ವಿಡಿಯೋ: ಪುಣೆಯಲ್ಲಿ ಹೋರ್ಡಿಂಗ್ ಕುಸಿದು ನಾಲ್ವರ ದಾರುಣ ಸಾವು
ಪುಣೆ, ಅಕ್ಟೋಬರ್ 06: ಫ್ಲೆಕ್ಸ್ ಬ್ಯಾನರ್ ಹೋರ್ಡಿಂಗ್ ವೊಂದು ಕುಸಿದು ಬಿದ್ದ ಪರಿಣಾಮ ನಾಲ್ವರು ದಾರುಣ ಸಾವು ಕಂಡ ಘಟನೆ ಪುಣೆಯ ಶಿವಾಜಿ ನಗರ ರೈಲ್ವೇ ನಿಲ್ದಾಣದ ಬಳಿ ನಡೆದಿದೆ.
ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ 10 ಜನರಿಗೆ ಗಾಯವಾಗಿದ್ದು, 8 ವಾಹನಗಳು ಜಖಂಗೊಂಡಿವೆ. ಈ ಕುರಿತು ಹೆಚ್ಚಿನ ತನಿಖೆಗೆ ಆದೇಶಿಸಲಾಗಿದ್ದು, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಸಿಗ್ನಲ್ ವೊಂದರಲ್ಲಿ ವಾಹನಗಳು ನಿಂತಿದ್ದ ಸಮಯದಲ್ಲಿ ಮೇಲಿದ್ದ ಹೋರ್ಡಿಂಗ್ ಕುಸಿದು ಈ ದುರಂತ ಸಂಭವಿಸಿದೆ.
Accident in Pune....One of the massive hoarding supports has collapsed while being removed by the railways.
— AP (@ap_pune) October 5, 2018
Forget safety standards, even common logic is difficult to find here.
They started cutting the roughly 40ft high support from base upwards. pic.twitter.com/FRqYNQVGG8
ಈ ಹೋರ್ಡಿಂಗ್ ನ ಕಂಟ್ರಾಕ್ಟರ್ ಮತ್ತು ಕೆಲಸಗಾರರ ವಿರುದ್ಧ ಬಂಡಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಇತ್ತೀಚೆಗಷ್ಟೇ ದೆಹಲಿಯ ಅಶೊಕ್ ವಿಹಾರ್ ರಸ್ತೆಯಲ್ಲಿ ಮೂರಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ಐವರು ಮೃತಪಟ್ಟ ಘಟನೆ ನಡೆದಿತ್ತು.
ಮಧ್ಯಪ್ರದೇಶದ ಇಂದೋರ್ ನಲ್ಲಿ ಕಳೆದ ಏಪ್ರಿಲ್ ನಲ್ಲಿ ನಡೆದ ಕಟ್ಟಡ ಕುಸಿತದಲ್ಲಿ 10 ಜನ ದುರ್ಮರಣಕ್ಕೀಡಾಗಿದ್ದರು.
{document1}












Click it and Unblock the Notifications