ಚುನಾವಣಾ ಪ್ರಚಾರ ಚತುರ ಪ್ರಶಾಂತ್ ಕಿಶೋರ್ ವಿರುದ್ಧ ದೂರು
ಪಟ್ನಾ, ಫೆಬ್ರವರಿ 27: ಚುನಾವಣಾ ರಾಜಕೀಯದ ಚತುರ ಪ್ರಶಾಂತ್ ಕಿಶೋರ್ ವಿರುದ್ಧ ಬಿಹಾರದ ಪಾಟಲಿಪುತ್ರ ಪೊಲೀಸ್ ಠಾಣೆಯಲ್ಲಿ ವಂಚನೆ ಹಾಗೂ ಕೃತಿ ಚೌರ್ಯದ ಪ್ರಕರಣ ದಾಖಲಿಸಲಾಗಿದೆ.
Recommended Video
ಪ್ರಶಾಂತ್ ಕಿಶೋರ್ ಅವರು 'ಬಾತ್ ಬಿಹಾರ್ ಕಿ' ಕಾರ್ಯಕ್ರಮಕ್ಕಾಗಿ ತಮ್ಮ ಆಂದೋಲನದಲ್ಲಿನ ಅಂಶಗಳನ್ನು ಕದ್ದಿದ್ದಾರೆ ಎಂದು ಶಾಶ್ವತ್ ಗೌತಮ್ ಎಂಬ ಯುವಕ ದೂರು ನೀಡಿದ್ದಾರೆ.
ಪ್ರಶಾಂತ್ ಕಿಶೋರ್ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ ಮತ್ತು ಮೋಸ) ಸೆಕ್ಷನ್ 406 (ವಿಶ್ವಾಸ ಉಲ್ಲಂಘನೆಯ ಅಪರಾಧಕ್ಕೆ ಶಿಕ್ಷೆ) ಅಡಿ ಪ್ರಕರಣ ದಾಖಲಿಸಲಾಗಿದೆ. 'ಬಿಹಾರ್ ಕಿ ಬಾತ್' ಎಂಬ ತಮ್ಮ ಆಂದೋಲನದಲ್ಲಿದ್ದ ಅಂಶಗಳನ್ನು ಪ್ರಶಾಂತ್ ಕಿಶೋರ್ 'ಬಾತ್ ಬಿಹಾರ್ ಕಿ' ಆಂದೋಲನದಲ್ಲಿ ಕದ್ದು ಬಳಸಿಕೊಂಡಿದ್ದಾರೆ ಎಂದು ಗೌತಮ್ ಆರೋಪಿಸಿದ್ದಾರೆ.

ಒಸಾಮ ಎಂಬ ವ್ಯಕ್ತಿಯು ತನ್ನ ಸ್ನೇಹಿತನಾಗಿದ್ದು, ಆತನ ಜತೆಗೂಡಿ ಆಂದೋಲನದ ಅಂಶಗಳನ್ನು ಸಿದ್ಧಪಡಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಒಸಾಮ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ. ಆಗ ನಾನೇ ಆತನಿಗೆ ಈ ಕಾರ್ಯಕ್ರಮದ ರೂಪುರೇಷೆಗಳನ್ನು ನೀಡಿದ್ದೆ. ಬಳಿಕ ಒಸಾಮ ತನ್ನ ಬಳಿಯಿದ್ದ ಈ ಅಂಶಗಳನ್ನು ಪ್ರಶಾಂತ್ ಕಿಶೋರ್ ಅವರಿಗೆ ನಕಲು ಮಾಡಿ ಕೊಟ್ಟಿದ್ದಾನೆ. ಹೀಗಾಗಿ ಆತ ವಿರುದ್ಧ ಕೂಡ ದೂರು ದಾಖಲಿಸಲಾಗಿದೆ ಎಂದು ಗೌತಮ್ ತಿಳಿಸಿದ್ದಾರೆ.
ಶಾಸ್ವತ್ ಗೌತಮ್ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ಅಮೆರಿಕದಲ್ಲಿ ಅಧ್ಯಯನ ಮುಗಿಸಿ ಬಿಹಾರಕ್ಕೆ ಮರಳಿದ್ದಾರೆ. 2012ರಲ್ಲಿ ಅಮೆರಿಕದಲ್ಲಿ ನಡೆದ ವಿದ್ಯಾರ್ಥಿಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಗೌತಮ್ ಅವರು ಪೊಲೀಸ್ ಠಾಣೆಗೆ ಅದರ ಪುರಾವೆಗಳನ್ನು ಒದಗಿಸಿದ್ದಾರೆ.












Click it and Unblock the Notifications