Hatti Gold Mines: ಆಗಸ್ಟ್‌ನಲ್ಲಿ 100 ಕೆ.ಜಿ.ಗಿಂತ ಹೆಚ್ಚು ಚಿನ್ನ ಉತ್ಪಾದನೆ, ಹಟ್ಟಿ ಚಿನ್ನದ ಗಣಿಯ ವಿಶೇಷ ಸಾಧನೆ ಇದು

ರಾಯಚೂರು, ಸೆಪ್ಟೆಂಬರ್, 09: ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸರ್ಕಾರಿ ಸ್ವಾಮ್ಯದ ಹಟ್ಟಿಚಿನ್ನದ ಕಂಪನಿ ಪ್ರಸಕ್ತ ವರ್ಷದ ಆಗಸ್ಟ್ ತಿಂಗಳಿನಲ್ಲಿ 100 ಕೆ.ಜಿ.ಗಿಂತ ಹೆಚ್ಚು ಚಿನ್ನ ಉತ್ಪಾದನೆ ಮಾಡುವ ಮೂಲಕ ವಿಶೇಷ ಸಾಧನೆ ದಾಖಲಿಸಿದೆ.

ಆಗಸ್ಟ್ ತಿಂಗಳೊಂದರಲ್ಲಿ 48,914 ಮೆಟ್ರಿಕ್ ಟನ್ ಅದಿರು ಸಂಸ್ಕರಿಸಿ, 110.600 ಕೆ.ಜಿ.ಚಿನ್ನ ಉತ್ಪಾದಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜುಲೈವರೆಗೆ ಮಾಸಿಕ ಸರಾಸರಿ ಚಿನ್ನ ಉತ್ಪಾದನೆ 100 ಕೆ.ಜಿ.ದಾಟಿರಲಿಲ್ಲ. ಏಪ್ರಿಲ್‌ನಲ್ಲಿ 98 ಕೆ.ಜಿ., ಮೇ ನಲ್ಲಿ 94 ಕೆ.ಜಿ., ಜೂನ್‌ನಲ್ಲಿ 98 ಕೆ.ಜಿ. ಹಾಗೂ ಜುಲೈನಲ್ಲಿ 99 ಕೆ.ಜಿ. ಚಿನ್ನ ಉತ್ಪಾದಿಸಲಾಗಿತ್ತು.

More than 100 kg gold production in August by hutti gold mines company

2023-24ನೇ ಸಾಲಿನಲ್ಲಿ 1,800 ಕೆ.ಜಿ. ಚಿನ್ನ ಉತ್ಪಾದನೆ ಗುರಿಯಿದ್ದು, 5 ತಿಂಗಳಲ್ಲಿ 501.865 ಕೆ.ಜಿ. ಉತ್ಪಾದನೆ ಸಾಧಿಸಲಾಗಿದೆ. ಉತ್ಪಾದನೆ ಹೆಚ್ಚಿಸಲು ಗಣಿ ಕಂಪನಿ ನಾನಾ ಅಭಿವೃದ್ಧಿ, ಆಧುನಿಕ ಸಲಕರಣೆಗಳ ಅಳವಡಿಕೆಗೆ ಮುಂದಾಗಿದೆ. 6 ಮೀಟರ್ ಸುತ್ತಳತೆ ಹಾಗೂ 900 ಮೀಟರ್ ಆಳದ ನ್ಯೂ ಸರ್ಕ್ಯೂಲರ್ ಶಾಫ್ಟ್ ಹೊಸ ಭರವಸೆ ಮೂಡಿಸಿದೆ.

ಶಾಫ್ಟ್‌ನ ಕೇಜ್ ಮೂಲಕ ಒಂದೇ ಸಲಕ್ಕೆ ನೂರು ಕಾರ್ಮಿಕರು ಗಣಿಯ ಒಳಗಡೆ ಹೋಗಿ ಬರಲು ಅನುಕೂಲವಾಗಿದೆ. ಹೆಚ್ಚೆಚ್ಚು ಅದಿರು ಹೊರ ತೆಗೆಯಲು ಉಪಯುಕ್ತವಾಗಿದೆ. ಅದಿರು ಸಂಸ್ಕರಣೆಯ ಹೊಸ ಸಾಣ್ ಮತ್ತು ಬಾಲ್ ಮಿಲ್ ಸಂಸ್ಕರಣೆಗೆ ಸಿದ್ಧವಾಗಿದೆ. ಸದ್ಯ ಟ್ರಯಲ್ ನಡೆಯುತ್ತಿದೆ.

ಅಕ್ಟೋಬರ್‌ನಿಂದ ಪೂರ್ಣ ಪ್ರಮಾಣದಲ್ಲಿ ಅದಿರು ಸಂಸ್ಕರಣೆ ನಡೆಯಲಿದೆ. ನಿತ್ಯ 3 ಸಾವಿರ ಮೆಟ್ರಿಕ್ ಟನ್ ಅದಿರು ಸಂಸ್ಕರಿಸುವುದರಿಂದ ಚಿನ್ನ ಉತ್ಪಾದನೆಯಲ್ಲಿ ಹೆಚ್ಚಳವಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ ಬಹದ್ದೂರ್ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+