ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ನಿರುದ್ಯೋಗ ನೀಗಿಸುವ ಪಕ್ಷಗಳಿಗೆ ಶಾಕಿಂಗ್ ನ್ಯೂಸ್!

|
Google Oneindia Kannada News

ಪಾಟ್ನಾ, ಅಕ್ಟೋಬರ್.25: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಯುವಕರನ್ನು ಆಕರ್ಷಿಸುವುದಕ್ಕೆ ರಾಜಕೀಯ ಪಕ್ಷಗಳು ಎಲ್ಲಿಲ್ಲದ ಸರ್ಕಸ್ ಮಾಡುತ್ತಿವೆ. ಉದ್ಯೋಗ ಸೃಷ್ಟಿ, ಅಭಿವೃದ್ಧಿ ಮಂತ್ರದ ಮೂಲಕ ಭರಪೂರ ಕೊಡುಗೆ ನೀಡುವ ಪ್ರಣಾಳಿಕೆಗಳನ್ನು ಈಗಾಗಲೇ ಬಿಡುಗಡೆಗೊಳಿಸಿವೆ.

ಯುವ ಮತದಾರರನ್ನು ಸೆಳೆಯಲು ಒಂದು ಕಡೆ ತಂತ್ರ ಹೆಣೆಯಲಾಗುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಯುವ ಮತದಾರರ ಪ್ರಮಾಣದಲ್ಲಿ ಇಳಿಕೆಯಾಗಿದೆ. ಕಳೆದ ಬಾರಿಗಿಂದ ಈ ಬಾರಿ ಯುವ ಮತದಾರರ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಚುನಾವಣಾ ಆಯೋಗವು ಅಂಕಿ-ಅಂಶಗಳನ್ನು ನೀಡಿದೆ.

"ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರಾ ಸಿಎಂ ನಿತೀಶ್ ಕುಮಾರ್?"

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿ ಮತ ಚಲಾಯಿಸುವ 18 ರಿಂದ 19 ವರ್ಷದ ಯುವ ಮತದಾರರ ಪ್ರಮಾಣ ಶೇ.50ರಷ್ಟು ಇಳಿಕೆಯಾಗಿದೆ. ಕಳೆದ ಬಾರಿ 30 ವರ್ಷದೊಳಗಿನ ಮತದಾರರ ಸಂಖ್ಯೆ 2.04 ಕೋಟಿಯಷ್ಟಿತ್ತು. ಈ ಬಾರಿ 1.79 ಕೋಟಿಯಷ್ಟಿದ್ದು, ಶೇ.12.4ರಷ್ಟು ಕಡಿಮೆಯಾಗಿದೆ.

ಶೇ.50ರಷ್ಟು ಯುವ ಮತದಾರರ ಪ್ರಮಾಣ ಇಳಿಕೆ

ಶೇ.50ರಷ್ಟು ಯುವ ಮತದಾರರ ಪ್ರಮಾಣ ಇಳಿಕೆ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹಕ್ಕು ಚಲಾಯಿಸುವವರ ಸಂಖ್ಯೆಯು ಅರ್ಧಕ್ಕಿಂತ ಕಡಿಮೆಯಾಗಿದೆ. 2015ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ 18 ರಿಂದ 19 ವರ್ಷದೊಳಗಿನ 24.13 ಲಕ್ಷ ಯುವ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದರು. 2020ರಲ್ಲಿ ನಡೆಯುತ್ತಿರುವ ಈ ಬಾರಿ ಚುನಾವಣೆಯಲ್ಲಿ 11.17 ಲಕ್ಷ ಯುವ ಮತದಾರರು ಹೊಸತಾಗಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿದೆ.

