ಕೋವಿಶೀಲ್ಡ್‌ ಲಸಿಕೆ ರವಾನೆ: ಪುಣೆಯಿಂದ 13 ಪ್ರದೇಶಗಳನ್ನು ಇಂದು ತಲುಪಲಿದೆ

ಪುಣೆ, ಜನವರಿ 12: ದೇಶದಲ್ಲಿ ಜನವರಿ 16 ರಂದು ರಾಷ್ಟ್ರವ್ಯಾಪಿ ವ್ಯಾಕ್ಸಿನೇಷನ್ ಪ್ರಾರಂಭಿಸುವ ಮುನ್ನ, ಕೋವಿಶೀಲ್ಡ್ ಲಸಿಕೆಯನ್ನು ಒಳಗೊಂಡಿರುವ ಮೊದಲ ಸರಕನ್ನು ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಮಂಗಳವಾರ ಮುಂಜಾನೆ ರವಾನಿಸಲಾಗಿದೆ.

ಬಿಗಿ ಭದ್ರತೆಯ ಮಧ್ಯೆ, ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ ಲಸಿಕೆಯ ಮೊದಲ ಸರಕನ್ನು ಹೊತ್ತ ಮೂರು ಟ್ರಕ್‌ಗಳು ಪುಣೆ ವಿಮಾನ ನಿಲ್ದಾಣದ ಕಡೆಗೆ ಸಾಗಿದ್ದು, ಅಲ್ಲಿಂದ ಇಂದು ದೇಶದಾದ್ಯಂತ 13 ಸ್ಥಳಗಳನ್ನು ತಲುಪಲಿದೆ.

''ಪುಣೆ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ದೆಹಲಿಗೆ ತೆರಳಲಿದೆ'' ಎಂದು ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೋವಿಶೀಲ್ಡ್ ಲಸಿಕೆಯ ವಾಯು ಸಾರಿಗೆಯನ್ನು ನಿರ್ವಹಿಸುತ್ತಿರುವ ಲಾಜಿಸ್ಟಿಕ್ಸ್ ತಂಡ ಎಸ್‌ಬಿ ಲಾಜಿಸ್ಟಿಕ್ಸ್ ಸಂದೀಪ್ ಭೋಸಲೆ ಎಎನ್‌ಐಗೆ ತಿಳಿಸಿದ್ದಾರೆ. ಇದರ ನಡುವೆ ಎಲ್ಲಾ ಲಸಿಕೆಗಳನ್ನು ಬೆಳಿಗ್ಗೆ 10ರೊಳಗೆ ರವಾನಿಸಲಾಗುತ್ತದೆ ಎಂದು ಅವರು ಹೇಳಿದರು.

 First Covid-19 Vaccine Consignments To Reach 13 Locations Today

ಒಟ್ಟು ಎಂಟು ವಿಮಾನಗಳು, ಎರಡು ಸರಕು ವಿಮಾನಗಳು ಮತ್ತು ಇತರ ನಿಯಮಿತ ವಾಣಿಜ್ಯ ವಿಮಾನಗಳು ಲಸಿಕೆಗಳನ್ನು ಸಾಗಿಸುತ್ತವೆ ಎಂದು ಅವರು ಹೇಳಿದರು.

ದೆಹಲಿ, ಕರ್ನಾಲ್, ಅಹಮದಾಬಾದ್, ಚಂಡೀಗಡ, ಲಕ್ನೋ, ಚೆನ್ನೈ, ಬೆಂಗಳೂರು, ಹೈದರಾಬಾದ್, ವಿಜಯವಾಡ, ಭುವನೇಶ್ವರ, ಕೋಲ್ಕತಾ ಮತ್ತು ಗುವಾಹಟಿ ಸೇರಿವೆ.

 First Covid-19 Vaccine Consignments To Reach 13 Locations Today

ಇನ್ನು ಲಸಿಕೆಗಳನ್ನು ಹೊಂದಿರುವ ಮೊದಲ ಸರಕು ವಿಮಾನವು ಹೈದರಾಬಾದ್, ವಿಜಯವಾಡ ಮತ್ತು ಭುವನೇಶ್ವರಕ್ಕೆ ರವಾನೆಯಾಗುವುದಾದರೆ, ಎರಡನೇ ಸರಕು ವಿಮಾನ ಕೋಲ್ಕತಾ ಮತ್ತು ಗುವಾಹಟಿಗೆ ಹೋಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+