Raichur Rural Elections: ರಾಯಚೂರು ಗ್ರಾಮೀಣದಲ್ಲಿ ಸಂಪ್ರದಾಯ ಮುರೀತಾರಾ ಬಸನಗೌಡ ದದ್ದಲ್? ಈ ಬಾರಿ ಯಾರಿಗೆ ಗೆಲುವು?
ರಾಯಚೂರು ಗ್ರಾಮೀಣ ವಿಧಾನಸಭಾ ಕ್ಷೇತ್ರ ರಾಯಚೂರಿನ 7 ಕ್ಷೇತ್ರಗಳ ಪೈಕಿ ಪ್ರಮುಖವಾದ ಕ್ಷೇತ್ರ. ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಇಲ್ಲಿ ರಾಜ್ಯಕ್ಕೆ ಬೆಳಕು ನೀಡುವ ಆರ್‌ಟಿಪಿಎಸ್ ಶಾಖೋತ್ಪನ್ನ ಘಟಕಗಳು ಇವೆ. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳು ಎಡ - ಬಲಕ್ಕಿವೆ. ಎರಡು ಪ್ರಮುಖ ನದಿಗಳು ಕ್ಷೇತ್ರದಲ್ಲಿ ಹರಿಯುವುದರಿಂದ ಇಲ್ಲಿ ಭತ್ತವನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಅದಲ್ಲದೇ ಶೇ.50ರಷ್ಟು ಪ್ರದೇಶ ಒಣಭೂಮಿ ಇದ್ದು, ಒಣ ಬೇಸಾಯ ಕೂಡ ಇದೆ.
ಪ್ರಮುಖ ಯಾತ್ರಿ ಸ್ಥಳ ಮಂತ್ರಾಲಯ ಕೂಡ ಇದೇ ಕ್ಷೇತ್ರಕ್ಕೆ ಹೊಂದಿಕೊಂಡಿದೆ. ಕೃಷ್ಣಾ ನದಿಯಿಂದ ತುಂಗಭದ್ರಾ ನದಿವರೆಗೂ ಕ್ಷೇತ್ರ ಚಾಚಿಕೊಂಡಿದ್ದು, ತೆಲಂಗಾಣದ ಗಡಿಯನ್ನು ಹಂಚಿಕೊಂಡಿರುವ ಕ್ಷೇತ್ರದಲ್ಲಿ ತೆಲುಗು ಭಾಷಿಕರೇ ಹೆಚ್ಚಿದ್ದು, ಇಲ್ಲಿ ಉರ್ದು ಮಿಶ್ರಿತ ಕನ್ನಡ ಕೂಡ ನಿಮ್ಮ ಕಿವಿಗೆ ಕೇಳುತ್ತದೆ. ರಾಯಚೂರು ನಗರ ವಿಧಾನಸಭಾ ಕ್ಷೇತ್ರವನ್ನು ಸಂಪೂರ್ಣವಾಗಿ ಸುತ್ತುವರಿದುಕೊಂಡಿದೆ.

ಇಲ್ಲಿನ ಮತದಾರರು ಪ್ರತಿ ಚುನಾವಣೆಯಲ್ಲಿಯೂ ಬದಲಾವಣೆ ಬಯಸುತ್ತಾರೆ. ಇಲ್ಲಿ ಕಳೆದ ನಾಲ್ಕು ದಶಕಗಳಿಂದ ಸತತವಾಗಿ ಎರಡು ಬಾರಿ ಯಾರನ್ನೂ ಮತದಾರರು ಗೆಲ್ಲಿಸಿಲ್ಲ. ತುಂಗಭದ್ರಾ, ಕೃಷ್ಣಾ ನದಿಗಳು ಎಡ-ಬಲಕ್ಕಿದ್ದರೂ ಕುಡಿಯುವ ನೀರಿನ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ತುಂಗಭದ್ರಾ ಎಡದಂಡೆ ಕಾಲುವೆಯ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದ ಸಮಸ್ಯೆ ಬಗೆಹರಿದಿಲ್ಲ, ಆರ್‌ಟಿಪಿಎಸ್ ಮೂಲಕ ಇಡೀ ರಾಜ್ಯಕ್ಕೆ ಕರೆಂಟ್ ಕೊಟ್ಟರೂ ಇಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ಇದೆ ಎನ್ನುವ ಕೊರಗು ಕ್ಷೇತ್ರಾದ್ಯಂತ ಹರಡಿದೆ. ಇಂತಹ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪೈಪೋಟಿ ಇದೆ.
ಕ್ಷೇತ್ರದ ರಾಜಕೀಯ ಹಿನ್ನೆಲೆ!
ಇದು ಮೊದಲು ರಾಯಚೂರು-2 ಕ್ಷೇತ್ರವಾಗಿತ್ತು, ನಂತರ ಕಲ್ಮಲ ಕ್ಷೇತ್ರ ಎಂಬ ಹೆಸರು ಪಡೆಯಿತು. ಅದಾದ ಬಳಿಕ ರಾಯಚೂರು ಗ್ರಾಮೀಣ ಎಂದು ಬದಲಿಸಲಾಗಿದೆ. 2008ರಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ರಾಯಚೂರು ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. 2008ರಲ್ಲಿ ಕಾಂಗ್ರೆಸ್‌ನ ರಾಜಾ ರಾಯಪ್ಪ ನಾಯಕ ಗೆಲುವು ಸಾಧಿಸಿದ್ದರೆ, 2013ರಲ್ಲಿ ಬಿಜೆಪಿ ನಾಯಕ ಕೆ ಶಿವನಗೌಡ ನಾಯಕ ಅವರ ಆಪ್ತ ತಿಪ್ಪರಾಜು ಬಿಜೆಪಿಯಿಂದ ಆಯ್ಕೆಯಾಗಿದ್ದರು. 2018ರಲ್ಲಿ ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ವಶವಾಗಿದ್ದು, ಬಸನಗೌಡ ದದ್ದಲ್ ಹಾಲಿ ಶಾಸಕರಿದ್ದಾರೆ.