ಭಾರತ ಲಾಕ್ ಡೌನ್ ನಡುವೆ ನೋಂದಣಿ ಇಳಿಕೆ

ಭಾರತ ಲಾಕ್ ಡೌನ್ ನಡುವೆ ನೋಂದಣಿ ಇಳಿಕೆ

ದೇಶದಲ್ಲಿ ಯಾವುದೇ ಸಾರ್ವತ್ರಿಕ ಚುನಾವಣೆಗಳು ನಡೆದ ಸಂದರ್ಭಗಳಲ್ಲಿ ಆಯೋಗವು ಹೊಸ ಮತದಾರರು ಹೆಸರು ನೋಂದಾಯಿಸಿಕೊಳ್ಳುವಂತೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡುತ್ತದೆ. ಸ್ಟಾರ್ ನಟರು ಮತ್ತು ಕ್ರಿಕೆಟರ್ಸ್ ಸೇರಿದಂತೆ ಗಣ್ಯರನ್ನು ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಿಕೊಳ್ಳಲಾಗುತ್ತದೆ. ಮತದಾರರ ಗುರುತಿನ ಚೀಟಿಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಚಾರ ಮಾಡಲಾಗುತ್ತದೆ. ಆದರೆ ಈ ಬಾರಿ ಕೊರೊನಾವೈರಸ್ ಹರಡುವಿಕೆ ಭೀತಿ ಮತ್ತು ಲಾಕ್ ಡೌನ್ ನಿಯಂತ್ರಣ ಕ್ರಮಗಳಿಂದಾಗಿ ಹೊಸ ಮತದಾರರ ಪ್ರಮಾಣ ಇಳಿಕೆಯಾಗಿರಬಹುದು ಎಂದು ಹೇಳಲಾಗುತ್ತಿದೆ.

ಯುವ ಮತದಾರರ ಓಲೈಕೆಗೆ ರಾಜಕೀಯ ಪಕ್ಷ ಮುಂದು

ಯುವ ಮತದಾರರ ಓಲೈಕೆಗೆ ರಾಜಕೀಯ ಪಕ್ಷ ಮುಂದು

2020ರಲ್ಲಿ ನಡೆಯುತ್ತಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಹುತೇಕ ಎಲ್ಲ ಪಕ್ಷಗಳು ಯುವಕರನ್ನು ಓಲೈಸುವ ಕಾರ್ಯತಂತ್ರವನ್ನು ಹೆಣೆದಿವೆ. ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ಧಿಯ ಶಪಥ ಮಾಡುತ್ತಿವೆ. ತೇಜಸ್ವಿ ಯಾದವ್ 10 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರೆ ಬಿಜೆಪಿ 19 ಲಕ್ಷ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದೆ. ಲೋಕ ಜನಶಕ್ತಿ ಪಕ್ಷ ಕೂಡ ತನ್ನ 95 ಅಭ್ಯರ್ಥಿಗಳ ಪೈಕಿ 30 ಅಭ್ಯರ್ಥಿಗಳು 40 ವರ್ಷಕ್ಕಿಂತ ಚಿಕ್ಕವರೇ ಆಗಿದ್ದಾರೆ. ಇಷ್ಟರ ನಡುವೆ ಈ ಬಾರಿ ಯುವ ಮತದಾರರ ಸಂಖ್ಯೆಯಲ್ಲೇ ಅರ್ಧಕ್ಕರ್ಧ ಇಳಿಕೆಯಾಗಿರುವುದು ಕಂಡು ಬಂದಿದೆ.

ಬಿಹಾರದಲ್ಲಿ ಯುವ ಮತದಾರರು ನಿರ್ಣಾಯಕವೇ ಅಲ್ಲ?

ಬಿಹಾರದಲ್ಲಿ ಯುವ ಮತದಾರರು ನಿರ್ಣಾಯಕವೇ ಅಲ್ಲ?

ಇತಿಹಾಸವನ್ನು ಅವಲೋಕಿಸಿದಾಗ ಬಿಹಾರದಲ್ಲಿ ಯುವ ಮತದಾರರು ನಿರ್ಣಾಯಕ ಪಾತ್ರ ವಹಿಸುವುದಿಲ್ಲ ಎಂದು ಅಭಿವೃದ್ಧಿಶೀಲ ಸಮಾಜದ ಅಧ್ಯಯನ ಕೇಂದ್ರದ ಸಂಜಯ್ ಕುಮಾರ್ ಹೇಳಿದ್ದಾರೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳನ್ನು ಹೊರತುಪಡಿಸಿದಂತೆ ಹಿಂದಿನ ಅಂಕಿ-ಅಂಶಗಳಿಂದ ಯುವ ಮತದಾರರು ಅಷ್ಟೊಂದು ಪರಿಣಾಮಕಾರಿ ಎಂದು ಎನಿಸುವುದಿಲ್ಲ. ಈ ಹಿಂದೆ ಯುವಕರ ಮತಗಳು ಪಕ್ಷಗಳ ನಡುವೆ ಹಂಚಿ ಹೋಗುತ್ತಿದ್ದವು.

