ಮೈಯಲ್ಲಿ ಅನಾರೋಗ್ಯ, ಮೂಗಿಗೆ ನಳಿಗೆ... ಕರ್ತವ್ಯಪ್ರಜ್ಞೆ ಬತ್ತಿಲ್ಲ!
ಪಣಜಿ, ಜನವರಿ 01: ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇತ್ತೀಚೆಗಷ್ಟೇ ಮೂಗಿಗೆ ನಳಿಗೆ ತೊಟ್ಟು ಸೇತುವೆಯೊಂದರ ಮೇಲ್ವಿಚಾರಣೆಗೆ ತೆರಳಿದ್ದ ಮನೋಹರ್ ಪರಿಕ್ಕರ್ ಚಿತ್ರ ವೈರಲ್ ಆಗಿತ್ತು.
ತೀವ್ರ ಅನಾರೋಗ್ಯದ ನಡುವೆಯೂ ಕರ್ತವ್ಯ ಪ್ರಜ್ಞೆ ಮೆರೆವ ಮನೋಹರ್ ಪರಿಕ್ಕರ್ ಅವರು ಅಭಿಮಾನಿಗಳಿಂದ ಉಘೇ ಎನ್ನಿಸಿಕೊಂಡಿದ್ದರೆ, ವಿರೋಧಿಗಳಲು ಇದನ್ನು ಪಬ್ಲಿಸಿಟಿ ಸ್ಟಂಟ್ ಎಂದಿದ್ದಾರೆ.

ಇದೀಗ ಮತ್ತೊಮ್ಮೆ ಸುದ್ದಿಯಲ್ಲಿರುವ ಪರಿಕ್ಕರ್, ಮೂಗಿಗೆ ನಳಿಗೆ ಹಾಕಿಕೊಂಡೇ ತಮ್ಮ ಸಂಪುಟ ಸಚಿವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರೊಂದಿಗಿದ್ದ ಸಚಿವರೆಲ್ಲರೂ ಅವರಿಗೆ ಬೇಗ ಗುಂ ಮುಖರಾಗುವಂತೆ ಹಾರೈಸಿದರು. ಈ ಭಾವುಕ ಸನ್ನಿವೇಶದ ಚಿತ್ರಗಳ ಸಾಮಾಜಿಕ ಜಾಲತಣಾಣಗಳಲ್ಲಿ ವೈರಲ್ ಆಗಿವೆ.

ಅನಾರೋಗ್ಯದಿಂದ ಬಳಲುತ್ತಿರುವ ಮನೋಹರ್ ಪರಿಕ್ಕರ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದು ವಿಪಕ್ಷಗಳಿಂದ ಸಾಕಷ್ಟು ಒತ್ತಡವಿದ್ದರೂ, ಗೋವಾದಲ್ಲಿ ಪರಿಕ್ಕರ್ ಗಿರುವ ಜನಬೆಂಬಲವನ್ನರಿತಿರುವ ಬಿಜೆಪಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ಯೋಚನೆ ಮಾಡಿಲ್ಲ.












Click it and Unblock the Notifications