿಕ ಶೌಚಾಲಯ ನಿರ್ಮಾಣ ಮಾಡಿದ್ದು ಅವುಗಳ ನಿರ್ವಹಣೆ ಮಾಡದ ಕಾರಣ ಪಾಳು ಬಿದ್ದಿವೆ. ಶೌಚಾಲಯಗಳಿಲ್ಲದ ಕಾರಣ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿವಾಸಿಗಳು ತಿಳಿಸಿದರು. ನೀರು, ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆಗಳು ಸಮರ್ಪಕವಾಗಿ ಮಾಡುತ್ತಿಲ್ಲ. ಕೊಳೆಗೇರಿ ನಿವಾಸಿಗಳಿಗಾಗಿ 500 ನೂರು ಮನೆಗಳ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿತ್ತು. ಈ ಮನೆಗಳ ನಿರ್ಮಾಣ ಗುತ್ತಿಗೆ ಪಡೆದವರಿಗೆ ಮತ್ತೆ 2,770 ಮನೆಗಳನ್ನು ನಿರ್ಮಾಣ ಮಾಡುವುದಕ್ಕೆ ಗುತ್ತಿಗೆ ನೀಡಲಾಗಿದೆ. ಮೊದಲಿನ 500 ಮನೆಗಳ ನಿರ್ಮಾಣವೇ ಪೂರ್ಣಗೊಂಡಿಲ್ಲ ಎನ್ನುತ್ತಿದ್ದಾರೆ ಜನರು.

ರಾಯಚೂರು; ಕೃಷ್ಣಾ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತದ ಎಚ್ಚರಿಕೆರಾಯಚೂರು; ಕೃಷ್ಣಾ ನದಿ ಪಾತ್ರದ ಜನರಿಗೆ ಜಿಲ್ಲಾಡಳಿತದ ಎಚ್ಚರಿಕೆ

ರಸ್ತೆ, ಚರಂಡಿ ನಿರ್ಮಾಣಕ್ಕೆ ಕೊಳೆಗೇರಿ ನಿವಾಸಿಗಳ ಬೇಡಿಕೆ

ರಸ್ತೆ, ಚರಂಡಿ ನಿರ್ಮಾಣಕ್ಕೆ ಕೊಳೆಗೇರಿ ನಿವಾಸಿಗಳ ಬೇಡಿಕೆ

ಲಿಂಗಸೂಗೂರು ತಾಲ್ಲೂಕಿನ ಸ್ಥಳೀಯ ಪುರಸಭೆ ವ್ಯಾಪ್ತಿ ಪ್ರದೇಶದಲ್ಲಿ ಗುಡಿಸಲು ಸೌಲಭ್ಯ ರಹಿತ ಪ್ರದೇಶ ಅನಕ್ಷರತೆ ಶಾಪದಲ್ಲಿ ಬದುಕು ಕಟ್ಟಿಕೊಂಡ ಕೊಳಚೆ ನಿವಾಸಿಗಳಿಗೆ ವಿಶೇಷ ಯೋಜನೆಗಳಡಿ ಸೌಲಭ್ಯ ಕಲ್ಪಿಸದೆ ಹೋಗಿರುವುದು ಆಡಳಿತ ವ್ಯವಸ್ಥೆ ನಿರ್ಲಕ್ಷಕ್ಕೆ ಕೈ ಗನ್ನಡಿಯಾಗಿದೆ. ಪುರಸಭೆಯ ವ್ಯಾಪ್ತಿಯ ಕರಡಕಲ್ಲ 01, ಲಿಂಗಸೂಗೂರು 02, ಕಸಬಾ ಲಿಂಗಸೂಗೂರು ಕೆಲ ವಾರ್ಡ್ಗಳಲ್ಲಿ 600 ರಿಂದ 700 ಜನಸಂಖ್ಯೆ ಹೊಂದಿರುವ ಪ್ರದೇಶಗಳನ್ನು ಕೊಳೆಗೇರಿಗಳೆಂದು ಗುರುತಿಸಲಾಗಿತ್ತು. ಇದುವರೆಗೂ ಸಾಮಾನ್ಯ ವಾರ್ಡ್ ಗಳಿಗೆ ನೀಡಿದ ಸೌಲಭ್ಯಗಳು ಈ ಪ್ರದೇಶಗಳಿಗೆ ಪೂರೈಸದಿರುವುದು ವಾರ್ಡ್ ಸಂಖ್ಯೆ 5 ಮತ್ತು ವಾರ್ಡ್ ಸಂಖ್ಯೆ 10ಕ್ಕೆ ಸಂಪರ್ಕಿಸುವ ಸೇತುವೆ ದುಃಸ್ಥಿತಿಗೆ ತಲುಪಿರುವುದು ನಿರ್ಲಕ್ಷಕ್ಕೆ ನಿದರ್ಶನವಾಗಿದೆ. ಕೊಳಚೆ ನಿವಾಸಿಗಳ ಮನೆಗಳ ಹಂಚಿಕೆ ಮಾಡುವುದಾಗಿ ಮೂರು ದಶಕಗಳಿಂದ ಭರವಸೆ ನೀಡುತ್ತ ಬಂದಿರುವ ಆಡಳಿತ ವ್ಯವಸ್ಥೆ ಇಂದಿಗೂ ಹಕ್ಕುಪತ್ರ ಹಂಚಿಲ್ಲ. ಮುಳ್ಳು ಕಂಟಿ ಬೆಳೆದ ರಸ್ತೆಗಳು ಚರಂಡಿಗಳಿಲ್ಲದ ಸಂಗ್ರಹಗೊಂಡಿರುವ ರಸ್ತೆಗಳ ಮಧ್ಯೆಯೇ ತಿರುಗಾಟ ಸೇರಿದಂತೆ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿದೆ. ಕೊಳಚೆ ಪ್ರದೇಶದ ಜನತೆಗೆ ಶುದ್ಧ ಕುಡಿವ ನೀರು, ಶಿಕ್ಷಣ, ಆರೋಗ್ಯ ರಕ್ಷಣೆ, ರಸ್ತೆಗಳ ಅಭಿವೃದ್ಧಿ ಚರಂಡಿ ನಿರ್ಮಾಣಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸುತ್ತ ಬಂದಿದ್ದೇವೆ. ಇದೂವರೆಗೂ ಸ್ಥಳೀಯ ಸಂಸ್ಥೆ ಮತ್ತು ಚುನಾಯಿತ ಜನಪ್ರತಿನಿಧಿಗಳು ಸ್ಪಂದಿಸಿಲ್ಲ ಎಂದು ಅಲ್ಲಿನ ನಿವಾಸಿಗಳ ಆರೋಪಗಳು ಕೇಳಿ ಬಂದವು.

