ಲಿಂಗಸುಗೂರು:ಕುಕ್ಕುಟ ಉದ್ಯಮಕ್ಕೆ ತಟ್ಟಿದ ಬಿಸಿಲಿನ ತಾಪದ ಬಿಸಿ, ಬೆಲೆ ಹೆಚ್ಚಳಕ್ಕೆ ತಗ್ಗಿದ ವ್ಯಾಪಾರ
ರಾಯಚೂರು, ಜೂನ್ 13: ಲಿಂಗಸುಗೂರು ಪಟ್ಟಣದಲ್ಲಿ ಮೊಟ್ಟೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿಯಲ್ಲಿ ಮೊಟ್ಟೆ ದರ ಏರಿಕೆಯಿಂದ ಮೊಟ್ಟೆ ಪ್ರಿಯರಿಗೆ ಭಾರಿ ಸಂಕಷ್ಟ ಎದುರಾಗಿದೆ. ಆದರೆ ಇಷ್ಟಕ್ಕೆಲ್ಲಾ ಕಾರಣ ಬಿಸಿಲಿನ ತಾಪ. ತಾಪಮಾನ ಹೆಚ್ಚಳದಿಂದ ಮೊಟ್ಟೆಯ ದರ ಏರಿಕೆಗೆ ಕಾರಣವಾಗಿದೆ ಎಂದು ಪಟ್ಟಣದ ಮೊಟ್ಟೆ ವ್ಯಾಪಾರಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಜನರು ಪ್ರತಿ ನಿತ್ಯ ಮೊಟ್ಟೆ ಮೇಲೆ ಅವಲಂಬಿತರಾಗಿದ್ದಾರೆ. ಏಕೆಂದರೆ ಕಲ್ಯಾಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಅದರಲ್ಲೂ ರಾಯಚೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂತಹ ಮಕ್ಕಳಿಗೆ ಪ್ರತಿನಿತ್ಯ ಮೊಟ್ಟೆ ಕೊಟ್ಟರೆ ಅಪೌಷ್ಠಿಕತೆ ನಿವಾರಣೆಗೆ ಸಹಕಾರಿಯಾಗುತ್ತದೆ. ಜೊತೆಗೆ ವೃದ್ಧರು ರೋಗಿಗಳು ಕೂಡ ಮೊಟ್ಟೆ ತಿನ್ನುವುದು ಒಳ್ಳೆಯದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಇಂತಹ ಸಂದರ್ಭದಲ್ಲಿ ಮೊಟ್ಟೆ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ.

ಮೊಟ್ಟೆ ಉತ್ಪಾದನೆಯಲ್ಲಿಶೇಕಡಾ 15ರಿಂದ 20ರಷ್ಟು ಕುಂಠಿತಗೊಂಡಿದ್ದು, ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ಬಿಸಿಲು ತಾಪಮಾನದ ಹೆಚ್ಚಳದಿಂದ ಕುಕ್ಕುಟ ಉದ್ಯಮದ ಮೇಲೆ ಭಾರಿ ಪರಿಣಾಮ ಬೀರಿದೆ. ಕಾರಣ ಬೀಸಿ ಗಾಳಿ ತಾಪಮಾನ ಏರಿಕೆಯಿಂದ ಕೋಳಿಗಳಿಗೆ ರೋಗ ಭಾದೆ ಹೆಚ್ಚಾಗಿ ಮೊಟ್ಟೆ ಉತ್ಪಾದನೆ ಇಳಿಕೆಯಾಗಿದೆ. ಹೀಗಾಗಿ ಮೊಟ್ಟೆ ವ್ಯಾಪಾರ ವಹಿವಾಟು ನಡೆಸುವ ಅಂಗಡಿಯಲ್ಲಿ ಮೊಟ್ಟೆ 5.65 ರೂಪಾಯಿ ಒಂದು ಮೊಟ್ಟೆಗೆ ದರ ನಿಗದಿಯಾಗಿದೆ. ಮತ್ತು ಲಿಂಗಸುಗೂರು ತಾಲೂಕಿನಲ್ಲಿ ಚಿಲ್ಲರೆ ದರ 6.50 ಪೈಸೆಯಂತೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ.
ಗ್ರಾಹಕರಿಲ್ಲದೆ ಮೊಟ್ಟೆ ಅಂಗಡಿ ಖಾಲಿ..ಖಾಲಿ
ಗ್ರಾಹಕರು ಇಲ್ಲದೇ ಖಾಲಿ ಖಾಲಿ ಇರುವ ದೃಶ್ಯ ಲಿಂಗಸುಗೂರು ನಗರದ ಅಂಗಡಿಯಲ್ಲಿ ಮೊಟ್ಟೆ ಕಂಡು ಬಂದಿದೆ. ಬಹುತೇಕವಾಗಿ ಶಾಲಾ ಮಕ್ಕಳಿಗೆ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೊಟ್ಟೆ ಕೊಡುವುದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಸದ್ಯ ಮೊಟ್ಟೆ ಯೋಜನೆ ಉಪಯುಕ್ತವಾಗಿದೆ ಆದರೆ ಮೊಟ್ಟೆ ಬೆಲೆ ಏರಿಕೆಯಿಂದ ಬಹುತೇಕ ವಿದ್ಯಾರ್ಥಿಗಳು ಮೊಟ್ಟೆ ವಂಚಿತರಾಗಿದ್ದಾರೆ.
