ಪುಣೆಯಲ್ಲಿ ಅಬ್ಬರಿಸಿದ ವರುಣ; 2 ದಿನ ಆರೆಂಜ್ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ

ಪುಣೆ, ಸೆಪ್ಟೆಂಬರ್ 12: ಭಾನುವಾರ ಪುಣೆ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿದಿದ್ದು, ಹಲವು ಭಾಗಗಳು ಜಲಾವೃತಗೊಂಡಿವೆ. ರಸ್ತೆಗಳು ನದಿಗಳಂತೆ ಹರಿಯುತ್ತಿದ್ದು, ಇದರ ಮಧ್ಯೆ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರಿತಪಿಸುವಂತಾಗಿತ್ತು. ಇನ್ನೊಂದೆಡೆ ಮಳೆ ಹೊಡೆತಕ್ಕೆ ಕೆಲವೆಡೆ ವಾಹನಗಳೇ ಮುಳುಗಡೆಯಾಗಿದ್ದವು.

ಒಂದೇ ದಿನ ಸುರಿದ ಧಾರಾಕಾರ ಮಳೆಯಿಂದಾಗಿ ಹಲವಾರು ಮನೆಗಳು, ಅಂಗಡಿಗಳು ಮತ್ತು ಇತರ ಸಂಸ್ಥೆಗಳು ಜಲಾವೃತಗೊಂಡಿವೆ. 10 ಕಡೆ ಮರ ಬಿದ್ದಿರುವ ಘಟನೆಗಳು ನಡೆದಿದ್ದು, ಯಾವುದೇ ಪ್ರಾಣಹಾನಿಯ ಬಗ್ಗೆ ವರದಿಯಾಗಿಲ್ಲ.

Recommended Video

      Bengaluru Rains: ಮಹಾ ಮಳೆಗೆ ತತ್ತರಿಸಿದ ರೈನ್ ಬೋ ಲೇಔಟ್ ಜನ.. | *Karnataka | OneIndia Kannada

      ''ಚಂದನನಗರ, ಕೊತ್ತೂರು, ಪೌಡ್ ರಸ್ತೆ, ಪಾಷಾಣ, ವನವಾಡಿ, ಬಿಟಿ ಕವಡೆ ರಸ್ತೆ, ಕಾಟ್ರಾಜ್ ಗಾರ್ಡನ್, ಸ್ವರ್ಗೇಟ್ ಜಲಾವೃತಗೊಂಡಿವೆ. ಪಾಶಾನ್, ಕೊಂಡ್ವಾ, ಪುಣೆ ನಿಲ್ದಾಣ ಮತ್ತು ಯೆರವಾಡದಲ್ಲಿ ಮರಗಳು ಧರೆಗುರುಳಿದ ಘಟನೆ ವರದಿಯಾಗಿವೆ. ಪಾಷಾಣದ ಪಂಚಾವತಿಯಲ್ಲಿ ಮರ ಬಿದ್ದು ಎರಡು ವಾಹನಗಳು ಜಖಂಗೊಂಡಿವೆ. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ," ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

      IMD Issues Orange Alert For 2 Days after Heavy Rains Lash Pune

      ಮುಂದಿನ ಎರಡು ದಿನಗಳ ಕಾಲ ಆರೆಂಜ್ ಅಲರ್ಟ್:

      ಭಾರತೀಯ ಹವಾಮಾನ ಇಲಾಖೆಯು ಸಂಜೆ 5:30ರ ಹೊತ್ತಿಗೆ, ಪಾಶನ್ ಮತ್ತು ಮಗರಪಟ್ಟಾದಲ್ಲಿ 55.8 ಮಿಲಿಮೀಟರ್ ಮತ್ತು 55.5 ಮಿಲಿಮೀಟರ್ ಮಳೆಯಾಗಿದೆ. ಮುಂದಿನ ಎರಡು ದಿನಗಳಲ್ಲಿ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ 'ಆರೆಂಜ್' ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+