ಮುಂದಿನ ತಿಂಗಳು ನಿವೇಶನ ಹಕ್ಕುಪತ್ರ ಹಂಚಿಕೆಗೆ ಸಿದ್ಧತೆ: ಪುರಸಭೆ ಅಧಿಕಾರಿ

ಮುಂದಿನ ತಿಂಗಳು ನಿವೇಶನ ಹಕ್ಕುಪತ್ರ ಹಂಚಿಕೆಗೆ ಸಿದ್ಧತೆ: ಪುರಸಭೆ ಅಧಿಕಾರಿ

ಪುರಸಭೆ ವ್ಯಾಪ್ತಿಯಲ್ಲಿ ಸದ್ಯ ಐದು ಪ್ರದೇಶಗಳನ್ನು ಕೊಳಚೆ ಪ್ರದೇಶ ಎಂದು ಘೋಷಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇನ್ನೂ ಐದು ಪ್ರದೇಶಗಳನ್ನು ಕೊಳಚೆ ಪ್ರದೇಶ ಎಂದು ಘೋಷಿಸಲು ಚಿಂತನೆ ನಡೆದಿದೆ. ಮುಂದಿನ ತಿಂಗಳು ನಿವೇಶನ ಹಕ್ಕುಪತ್ರ ಹಂಚಿಕೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಲಿಂಗಸೂಗೂರು ಪುರಸಭೆ ಮುಖ್ಯ ಅಧಿಕಾರಿ ಜಗನ್ನಾಥ ಹೇಳಿದರು.

ಮಾನ್ವಿ ಪಟ್ಟಣದ ಏಳು ವಾರ್ಡ್‌ಗಳು ಘೋಷಿತ ಕೊಳಚೆ ಪ್ರದೇಶಗಳಾಗಿವೆ. ಹಿಂದಿನ ಸಮಿಶ್ರ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿಯಾಗಿ 4 ವಾರ್ಡ್‌ಗಳನ್ನು ಕೊಳಚೆ ಪ್ರದೇಶಗಳೆಂದು ಗುರುತಿಸಲಾಗಿದ್ದರೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಕೊಳಚೆ ಪ್ರದೇಶಗಳು ಮೂಲಸೌಕರ್ಯಗಳಿಂದ ವಂಚಿತಗೊಂಡಿದ್ದು ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. 4 ವರ್ಷಗಳ ಹಿಂದೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕೊಳಚೆ ಪ್ರದೇಶಗಳ ನಿವಾಸಿಗಳಿಗೆ 250 ಆಶ್ರಯ ಮನೆಗಳು ಮಂಜೂರಾಗಿದ್ದವು. ಆದರೆ, ಇದೂವರೆಗೂ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿಲ್ಲ ಈ ಕುರಿತು ಫಲಾನುಭವಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಕೊಳಚೆ ಪ್ರದೇಶಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರಿನ ಪೂರೈಕೆ ಒಳಚರಂಡಿ ಹಾಗೂ ಶೌಚಾಲಯ ವ್ಯವಸ್ಥೆ ಇಲ್ಲ. ಇಂದಿರಾ ನಗರದ ವಾರ್ಡ್ ನಲ್ಲಿ ನಿರ್ಮಿಸಿರುವ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಇಲ್ಲದೆ ಹಲವು ವರ್ಷಗಳಿಂದ ನಿರುಪಯುಕ್ತವಾಗಿದೆ. ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯ ಕಲ್ಪಿಸುವುದು ಸೇರಿದಂತೆ ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಪುರಸಭೆಯ ಆಡಳಿತ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಮಾನ್ವಿ ಪುರಸಭೆ ಮುಖ್ಯ ಅಧಿಕಾರಿ ಗಂಗಾಧರ