ಕೋಳಿ ಸಾಕಾಣಿಕೆ ಸ್ಥಗಿತ ದರ ಹೆಚ್ಚಳ
ಕೋಳಿ ದರ ಏರಿಕೆಯಿಂದ ಗ್ರಾಹಕರ ಮೇಲೆ ಹೊಡೆತ ಬಿದ್ದಿದೆ. ಕೋಳಿ ಮಾಂಸದ ದುಬಾರಿ ಬೆಲೆಯನ್ನು ಕೇಳಿದ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದು, ಪಟ್ಟಣದ ಚಿಕನ್ ಅಂಗಡಿಗಳು ಬಣಗುಡುಗತ್ತಿವೆ. ಕೋಳಿ ಸಾಕಾಣಿಕೆ ಸ್ಥಗಿತದಿಂದ ಚಿಕನ್ ಮಾಂಸ ದರ ಹೆಚ್ಚಳವಾಗಿದೆ ಎಂದು ಚಿಕನ್ ಅಂಗಡಿ ಮಾಲೀಕರು ಹೇಳಿದ್ದಾರೆ.
450 ರೂಪಾಯಿಯಿಂದ 470ವರಗೆ ಚಿಕನ್ ಮಾಂಸ ಮಾರಾಟ ಮಾಡಲಾಗುತ್ತಿದೆ ಬೇಸಿಗೆಯಲ್ಲಿ ಕೋಳಿಗಳು ಆಹಾರ ತಿನ್ನುವುದು ಕಡಿಮೆ, ಬದಲಿಗೆ ನೀರು ಹೆಚ್ಚು ಕುಡಿಯುತ್ತವೆ. ಇದರಿಂದ ಕೋಳಿಗಳಲ್ಲಿ ಪುಷ್ಟಿ ಕಡಿಮೆಯಾಗಿ ಮೊಟ್ಟೆ ಇಡುವುದು ಕಡಿಮೆಯಾಗಿದೆ ಮತ್ತು ಇದರ ಜೊತೆಗೆ ಇತ್ತೀಚಿಗೆ ಸಾರಿಗೆ ದರ ಕೂಡ ದುಬಾರಿಯಾಗಿದೆ. ಇದರಿಂದಾಗಿ ಮೊಟ್ಟೆ ದರವು ಕೂಡ 50ರಿಂದ 60ಪೈಸೆ ಏರಿಕೆಯಿಂದ ಗ್ರಾಹಕರ ಮೇಲೆ ಹೊಡೆತ ಬಿದ್ದಿದೆ.
ಕೋಳಿ ಸಾಕಾಣಿಕೆ ಬಲು ದುಬಾರಿ
ಜಿಲ್ಲೆಯಲ್ಲಿ ಪ್ರಸ್ತುತ ವಿದ್ಯಾಮಾನಗಳಲ್ಲಿ ಕೋಳಿ ಸಾಕಾಣಿಕೆ ಬಲು ದುಬಾರಿಯಾಗಿದೆ. ಏಕೆಂದರೆ ಕೋಳಿ ಆಹಾರವಾದ ಜೋಳ, ಕಡಲೆ, ಕಾಯಿ, ಅಕ್ಕಿ, ತೌಡು ಸೇರಿದಂತೆ ಇತರೆ ಆಹಾರ ಬೆಲೆ ಏರಿಕೆಯಿಂದ ಹಾಗೂ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಮತ್ತು ವಿದ್ಯುತ್ ನಿರ್ವಹಣೆ ವೆಚ್ಚ ದುಬಾರಿಯಾಗಿರುವದರಿಂದ ಕೋಳಿ ಸಾಕಾಣಿಕೆದಾರಿರಗೆ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಕುಕ್ಕುಟ ಉದ್ಯಮದಕ್ಕೆ ಉತ್ತೇಜನ ನೀಡಿ ಕೋಳಿ ಉದ್ದಿಮೆಗೆ ಸಬ್ಸಿಡಿ ಸಹಿತ ಅನುದಾನ ಬಿಡುಗಡೆ ಮಾಡಲು ಮುಂದಾಗಬೇಕು ಎಂದು ಲಿಂಗಸುಗೂರು ಸ್ಥಳೀಯ ಕುಕ್ಕುಟ ಉದ್ಯಮದ ವ್ಯಾಪಾರಿಗಳು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.












Click it and Unblock the Notifications