ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪರೂಪದ ಕಾಯಿಲೆಗೆ ತುತ್ತಾಗಿರುವ ಈ ಕಂದಮ್ಮನ ಜೀವ ಉಳಿಸಿ

Google Oneindia Kannada News

ಅಪರೂಪದ ಕಾಯಿಲೆಗೆ ಮಗುವನ್ನು ಕಳೆದುಕೊಂಡ ಪೋಷಕರು ಮತ್ತೊಂದು ಜೀವ ಉಳಿಸಲು ಹೆಣಗಾಡುತ್ತಿದ್ದಾರೆ

ಕಳೆದ ಎರಡು ವರ್ಷಗಳಿಂದ 4 ವರ್ಷದ ಅನಾಸ್ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆತನಿಗೆ ತುರ್ತಾಗಿ ಸ್ಟೆಮ್ ಸೆಲ್ ಕಸಿ ನಡೆಯದೇ ಹೋದರೆ ಮಾರಣಾಂತಿಕ ಕಾಯಿಲೆಯು ಆತನ ಜೀವವನ್ನು ಕಸಿದುಕೊಳ್ಳಲಿದೆ.

ಏಪ್ರಿಲ್ 1, 2017ರಂದು ನಾವು ನಮ್ಮ ಮಗ ಅಮನ್‌ನನ್ನು ಕಳೆದುಕೊಂಡೆವು. ಆಗ ಅವನಿಗೆ ಕೇವಲ 7 ವರ್ಷ. ಆತನ ಸಾಯುವ ತಿಂಗಳ ಹಿಂದಷ್ಟೇ ಆತನಿಗೆ ಚೆಡಿಯಾಕ್-ಹಿಗಶಿ ಸಿಂಡ್ರೋಮ್ ಇರುವುದು ಪತ್ತೆಯಾಗಿತ್ತು. ಇದು ಚರ್ಮ ಮತ್ತು ಕಣ್ಣುಗಳಲ್ಲಿನ ವರ್ಣದ್ರವ್ಯವನ್ನು ಕಡಿಮೆ ಮಾಡುವ ಮೂಲಕ ಸೋಂಕುಗಳು ಆವರಿಸುವ ಅವಕಾಶವನ್ನು ಹೆಚ್ಚಿಸುವ ಅಪರೂಪದ ಕಾಯಿಲೆ.

ಆತನ ಕಾಯಿಲೆ ಏನೆಂದು ನಾವು ಅರ್ಥ ಮಾಡಿಕೊಳ್ಳುವ ಮತ್ತು ಅದರಿಂದ ಅವನನ್ನು ಗುಣಪಡಿಸುವ ಮುನ್ನವೇ ನಮ್ಮ ಮಗು ಕೊನೆಯುಸಿರೆಳೆದಿದ್ದ. ನಮ್ಮ ಕಣ್ಣ ಮುಂದೆಯೇ ನಮ್ಮ ಮಗು ಸಾವನ್ನಪ್ಪುವ ನೋವಿನ ಸಂದರ್ಭದಲ್ಲಿ ಉಂಟಾಗುವ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸಲು ನನ್ನಿಂದ ಸಾಧ್ಯವಿಲ್ಲ. ಆತನ ಸಾವು ನಮ್ಮ ಹೃದಯಗಳಲ್ಲಿ ಗುಣಪಡಿಸಲಾಗದ ವೇದನೆಯನ್ನು ಉಳಿಸಿ ಹೋಯಿತು. ನಾವು ನಮ್ಮ ಬದುಕಿನ ಎಲ್ಲ ಭರವಸೆಗಳನ್ನೂ ಕಳೆದುಕೊಂಡಿದ್ದೆವು, ಆದರೆ ನಮ್ಮ ಕಿರಿಯ ಮಗ ಅನಾಸ್‌ಗಾಗಿ ನಾವು ಬದುಕಿದ್ದೆವು.

ನೋಡಲು ಸಾಧ್ಯವಾಗದ ಭಯಾನಕ ಗಳಿಗೆ

ಆದರೆ 2017ರ ಜುಲೈನಲ್ಲಿ, ಅಮನ್‌ನ ಸಾವಿನ ಎರಡು ತಿಂಗಳ ಬಳಿಕ ಅಮನ್‌ನಲ್ಲಿಯೇ ಕಂಡಿದ್ದಂತಹ ಲಕ್ಷಣಗಳು ಅನಾಸ್‌ನಲ್ಲಿಯೂ ಕಾಣಿಸತೊಡಗಿದವು. ಅವನ ಚರ್ಮವು ಕಪ್ಪಿಡತೊಡಗಿತು. ಆತನ ಕಣ್ಣುಗಳು ಅಸಹಜವಾಗಿ ಚಲಿಸತೊಡಗಿದವು. ಅದು ನಮ್ಮಲ್ಲಿ ಅತೀವ ಭಯ ಮೂಡಿಸಿತು. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದೊಯ್ದೆವು.