ಮಾನ್ವಿ ಪುರಸಭೆ ಮುಖ್ಯ ಅಧಿಕಾರಿ ಗಂಗಾಧರ

ಕೊಳಚೆ ಪ್ರದೇಶಗಳಲ್ಲಿ ಸ್ವಚ್ಛತೆ , ಪ್ರತಿ ಮನೆಗೆ ನೀರಿನ ಪೂರೈಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಆರಂಭದಲ್ಲಿ ಇಂದಿರಾ ನಗರ ಪ್ರದೇಶದಲ್ಲಿ ಸ್ವಚ್ಛತೆ ನೈರ್ಮಲ್ಯ ಕುರಿತು ಜನ ಜಾಗೃತಿ ಮೂಡಿಸುವ ಮೂಲಕ ಮಾದರಿ ಬಡಾವಣೆಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾನ್ವಿ ಪುರಸಭೆ ಮುಖ್ಯ ಅಧಿಕಾರಿ ಗಂಗಾಧರ ಹೇಳಿದರು.

ಸಿಂಧನೂರು ನಗರ ವ್ಯಾಪ್ತಿಯಲ್ಲಿ ಎಂಟು ಕೊಳಚೆ ಪ್ರದೇಶಗಳಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿದ್ದು ಅಲ್ಲಿನ ನಿವಾಸಿಗಳು ಪರದಾಡುವಂತಾಗಿದೆ. ವಾರ್ಡ್ ಸಂಖ್ಯೆ 2 ರ ಧೋಭಿಗಲ್ಲಿ ವಾರ್ಡ್ ಸಂಖ್ಯೆ10ರ ಹೆಗ್ಗಾಪುರ ಓಣಿ, ವಆರ್ಡ್ ಸಂಖ್ಯೆ 14ರ ಗಂಗಾನಗರ, ವಾರ್ಡ್ ಸಂಖ್ಯೆ 25ರ ಜನತಾ ಕಾಲೊನಿ, ಎ.ಕೆ.ಗೋಪಾಲನಗರ, ಇಂದಿರಾನಗರ, ಮಹಿಬೂಬಿಯ ಕಾಲೋನಿಯ ಸುಟ್ಟಿ ಏರಿಯಾ ಪಿಡಬ್ಲ್ಯೂಡಿ ಕ್ಯಾಂಪ್‌ನ ಸುಂದರಯನಗರ ಕೊಳಚೆ ಪ್ರದೇಶಗಳಾಗಿದ್ದು ಇವುಗಳಲ್ಲಿ ಸುಮಾರು 3 ಸಾವಿರ ಜನ ವಾಸಿಸುತ್ತಿದ್ದಾರೆ. ಆದರೆ ಈ ಓಣಿಗಳಲ್ಲಿ ಶೆಡ್ ಹಾಕಿಕೊಂಡೇ ವಾಸಿಸುತ್ತಿದ್ದಾರೆ. ಸಮರ್ಪಕವಾಗಿ ರಸ್ತೆ ಇಲ್ಲ, ಶುದ್ಧ ಕುಡಿಯುವ ನೀರಿಲ್ಲ , ಶೌಚಾಲಯ ನಿರ್ವಹಣೆ ಇಲ್ಲದೆ ಅಸ್ಪಚ್ಛತೆಯ ತಾಣವಾಗಿದೆ. ಎಲ್ಲೆಡೆ ಕಸದ ರಾಶಿ ಬಿದ್ದು ದುರ್ನಾತ ಬೀರುವ ಪ್ರದೇಶವಾಗಿದೆ. ಚರಂಡಿಗಳ ಸ್ವಚ್ಛತೆ ಮಾಯವಾಗಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಬೇಕಿದೆ.

English summary
Raichur City Municipal Council Not Giving Ownership Letter to Slum People; Slum People planning to protest against City Municipal Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X