'ಗೋವಾ ಮುಖ್ಯಮಂತ್ರಿಯನ್ನು ಬದಲಿಸುವ ಪ್ರಶ್ನೆಯೇ ಇಲ್ಲ'
ಪಣಜಿ, ನವೆಂಬರ್ 30: "ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರನ್ನು ಬದಲಿಸುವ ಪ್ರಶ್ನೆಯೇ ಇಲ್ಲ" ಎಂದು ಗೋವಾ ಫಾರ್ವರ್ಡ್ ಪಕ್ಷದ ಮುಖಂಡ ವಿಜೈ ಸರ್ದೇಸಾಯಿ ಹೇಳಿದ್ದಾರೆ.
ಪರಿಕ್ಕರ್ ಸಂಪುಟದಲ್ಲಿ ಕೃಷಿ ಸಚಿವರೂ ಆಗಿರುವ ಸರ್ದೇಸಾಯಿ, 'ಪರಿಕ್ಕರ್ ರಾಜೀನಾಮೆ ನೀಡಲು ಸಿದ್ಧರಿದ್ದಾರೆ. ಆದರೆ ಹೈಕಮಾಂಡ್ ಅದಕ್ಕೆ ಒಪ್ಪುತ್ತಿಲ್ಲ' ಎಂದು ಇತ್ತೀಚೆಗಷ್ಟೇ ಬಾಂಬ್ ಸಿಡಿಸಿದ್ದರು.
ಇದೀಗ, ಮತ್ತೊಮ್ಮೆ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದ ಅವರು ವರಸೆ ಬದಲಿಸಿದ್ದಾರೆ. 'ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ನಾನು ಅವರೊಂದಿಗಿದ್ದೆ. ಅವರು ಆರೋಗ್ಯವಂತರಾಗಿಯೇ ಇದ್ದರು. ಇನ್ನೆಲ್ಲಿಂದ ಮುಖ್ಯಮಂತ್ರಿಯನ್ನು ಬದಲಿಸುವುದು? ಆ ಪ್ರಶ್ನೆಯೇ ಇಲ್ಲ' ಎಂದು ಸರ್ದೇಸಾಯಿ ಹೇಳಿದರು.

ಪ್ಯಾಂಕ್ರಿಯಾಸ್ ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್, ಆಗಾಗ ಚಿಕಿತ್ಸೆ ಪಡೆಯಬೇಕಾಗಿರುವುದರಿಂದ ಆಡಳಿತದಲ್ಲಿ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅವರು ರಾಜೀನಾಮೆ ನೀಡಬೇಕು ಎಂದು ವಿರೋಧಪಕ್ಷಗಳು ಒತ್ತಾಯಿಸುತ್ತಿವೆ.












Click it and Unblock the Notifications