ಅನಾಸ್ ಕೂಡ ಚೆಡಿಯಾಕ್ ಹಿಗಶಿ ಸಿಂಡ್ರೋಮ್‌ನಿಂದ ಬಳಲುತ್ತಿದ್ದಾನೆ ಎಂದು ವೈದ್ಯರು ಹೇಳಿದಾಗ ನಮ್ಮ ಆತಂಕ ನಿಜವಾಯಿತು. ನಮಗೆ ಭೂಮಿಯೇ ಬಾಯ್ತೆರೆದಂತೆ ಎನಿಸಿತು. ನಮ್ಮ ಕುರಿತು ಅಲ್ಲಾಹುನ ಬಯಕೆ ಏನಿದೆಯೋ ನನಗೆ ಗೊತ್ತಿರಲಿಲ್ಲ.

ಈ ಮಾರಣಾಂತಿಕ ಕಾಯಿಲೆ ಈಗಾಗಲೇ ನಮ್ಮ ಒಬ್ಬ ಮಗನನ್ನು ಬಲಿತೆಗೆದುಕೊಂಡಿತ್ತು. ಅನಾಸ್‌ಗೆ ಏನೂ ಆಗಬಾರದು ಎಂದು ನೋಡಿಕೊಳ್ಳಲೇಬೇಕೆಂದು ನಾವು ಅಚಲವಾಗಿದ್ದೆವು.

ಆದರೆ ಆತನ ಕಾಯಿಲೆಗೆ ಔ‍ಷಧಗಳು ಕೇವಲ ತಾತ್ಕಾಲಿಕ ಪರಿಹಾರವಷ್ಟೇ ಆಗಬಲ್ಲವು ಎಂದು ವೈದ್ಯರು ನಮಗೆ ಹೇಳಿದರು. ಆತನ ಸ್ಥಿತಿಯನ್ನು ಶಾಶ್ವತವಾಗಿ ಗುಣಪಡಿಸಬೇಕೆಂದರೆ ಸ್ಟೆಮ್ ಸೆಲ್‌ನ ಕಸಿಯಾಗುವುದೊಂದೇ ಮಾರ್ಗ. ಅದಕ್ಕೆ ತಗುಲುವ ವೆಚ್ಚ 22500000.00 ರೂ. ಅಷ್ಟು ಹಣ ನಮ್ಮ ಬಳಿ ಇಲ್ಲದ ಕಾರಣ ನಾವು ಔಷಧಗಳ ಮೂಲಕ ಚಿಕಿತ್ಸೆ ಮುಂದುವರಿಸುವ ಅನಿವಾರ್ಯತೆಗೆ ಮೊರೆಹೊಕ್ಕೆವು.

ಈಗ ಎರಡು ವರ್ಷ ಕಳೆದಿವೆ. ಈಗಲೂ ನಮ್ಮ ಮಗನ ಚಿಕಿತ್ಸೆಗೆ ಅಗತ್ಯ ಹಣವನ್ನು ಭರಿಸಲು ನಮಗೆ ಸಾಧ್ಯವಾಗುತ್ತಿಲ್ಲ.

ಕಳೆದ ಎರಡು ವರ್ಷಗಳಲ್ಲಿ ನಮ್ಮ ಮಗನ ಸರ್ಜರಿಗಾಗಿ ಅಗತ್ಯವಿರುವ ಹಣವನ್ನು ಸಂಗ್ರಹಿಸಲು ಸಾಧ್ಯವಿರುವ ಎಲ್ಲ ದಾರಿಗಳಲ್ಲಿಯೂ ಪ್ರಯತ್ನಿಸಿದ್ದೇವೆ. ಆದರೆ ಅದರಿಂದ ಫಲ ಸಿಗಲಿಲ್ಲ. ನನ್ನ ಪತಿ ಹಬೀಬ್ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದು, ಆತನ ಸಂಪಾದನೆ ಕೂಡ ತೀರಾ ಕಡಿಮೆ. ಆತನ ಅಲ್ಪ ಗಳಿಕೆಯೊಂದಿಗೆ ನಾವು ದಿನದ ಊಟವನ್ನು ಹೊಂದಿಸಲು ಮಾತ್ರವಷ್ಟೇ ಶಕ್ತರಾಗಿದ್ದೇವೆ.

