ಐವರನ್ನು ಬಲಿ ತೆಗೆದುಕೊಂಡ ಬಾವಿ: ಥಾಣೆಯಲ್ಲಿ ಹೃದಯ ವಿದ್ರಾವಕ ಘಟನೆ
ಕಲ್ಯಾಣ್ (ಮಹಾರಾಷ್ಟ್ರ), ನವೆಂಬರ್ 1: ಬಾವಿಯೊಂದನ್ನು ಸ್ವಚ್ಛ ಮಾಡುವ ಕಾರ್ಯ ಐವರನ್ನು ಬಲಿ ತೆಗೆದುಕೊಂಡ ಹೃದಯವಿದ್ರಾವಕ ಘಟನೆ ಗುರುವಾರ ನಡೆದಿದೆ. ಸ್ವಚ್ಛತಾ ಕಾರ್ಯಕ್ಕೆ ತೆರಳಿದ ಕಾರ್ಮಿಕನೊಬ್ಬ ನೀರಿನಲ್ಲಿ ಮುಳುಗಿದರೆ, ರಕ್ಷಣೆಗಾಗಿ ಧಾವಿಸಿದ ನಾಲ್ವರು ಸಹ ಬಲಿಯಾಗಿದ್ದಾರೆ.
ಮಹಾರಾಷ್ಟ್ರದ ಥಾಣೆಯ ಕಲ್ಯಾಣದಲ್ಲಿನ ಭೀಮಾ ಶಂಕರ ದೇವಸ್ಥಾನದ ಆವರಣದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಕಸಕಡ್ಡಿ, ಗಿಡಗಳಿಂದ ತುಂಬಿಕೊಂಡಿದ್ದ ಬಾವಿಯನ್ನು ಸ್ವಚ್ಛಗೊಳಿಸುವ ಸಲುವಾಗಿ ದೇವಸ್ಥಾನದ ಟ್ರಸ್ಟಿ ರಾಹುಲ್ ಗೋಸ್ವಾಮಿ ಕಾರ್ಮಿಕನನ್ನು ಕರೆಯಿಸಿದ್ದರು.
Maharashtra:5 ppl died while cleaning a well in Kalyan, Thane. Additional CP says, “A labourer entered well to clean it&died due to suffocation.2 trustees who went in to rescue the labourer also died inside. 2 fire dept officials who had gone into well also died during rescue op” pic.twitter.com/bzUZmagw42
— ANI (@ANI) 1 November 2018
ಬಾವಿಯೊಳಗೆ ಇಳಿದ ಕಾರ್ಮಿಕ ಮೇಲಕ್ಕೆ ಬಾರದ್ದನ್ನು ಕಂಡ ರಾಹುಲ್ ಗೋಸ್ವಾಮಿ ಆತನಿಗಾಗಿ ಹುಡುಕಾಡಲು ಬಾವಿಯಲ್ಲಿ ಇಳಿದರು. ಆದರೆ, ಅವರೂ ಅದರಲ್ಲಿ ಮುಳುಗಿದರು. ರಾಹುಲ್ ಅವರ ತಂದೆ ಗುಣವಂತ್ ಗೋಸ್ವಾಮಿ ಮಗನ ರಕ್ಷಣೆಗಾಗಿ ಇಳಿದವರು ಸಹ ಸಾವಿಗೀಡಾದರು.
ಮಾಹಿತಿ ದೊರೆತ ಕೂಡಲೇ ಅಗ್ನಿಶಾಮಕ ತಂಡ ಸ್ಥಳಕ್ಕೆ ಧಾವಿಸಿತು. ರಕ್ಷಣಾ ಕಾರ್ಯಾಚರಣೆಗಾಗಿ ಬಾವಿಯೊಳಗೆ ಇಳಿದ ಇಬ್ಬರು ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಮುಳುಗಿ ಹೋದರು.
ಕೊನೆಗೆ ಜಾಗ್ರತೆಯಿಂದ ಕಾರ್ಯಾಚರಣೆ ನಡೆಸಿದ ತಂಡ, ಹರಸಾಹಸಪಟ್ಟು ಐವರ ಮೃತದೇಹಗಳನ್ನು ಹೊರಕ್ಕೆ ತೆಗೆಯುವಲ್ಲಿ ಯಶಸ್ವಿಯಾಯಿತು.

ಈ ಐದೂ ಮಂದಿ ಬಾವಿಯೊಳಗೆ ಅನಿಲ ಅಥವಾ ರಾಸಾಯನಿಕದ ಗಾಳಿ ಸೇವಿಸಿ ಮೃತಪಟ್ಟಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸುತ್ತದೆ ಎಂಬುದಾಗಿ ಪೊಲೀಸ್ ಉಪ ಆಯುಕ್ತ ಸಂಜಯ್ ಶಿಂದೆ ತಿಳಿಸಿದ್ದಾರೆ.












Click it and Unblock the Notifications