ಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರ

ಪಣಜಿ, ಮಾರ್ಚ್ 17: ಗೋವಾದ ಮುಖ್ಯಮಂತ್ರಿ, ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಭಾನುವಾರ(ಮಾ. 17) ಸಂಜೆ ನಿಧನರಾಗಿದ್ದು, ಗೋವಾ ಜನತೆ ಅತೀವ ದುಃಖ ತಂದಿದೆ. ತಮ್ಮ ಕೈಲಾದ ದಿನಗಳಷ್ಟು ಕಾಲ ಗೋವಾದಲ್ಲಿ ಬಿಜೆಪಿ ಸರ್ಕಾರವನ್ನು ಉಳಿಸಿ, ಆಡಳಿತ ನಡೆಸಿದ್ದರು.

ಆಡಳಿತ ಯಂತ್ರ ಕುಸಿದಿದ್ದು, ಬಿಜೆಪಿ ಸರ್ಕಾರಕ್ಕೆ ಅಗತ್ಯ ಬಹುಮತವಿಲ್ಲ ಎಂದು ಕಾಂಗ್ರೆಸ್ ರಾಜ್ಯಪಾಲರಿಗೆ ಪತ್ರ ಬರೆದು, ಸರ್ಕಾರದ ರಚನೆಗೆ ಮತ್ತೊಮ್ಮೆ ಯತ್ನಿಸಿತ್ತು. ಭಾನುವಾರದಂದು ಬಿಜೆಪಿ ಶಾಸಕರ ತುರ್ತುಸಭೆ ನಡೆಸಲಾಯಿತು.ಸಭೆ ನಂತರ ಮಾತನಾಡಿದ ಬಿಜೆಪಿ ಶಾಸಕ, ಸ್ಪೀಕರ್ ಮೈಕಲ್ ಲೋಬೋ 'ಗೋವಾದಲ್ಲಿ ಪರಿಕ್ಕರ್ ಇರುವ ತನಕ, ನಾಯಕತ್ವ ಬದಲಾವಣೆಯಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಈಗ ಮನೋಹರ್(63) ಅವರ ನಿಧನದಿಂದ ಬಿಜೆಪಿ ಸಂಖ್ಯಾಬಲದಲ್ಲಿ ವ್ಯತ್ಯಾಸವಾಗುವುದೇ? ಕಾಂಗ್ರೆಸ್ಸಿಗೆ ಆಧಿಕಾರ ಸ್ಥಾಪಿಸುವ ಹಕ್ಕು ಸಿಗುವುದೇ? ಬಿಜೆಪಿ ಸರ್ಕಾರ ಬಹುಮತ ಸ್ಥಾಪಿಸಬೇಕೆ? ಎಂಬ ಪ್ರಶ್ನೆಗಳು ಎದ್ದಿವೆ.

Manohar Parrikar

ಗೋವಾ ವಿಧಾನಸಭೆ ಶಾಸಕರ ಬಲಾಬಲ ಒಟ್ಟು 40,
ಹಾಲಿ ಬಲಾಬಲ 37: ಮ್ಯಾಜಿಕ್ ನಂಬರ್ : 19
ಬಿಜೆಪಿ : 12
ಗೋವಾ ಫಾರ್ವಡ್: 3
ಎಂಜಿಪಿ: 3
ಎನ್ ಸಿಪಿ : 1
ಪಕ್ಷೇತರರು : 2

ಬಿಜೆಪಿ ಪ್ಲಸ್ : 21

ಕಾಂಗ್ರೆಸ್ : 14

17 ಶಾಸಕರ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿ ಕಾಂಗ್ರೆಸ್ ಹೊರಹೊಮ್ಮಿದರೂ, ಮಹಾರಾಷ್ಟ್ರ ಗೋಮಾಂತಕ್ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಮತ್ತು ಮೂವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಿ, ಆಡಳಿತ ನಡೆಸುತ್ತಿದೆ. ಫೆಬ್ರವರಿ 2017ರ ನಂತರ ಕಾಂಗ್ರೆಸ್ಸಿನಿಂದ ಮೂವರು ಶಾಸಕರು, ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬಹುಮತ ಸಾಬೀತುಪಡಿಸಲು ಕನಿಷ್ಠ 21 ಸ್ಥಾನವಾದ್ರೂ ಬೇಕು. ಡಿಸೋಜಾ ಸಾವು ಮತ್ತು ಸುಭಾಷ್ ಶಿರೋಡ್​ಕರ್, ದಯಾ ನಂದ್ ಸೊಪ್ಟೆ ಅವರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಹೀಗಾಗಿ, ಸದನದ ಒಟ್ಟು ಸಂಖ್ಯಾಬಲ 40ರಿಂದ 37ಕ್ಕೆ ಇಳಿದಿದೆ. ಹೇಗಾದರೂ ಕಾಂಗ್ರೆಸ್ಸಿಗೆ ಕನಿಷ್ಠ 4+5 ಸ್ಥಾನಗಳ ಕೊರತೆ ಕಂಡು ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+