ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನೋಹರ್ ಪರಿಕ್ಕರ್ ಅವರ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

|
Google Oneindia Kannada News

ಪಣಜಿ, ಮಾರ್ಚ್ 18: ಭಾನುವಾರ ಇಹಲೋಕ ತ್ಯಜಿಸಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಅಂತಿಮ ದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ರಾಜಧಾನಿ ಪಣಜಿಯಲ್ಲಿ ಪಡೆದರು.

ಪರಿಕ್ಕರ್ ನಿಧನಾನಂತರ ಗೋವಾ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ ಪರಿಕ್ಕರ್ ನಿಧನಾನಂತರ ಗೋವಾ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆ

ಈ ಸಂದರ್ಭದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಜೊತೆಯಿದ್ದರು.

PM Modi pays last respect to Manohar Parrikar

ಕ್ಯಾನ್ಸರ್ ನಿಂದ ಬಳಲುತ್ತಿದ್ದ 63 ವರ್ಷ ವಯಸ್ಸಿನ ಮನೋಹರ್ ಪರಿಕ್ಕರ್ ಅವರು ಭಾನುವಾರ ಸಂಜೆ ನಿಧನರಾದರು. ಅವರ ನಿಧನಾನಂತರ ಟ್ವೀಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, 'ಮನೋಹರ್ ಪರಿಕ್ಕರ್ ಒಬ್ಬ ಅದ್ವತೀಯ ನಾಯಕ. ಒಬ್ಬ ನೈಜ ದೇಶಭಕ್ತ ಮತ್ತು ಅಸಾಧಾರಣ ಆಡಳಿತಗಾರ. ಎಲ್ಲರಿಗೂ ಅವರೆಂದರೆ ಅಕ್ಕರೆ. ಅವರು ದೇಶಕ್ಕಾಗಿ ಮಾಡಿದ ಸೇವೆಯನ್ನು ಎಷ್ಟೋ ತಲೆಮಾರಿನ ವರೆಗೆ ನೆನಪಿಸಿಕೊಳ್ಳುತ್ತೇವೆ. ಅವರ ನಿಧನದಿಂದ ಸಾಕಷ್ಟು ನೋವಾಗಿದೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು, ಓಂ ಶಾಂತಿ' ಎಂದಿದ್ದರು.

ಮನೋಹರ್ ಪರಿಕ್ಕರ್ ನಂತರ ಗೋವಾದ ಮುಂದಿನ ಮುಖ್ಯಮಂತ್ರಿ ಯಾರು? ಮನೋಹರ್ ಪರಿಕ್ಕರ್ ನಂತರ ಗೋವಾದ ಮುಂದಿನ ಮುಖ್ಯಮಂತ್ರಿ ಯಾರು?

ಆಧುನಿಕ ಗೋವಾದ ನಿರ್ಮಾತೃ ಎಂದೂ ಅವರನ್ನು ಮೋದಿ ಕರೆದಿದ್ದರು. ಹಾಗೆಯೇ ರಕ್ಷಣಾ ಸಚಿವರಾಗಿಯೂ ಅವರ ಸೇವೆಯನ್ನು ಮೋದಿ ನೆನೆದಿದ್ದರು.

2018 ರ ಫೆಬ್ರವರಿಯಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪರಿಕ್ಕರ್ ಮಾ.17 ರಂದು ಸಂಜೆ ನಿಧನರಾದರು. ಗೋವಾ ಮುಖ್ಯಮಂತ್ರಿಯಾಗಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದ ಪರಿಕ್ಕರ್ ಅವರ ಅಗಲಿಕೆಗೆ ದೇಶ ಮರುಗಿದೆ.

English summary
PM Narendra Modi pays last respect to Goa CM Manohar parrikar who died on Sunday due to cancer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X