ತಂದೆಯನ್ನು ಕೂರಿಸಿ 1200 ಕಿ.ಮೀ ಸೈಕಲ್ ತುಳಿದ ಯುವತಿಗೆ ಇವಾಂಕಾ ಟ್ರಂಪ್ ಮೆಚ್ಚುಗೆ
ಪಾಟ್ನಾ, ಮೇ 23: ಅಪ್ಪನನ್ನು ಕೂರಿಸಿಕೊಂಡು ಸುಮಾರು 1200 ಕಿ.ಮೀ ಸೈಕಲ್ ತುಳಿದಿರುವ ಯುವತಿ ಈಗ ಜಗತ್ತಿನಾದ್ಯಂತ ಖ್ಯಾತಿ ಪಡೆಯುತ್ತಿದ್ದಾಳೆ. ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ಜ್ಯೋತಿ ಕುಮಾರಿ ಮತ್ತು ಆಕೆಯ ತಂದೆ ಬಿಹಾರದಲ್ಲಿರುವ ತಮ್ಮ ಸ್ವಗ್ರಾಮಕ್ಕೆ ಬರಲು ಏಳು ದಿನಗಳು ಸಮಯ ತೆಗೆದುಕೊಂಡಿದ್ದರು.
Recommended Video
ರಾತ್ರಿ-ಹಗಲು ಸೈಕಲ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಆ ಏಳು ದಿನಗಳ ಜರ್ನಿಯಲ್ಲಿ ಯಾವ ಸರ್ಕಾರವೂ, ಯಾವ ಜಿಲ್ಲಾಡಳಿತವೂ, ಯಾವ ಜನನಾಯಕರು ಈ ತಂದೆ-ಮಗಳ ಕಷ್ಟಕ್ಕೆ ಸ್ಪಂದಿಸಿಲಿಲ್ಲ.
ಆದ್ರೀಗ, ಒಬ್ಬೊಬ್ಬರೆ ಜ್ಯೋತಿಯ ಸಾಧನೆಯನ್ನು ಕೊಂಡಾಡುತ್ತಿದ್ದಾರೆ. ಜ್ಯೋತಿ ವಿಚಾರದಲ್ಲಿ ಸಂತಸದ ಸುದ್ದಿ ಏನಪ್ಪಾ ಅಂದ್ರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಗಳು ಇವಾಂಕಾ ಟ್ರಂಪ್ ಈಕೆಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಇದೊಂದು ಸುಂದರ ಪ್ರೀತಿಯ ಸಾಧನೆ
ಅಪ್ಪನನ್ನು ಕೂರಿಸಿಕೊಂಡು 1200 ಕಿ.ಮೀ ಸೈಕಲ್ ತುಳಿದ ಯುವತಿಯ ಸ್ಟೋರಿ ಗಮನಿಸಿದರುವ ಇವಾಂಕಾ ಟ್ರಂಪ್, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಆ ಸುದ್ದಿ ಪೋಸ್ಟ್ ಮಾಡಿ ''ಸುಂದರ ಪ್ರೀತಿ ಮತ್ತು ಸಹಿಷ್ಣುತೆಯ ಈ ಸಾಧನೆಯನ್ನು ಭಾರತೀಯ ಜನರು ಹಾಗೂ ಸೈಕ್ಲಿಂಗ್ ಫೆಡರೇಷನ್ ಸೆರೆಹಿಡಿದಿದೆ'' ಎಂದು ಟ್ವೀಟ್ ಮಾಡಿದ್ದಾರೆ. ಇವಾಂಕಾ ಪೋಸ್ಟ್ ಗೆ 73.1k ಲೈಕ್ಸ್ ಬಂದಿದೆ. 16.4k ರಿ-ಟ್ವೀಟ್ ಆಗಿದೆ. 6.8k ಜನರು ಕಾಮೆಂಟ್ ಮಾಡಿದ್ದಾರೆ.

1 ಲಕ್ಷ ನೀಡುವುದಾಗಿ ಘೋಷಿಸಿದ ಅಖಿಲೇಶ್
ಈ ಯುವತಿಯ ಸಾಧನೆ ಗಮನಿಸಿದ್ದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಆಕೆಗೆ ಒಂದು ಲಕ್ಷ ಹಣ ನೀಡುವುದಾಗಿ ಟ್ವಿಟ್ಟರ್‌ನಲ್ಲಿ ಹೇಳಿದ್ದರು. ''ಆ ಹುಡುಗಿ ಧೈರ್ಯಶಾಲಿ, ನಾವು ಮತ್ತು ದೇಶದ ಮಹಿಳೆಯವರು ಅವರೊಂದಿಗೆ ಇದ್ದೇವೆ. ಅವರ ಧೈರ್ಯಕ್ಕೆ ನಾನು ನಮಸ್ಕರಿಸುತ್ತೇನೆ. ನಾನು ಅವರಿಗೆ ಒಂದು ಲಕ್ಷ ರೂಪಾಯಿ ಕಳುಹಿಸಿಕೊಡುತ್ತೇನೆ'' ಎಂದು ಟ್ವೀಟ್ ಮಾಡಿದ್ದರು.

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್
ಅಪ್ಪನನ್ನು ಕೂರಿಸಿಕೊಂಡು ಸುಮಾರು 1200 ಕಿ.ಮೀ ಸೈಕಲ್ ತುಳಿದಿರುವ ಯುವತಿಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಫರ್ ನೀಡಿದೆ. ಜ್ಯೋತಿ ಸೈಕ್ಲಿಂಗ್ ಟ್ರಯಲ್ಸ್ ಪಾಸ್ ಮಾಡಿದರೆ, ದೆಹಲಿಯ ಇಂದಿರಾ ಗಾಂಧಿ ಇಂಡೋರ್ ಸ್ಟೇಡಿಯಂನಲ್ಲಿರುವ 'ಸ್ಟೇಟ್ ಆಫ್ ದ ಆರ್ಟ್ ನ್ಯಾಷನಲ್' ಸೈಕ್ಲಿಂಗ್ ಅಕಾಡೆಮಿಯಲ್ಲಿ ಅಭ್ಯಾಸಕ್ಕೆ ಆಯ್ಕೆಯಾಗಲಿದ್ದಾಳೆ ಎಂದು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಮುಖ್ಯಸ್ಥ ಓಂಕಾರ್ ಸಿಂಗ್ ತಿಳಿಸಿದ್ದಾರೆ.

15 ವರ್ಷದ ಬಾಲಕಿ ಸಾಹಸ ಕಥೆ
8ನೇ ತರಗತಿ ಓದುತ್ತಿರುವ 15 ವರ್ಷದ ಬಾಲಕಿ ಲಾಕ್‌ಡೌನ್ ಕಾರಣದಿಂದ ದೆಹಲಿಯಲ್ಲಿ ಸಿಲುಕಿಕೊಂಡಿದ್ದ ತಂದೆಯ ಜೊತೆ ಬಿಹಾರ್‌ದ ದರ್ಬಂಗನಲ್ಲಿರುವ ತಮ್ಮ ಸ್ಥಳೀಯ ಸ್ಥಳಕ್ಕೆ ಸೈಕಲ್‌ನಲ್ಲೆ ಪ್ರಯಾಣ ಮಾಡಿದ್ದಾರೆ. ಸುಮಾರು ಏಳು ದಿನಗಳ ಕಾಲ ಸೈಕಲ್‌ನಲ್ಲಿ ತಂದೆ-ಮಗಳು ಪ್ರಯಾಣ ಮಾಡಿದ್ದಾರೆ.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications