ಕೆಲಸ ಮಾಡುವ ಅಂಗಡಿಯಲ್ಲಿಯೇ 58 ಕೆಜಿ ಚಿನ್ನ ಕದ್ದ ಮ್ಯಾನೇಜರ್
ಔರಂಗಾಬಾದ್, ಜುಲೈ 4: ಸುಮಾರು 58 ಕೆಜಿ ತೂಕದ ಚಿನ್ನಾಭರಣ ಕಳವು ಮಾಡಿರುವ ಆರೋಪದಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನ ಆಭರಣ ಅಂಗಡಿಯೊಂದರ ಮ್ಯಾನೇಜರ್ ಮತ್ತು ಇನ್ನಿಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಔರಂಗಾಬಾದ್‌ನ ವಾಮನ್ ಹರಿ ಪೇಟೆ ಎಂಬ ಪ್ರತಿಷ್ಠಿತ ಆಭರಣ ಮಳಿಗೆಯ ಸಮರ್ಥನಗರದ ಶಾಖೆಯೊಂದರಲ್ಲಿ ಈ ಘಟನೆ ನಡೆದಿದೆ. ಈ ಶೋರೂಂನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಅಂಕುರ್ ರಾಣೆ ಎಂಬಾತ ಲೋಕೇಶ್ ಜೈನ್ ಮತ್ತು ರಾಜೇಂದ್ರ ಜೈನ್ ಎಂಬ ಇಬ್ಬರ ಸಹಾಯದಿಂದ 58 ಕೆಜಿ ತೂಕದ ಆಭರಣ ಕಳವು ಮಾಡಿದ್ದಾನೆ.
ಕ್ರಾಂತಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಎಲ್ಲ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಕಳೆದ ಏಪ್ರಿಲ್‌ನಲ್ಲಿ ಇದೇ ರೀತಿಯ ಪ್ರಕರಣ ಚೆನ್ನೈನಲ್ಲಿ ನಡೆದಿತ್ತು. ನಗರದ ಟಿ. ನಗರ ಪ್ರದೇಶದಲ್ಲಿ ಆಭರಣ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯೇ ಸುಮಾರು 2 ಕೆಜಿ ಚಿನ್ನ ಕದ್ದ ಆರೋಪದಲ್ಲಿ ಬಂಧಿತರಾಗಿದ್ದರು.












Click it and Unblock the Notifications