ಮತ್ತೊಂದೆಡೆ ಅನಾಸ್‌ನ ಸ್ಥಿತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಹೋಗುತ್ತಿದೆ. ಅವನ ಚರ್ಮ ಕಪ್ಪಾಗಿದೆ ಮತ್ತು ಕಣ್ಣುಗಳು ಸದಾ ಚಲಿಸುತ್ತಲೇ ಇರುತ್ತವೆ. ಜತೆಗೆ ಅವನ ಒಳಗೂ ರಕ್ತಸ್ರಾವವಾಗುತ್ತಿದೆ. ಅವನು ಯಾವಾಗಲೂ ಅಳುತ್ತಲೇ ಇರುತ್ತಾನೆ. ಅದನ್ನು ಕಂಡು ನನ್ನ ಹೃದಯ ವಿಹ್ವಲವಾಗುತ್ತದೆ. ಅವನನ್ನು ಸಂತೈಸಲು ನನಗೆ ಯಾವ ಶಕ್ತಿಯೂ ಇಲ್ಲ.

ನನ್ನ ಮಗುವಿನ ಮೇಲೆ ಕರುಣೆ ತೋರುವಂತೆ ಅಲ್ಲಾಹುವಿಗೆ ಪ್ರತಿದಿನ ಬೇಡಿಕೊಳ್ಳುತ್ತಿದ್ದೇನೆ. ಅವನಿಗೆ ಏನಾದರೂ ಆದರೆ ನಾವು ಬದುಕಿರಲು ಸಾಧ್ಯವೇ ಇಲ್ಲ. ನಾವು ಈಗಾಗಲೇ ಅಮನ್‌ನನ್ನು ಕಳೆದುಕೊಂಡಿದ್ದೇವೆ. ಈಗ ಅನಾಸ್ ಮಾತ್ರ ನಮಗಿರುವ ಏಕೈಕ ಭರವಸೆ.

ನಿಮ್ಮ ಕರುಣೆ ನಮ್ಮ ಮಗನನ್ನು ಉಳಿಸಬಲ್ಲದು

ಅನಾಸ್ ಸ್ಥಿತಿ ತೀರಾ ಹದಗೆಟ್ಟಿರುವುದರಿಂದ ಆತನಿಗೆ ಔಷಧಗಳು ಇನ್ನು ಮುಂದೆ ನೆರವಾಗುವುದಿಲ್ಲ ಮತ್ತು ಅವನಿಗೆ ತಕ್ಷಣವೇ ಸರ್ಜರಿ ನಡೆಯಬೇಕಿದೆ ಎಂದು ವೈದ್ಯರು ನಮಗೆ ಹೇಳಿದ್ದಾರೆ. ಈ ಪ್ರಕ್ರಿಯೆಗೆ ಮುಂದಾಗುವ ಯಾವ ಸ್ಥಿತಿಯಲ್ಲಿಯೂ ನಾವಿಲ್ಲ. ಅದಕ್ಕೆ ಬೇಕಾದಷ್ಟು ಹಣವನ್ನು ಕೂಡಲೇ ಹೊಂದಿಸದೆ ಹೋದಲ್ಲಿ ನಾವು ಮಕ್ಕಳಿಲ್ಲದವರಾಗುತ್ತೇವೆ.

ನಿಮ್ಮ ಅಲ್ಪ ಕಾಣಿಕೆ ನಮ್ಮ ಮಗುವನ್ನು ಉಳಿಸಬಲ್ಲದು. ದಯವಿಟ್ಟು ಸಹಾಯ ಮಾಡಿ. ನಿಮಗೆ ಎಂದೆಂದಿಗೂ ನಾವು ಕೃತಜ್ಞರಾಗಿರುತ್ತೇವೆ.

ಈ ಪ್ರಕರಣದ ದಾಖಲೆಗಳನ್ನು ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಕೀಯ ತಂಡವು ದೃಢೀಕರಿಸಿದೆ. ಚಿಕಿತ್ಸೆ ಅಥವಾ ಅದರ ವೆಚ್ಚದ ಕುರಿತಾದ ಯಾವುದೇ ಸ್ಪಷ್ಟನೆಗಾಗಿ ವೈದ್ಯಕೀಯ ತಂಡದ ಆಂದೋಲನ ಆಯೋಜಕರನ್ನು ಸಂಪರ್ಕಿಸಬಹುದು.

ಚಾರಿಟಿ ಸಂಖ್ಯೆ: 73819201

ಗಮನಿಸಿ: ಈ ನಿಧಿ ಸಂಗ್ರಹಕಾರರು 80ಜಿ ತೆರಿಗೆ ವಿನಾಯಿತಿಯನ್ನು ಹೊಂದಿರುವುದಿಲ್ಲ.

ನೆರವು ನೀಡಬೇಕಾದ ಖಾತೆ ವಿವರ

ಖಾತೆ ಸಂಖ್ಯೆ: 6999413500129703

ಖಾತೆದಾರರ ಹೆಸರು: ರಿಜ್ವಾನಾ-ಕೆಟ್ಟೊ

ಖಾತೆ ಮಾದರಿ: ಚಾಲ್ತಿ

ಐಎಫ್‌ಎಸ್‌ಸಿ: YESB0CMSNOC

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X