ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾದಲ್ಲಿ ಗಾಂಜಾ ಬೆಳೆಯಲು ಅನುಮತಿ ಬೇಡ ಎಂದ ಸಿಎಂ

|
Google Oneindia Kannada News

ಪಣಜಿ, ಡಿ. 31: ಗೋವಾದಲ್ಲಿ ಔಷಧಿ ಉದ್ದೇಶಕ್ಕಾಗಿ ಗಂಜಾ ಬೆಳೆಯಲು ಕಾನೂನು ಇಲಾಖೆ ಅನುಮತಿ ನೀಡಿದರೂ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಔಷಧಿ ರೂಪದಲ್ಲಿ ಗಾಂಜಾ ಬೆಳೆಯುವ ಆಸಕ್ತಿ ನಮ್ಮ ಸರ್ಕಾರಕ್ಕಿಲ್ಲ ಎಂದಿದ್ದಾರೆ.

ಗೋವಾದ ಆರೋಗ್ಯ ಇಲಾಖೆ ಅನುಮತಿ ಪಡೆದ ನಂತರ ಕಾನೂನು ಇಲಾಖೆ ಕೂಡಾ ಔಷಧ ಉದ್ದೇಶಕ್ಕಾಗಿ ಗಾಂಜಾ ಬೆಳೆಯುವುದಕ್ಕೆ ಸಮ್ಮತಿ ವ್ಯಕ್ತಪಡಿಸಿತ್ತು. ಈ ಮೂಲಕ ನಿರ್ಬಂಧಿತ, ನಿಯಂತ್ರಿತ ಗಾಂಜಾ ಕೃಷಿಗೆ ಅಧಿಕೃತ ಒಪ್ಪಿಗೆ ಸಿಕ್ಕಿತ್ತು. ಈ ಬಗ್ಗೆ ಕಾನೂನು ಸಚಿವ ನಿಲೇಶ್ ಕ್ಯಾಬ್ರಲ್ ಕೂಡಾ ಪ್ರತಿಕ್ರಿಯಿಸಿ, ಇದು ನೈಸರ್ಗಿಕ ಔಷಧಿಯಾಗಿ ಬಳಕೆಯಾಗಲಿದೆ ಎಂದಿದ್ದರು.

ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು?ಡ್ರಗ್ಸ್ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತೆ, ನಿಯಮಗಳೇನು?

ಜಮ್ಮು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಟೆಗ್ರೇಟಿವ್ ಮೆಡಿಸನ್ ಸಂಸ್ಥೆಯ ಪ್ರಸ್ತಾವನೆಗೆ ಗೋವಾ ಕಾನೂನು ಇಲಾಖೆ ಅನುಮತಿ ನೀಡಿದರೂ ಸಾವಂತ್ ಸಂಪುಟದಲ್ಲಿ ಸಂಪೂರ್ಣ ಅನುಮತಿ ಸಿಕ್ಕಿರಲಿಲ್ಲ. ವಿಪಕ್ಷಗಳು ಕೂಡಾ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಡ್ರಗ್ಸ್ ಬಳಕೆ ಅಧಿಕವಾಗಲಿದ್ದು, ಸಂಸ್ಕೃತಿ ಹಾಳಾಗಲಿವೆ ಎಂದಿವೆ.

Goa Not Interested for Cannabis Cultivation for Medicinal Use: CM Pramod Sawant

ಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹಭಾರತದಲ್ಲಿ ಗಾಂಜಾ ಗಮ್ಮತ್ತು: ಅಳತೆ ಮೀರುತ್ತಿದೆ ಯುವಸಮೂಹ

ಫಾರ್ಮಾ ಕಂಪನಿಗಳಿಗೆ ಬೇಕಾದ ರೀತಿಯಲ್ಲಿ ಔಷಧಿ ರೂಪದಲ್ಲಿ ಗಾಂಜಾ ಬೆಳೆಯಲು ಅನುಮತಿ ಕೋರಲಾಗಿತ್ತು. ಅಯುರ್ವೇದ ಹಾಗೂ ಅಲೋಪತಿಯಲ್ಲೂ ಬಳಕೆಯಾಗುತ್ತದೆ. ಈ ಬಗ್ಗೆ ಜಮ್ಮು ಮೂಲದ ಸರ್ಕಾರಿ ಸಂಸ್ಥೆಯಿಂದ ಪ್ರಸ್ತಾವನೆ ಬಂದಿತ್ತು. ಈ ಬಗ್ಗೆ ವಿವಿಧ ಇಲಾಖೆಗಳಿಂದ ಪ್ರತಿಕ್ರಿಯೆ ಕೋರಲಾಗಿತ್ತು. ಆದರೆ, ಇದರರ್ಥ ಗಾಂಜಾ ಬೆಳೆಯಲು ನಮ್ಮ ಸರ್ಕಾರ ಅನುಮತಿ ನೀಡಿದೆ ಎಂಬುದಲ್ಲ ಎಂದು ಸಾವಂತ್ ಸ್ಪಷ್ಟಪಡಿಸಿದ್ದಾರೆ.

English summary
The Goa government has received a proposal to permit legal farming of cannabis for medicinal purposes, however, state Chief Minister Pramod Sawant has said that the state is not interested to go ahead with this proposal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X