ಕಳೆದ ಚುನಾವಣೆಗಳಲ್ಲಿ ವಿವಿಧ ಪಕ್ಷಗಳು ಪಡೆದ ಮತಗಳ ಪ್ರಮಾಣವನ್ನು ಲೆಕ್ಕ ಹಾಕಿದಾಗ ಯುವ ಮತದಾರರು ಯಾವುದೇ ಪಕ್ಷದ ಪರ ಅಥವಾ ವಿರುದ್ಧವಾಗಿ ಹೆಚ್ಚಿನ ಮತವನ್ನು ಚಲಾಯಿಸದೇ ಇರುವುದು ಗೊತ್ತಾಗುತ್ತದೆ. ಯುವ ಮತದಾರರಿಂದ ಯಾವುದೇ ಪಕ್ಷಗಳು ಮತ್ತು ಚುನಾವಣಾ ಫಲಿತಾಂಶದ ಮೇಲೆ ಅಷ್ಟಾಗಿ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಸಂಜಯ್ ಕುಮಾರ್ ಹೇಳಿದ್ದಾರೆ.

ಉದ್ಯೋಗ ಸೃಷ್ಟಿಸದ ಸಿಎಂ ವಿರುದ್ಧ ಯುವಕರ ಮುನಿಸು

ಉದ್ಯೋಗ ಸೃಷ್ಟಿಸದ ಸಿಎಂ ವಿರುದ್ಧ ಯುವಕರ ಮುನಿಸು

ಬಿಹಾರ ಚುನಾವಣೆಯಲ್ಲಿ ಈ ಬಾರಿ ಎರಡು ಅಂಶಗಳು ಪ್ರಮುಖ ಎನಿಸುತ್ತವೆ. ಹೊಸ ಮತದಾರರ ಸಂಖ್ಯೆಯಲ್ಲಿನ ಇಳಿಕೆಯು ಪ್ರಭಾವ ಬೀರುವುದು ಒಂದು ಕಡೆಯಾಗಿದೆ. ಇನ್ನೊಂದು ಕಡೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹೆಸರು ನೋಂದಾಯಿಸಿಕೊಂಡಿರುವ ಯುವ ಮತದಾರರು ಸಾಲಿ ಸರ್ಕಾರದ ವಿರುದ್ಧ ಮುನಿಸಿಕೊಂಡಂತೆ ತೋರುತ್ತಿದೆ. ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿರುವ ಸಿಎಂ ನಿತೀಶ್ ಕುಮಾರ್ ವಿರುದ್ಧ ಮತ ಚಲಾಯಿಸುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಸಂಜಯ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಲ್ಲ ವರ್ಗದ ಮತದಾರರೂ ಮುಖ್ಯ ಎಂದ ಆರ್ ಜೆಡಿ

ಎಲ್ಲ ವರ್ಗದ ಮತದಾರರೂ ಮುಖ್ಯ ಎಂದ ಆರ್ ಜೆಡಿ

ಮೊದಲ ಬಾರಿ ಮತದಾನ ಮಾಡುವ ಯುವ ಮತದಾರರ ಸಂಖ್ಯೆಯಲ್ಲಿನ ಇಳಿಕೆಯು ತಮ್ಮ ಪಕ್ಷದ ಮೇಲೆ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಆರ್ ಜೆಡಿ ಮುಖಂಡ ಮನೋಜ್ ಝಾ ತಿಳಿಸಿದ್ದಾರೆ. ಯುವ ಮತದಾರರಷ್ಟೇ ನಮ್ಮ ಆದ್ಯತೆ ಆಗಿಲ್ಲ. ಯುವಕರಿಗಷ್ಟೇ ಸೀಮಿತವಾಗಿರದೇ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ನಾವು ಪಣ ತೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಅ.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ನವೆಂಬರ್.10ರಂದು ಚುನಾವಣೆ ಅಂತಿಮ ಫಲಿತಾಂಶ ಹೊರ ಬೀಳಲಿದೆ.

English summary
Bihar Election: More Than 50 Percent Of Dip In First-Time Voters, 12 Percent Of Down In Under 30 Voters Ratio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X