ಇಲ್ಲಿ ಒಂದು ಬಾರಿ ಗೆದ್ದವರು ಸತತವಾಗಿ ಎರಡು ಬಾರಿ ಗೆದ್ದ ಉದಾಹರಣೆಗಳು ಬಹಳ ಕಡಿಮೆ. 1978 ಮತ್ತು 1983ರಲ್ಲಿ ಸುಧೀಂದ್ರ ರಾವ್ ಕಸಬೆ ಎನ್ನುವವರು ಸತತವಾಗಿ ಎರಡು ಬಾರಿ ಗೆದ್ದಿದ್ದೆ ಕೊನೆ. ಆ ಬಳಿಕ ಯಾರೂ ಕೂಡ ನಿರಂತರ ಎರಡು ಬಾರಿ ಗೆದ್ದಿಲ್ಲ. ಸದ್ಯದ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ 1999ರಲ್ಲಿ ಇದೇ ಕ್ಷೇತ್ರದಿಂದ ಗೆದ್ದು ಸಚಿವರು ಕೂಡ ಆಗಿದ್ದರು.
2018ರಲ್ಲಿ ಕಾಂಗ್ರೆಸ್‌ನ ಬಸನಗೌಡ ದದ್ದಲ್ 66,656 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ತಿಪ್ಪರಾಜು ಹವಾಲ್ದಾರ್ 56,692 ಮತಗಳನ್ನು ಪಡೆದಿದ್ದರು. ಈ ಮೂಲಕ ಸುಮಾರು 10 ಸಾವಿರ ಮತಗಳ ಅಂತರದಿಂದ ಬಸನಗೌಡ ದದ್ದಲ್ ಗೆಲುವು ಸಾಧಿಸಿದ್ದರು. ಜೆಡಿಎಸ್‌ನ ರವಿಕುಮಾರ್ ಪಾಟೀಲ್ 34,250 ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಈ ಸಲವೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಗೆಲುವಿಗಾಗಿ ಪೈಪೋಟಿ ನಡೆಯಲಿದೆ.
Raichur Rural Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಬಸನಗೌಡ ದದ್ದಲ್ (ಕಾಂಗ್ರೆಸ್ ) | 66,656 | ತಿಪ್ಪರಾಜು (ಬಿಜೆಪಿ ) | 56,692 |
| 2013 | ತಿಪ್ಪರಾಜು (ಬಿಜೆಪಿ) | 50,497 | ರಾಜ ರಾಯಪ್ಪ ನಾಯ್ಕ್ (ಕಾಂಗ್ರೆಸ್ ) | 47,227 |

ಆಕಾಂಕ್ಷಿಗಳು ಯಾರಾರು?
ಈಗಾಗಲೇ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದ್ದು, ಹಾಲಿ ಶಾಸಕ ಬಸನಗೌಡ ದದ್ದಲ್ ಅವರು ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಆಗಿ ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮತ್ತೊಮ್ಮೆ ಸ್ಪರ್ಧೆ ಬಯಸಿದ್ದಾರೆ. ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯನ್ನು ಘೋಷಿಸಿದ್ದು, ಸಣ್ಣ ನರಸಿಂಹ ನಾಯಕ ದಳ ಅಭ್ಯರ್ಥಿಯಾಗಿದ್ದಾರೆ. ಆಪ್ ಕೂಡ ಇಲ್ಲಿ ಸ್ವಲ್ಪ ಸದ್ದು ಮಾಡುತ್ತಿದ್ದು, ಡಾ ಸುಭಾಷ್ ಚಂದ್ರ ಸಂಭಾಜೀ ಎಂಬುವವರು ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ.
ಜಾತಿ ಲೆಕ್ಕಾಚಾರ!
ರಾಯಚೂರು ಗ್ರಾಮೀಣ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಿದ್ದರೂ ಕುರುಬರು, ಗಂಗಾಮತಸ್ಥರು ಕ್ಷೇತ್ರದಲ್ಲಿ ನಿರ್ಣಾಯಕರು. ಲಿಂಗಾಯತರು, ಮುಸ್ಲಿಮರು ನಂತರದ ಸ್ಥಾನದಲ್ಲಿದ್ದಾರೆ. ಫಲಿತಾಂಶದ ಲೆಕ್ಕಾಚಾರ ಬುಡಮೇಲು ಮಾಡಬಲ್ಲ ತಾಕತ್ತು ಪರಿಶಿಷ್ಟ ಜಾತಿಗಿದೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ












Click it and Unblock the Notifications