ಬಿಹಾರ ಸಿಎಂ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ ಉಪೇಂದ್ರ ಕುಶ್ವಾ

ಪಾಟ್ನಾ, ಫೆಬ್ರವರಿ 06: ಬಿಹಾರ ಸಿಎಂ ನಿತೀಶ್ ಕುಮಾರ್ ನನ್ನ ಕೊಲ್ಲಿಸಲು ಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಲೋಕ ಸಮತಾದಳ ಮುಖ್ಯಸ್ಥ ಉಪೇಂದ್ರ ಕುಶ್ವಾ ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ಲೋಕ ಸಮತಾದಳ ಮುಖ್ಯಸ್ಥ ಉಪೇಂದ್ರ ಕುಶ್ವಾ ಸೇರಿ ಇತರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಳೆದ ವಾರ ಪಾದಯಾತ್ರೆ ಮಾಡಿದ್ದರು ಆ ಸಮಯದಲ್ಲಿ ಪೊಲೀಸ್ ಲಾಠಿ ಪ್ರಹಾರ ನಡೆದಿತ್ತು. ಅದರಲ್ಲಿ ಉಪೇಂದ್ರ ಕುಶ್ವಾ ಗಾಯಗೊಂಡಿದ್ದರು.

ಪಾದಯಾತ್ರೆ ಮೇಲೆ ಲಾಠಿ ಪ್ರಹಾರ ಮಾಡಿದ್ದು ಉದ್ದೇಶಪೂರ್ವಕವಾಗಿ, ಅದು ನನ್ನನ್ನು ಕೊಲ್ಲುವ ಯತ್ನ ಎಂದು ಉಪೇಂದ್ರ ಕುಶ್ವಾ ಇಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನಿತೀಶ್ ಆದೇಶದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅವರ ಗುರಿ ನಾನಾಗಿದ್ದೆ, ಲಾಠಿ ಪ್ರಹಾರ ಕುರಿತು ನ್ಯಾಯಾಲಯದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.

Nitish Kumar Plotted To Kill Me: Upendra Kushwah

ಸಿಎಂ ನಿತೇಶ್ ಕುಮಾರ್ ಅವರ ಆದೇಶದ ಮೇರೆಗೆ ನನ್ನ ಹಾಗೂ 250 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪೇಂದ್ರ ಕುಶ್ವಾ ಹೇಳಿದ್ದಾರೆ.

ನಿತೇಶ್ ಕುಮಾರ್ ಅವರು ನಮ್ಮ ಮೇಲೆ ಹಾಕಿರುವ ಎಫ್‌ಐಆರ್‌ ಅನ್ನು ವಾಪಸ್ ಪಡೆಯದೇ ಇದ್ದರೆ, ಎಫ್‌ಐಆರ್ ದಾಖಲಿಸಿರುವ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಉಪೇಂದ್ರ ಕುಶ್ವಾ ಅವರು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+