• search
 • Live TV
ಪಣಜಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಗೋವಾದ 40 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ; ಸಿ. ಟಿ. ರವಿ

|
Google Oneindia Kannada News

ಪಣಜಿ, ಜನವರಿ 14; "ಗೋವಾದ 40 ಸ್ಥಾನಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಸಂಸದೀಯ ಮಂಡಳಿಗೆ ಕಳಿಸಲಾಗಿದೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.

ಗೋವಾ ಚುನಾವಣೆ ಬಿಜೆಪಿ ಉಸ್ತುವಾರಿ ದೇವೇಂದ್ರ ಫಡ್ನವೀಸ್, ಸಿ. ಟಿ. ರವಿ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಗುರುವಾರ ರಾಜ್ಯ ಕೋರ್ ಕಮಿಟಿ ಸಭೆಯನ್ನು ನಡೆಸಿದರು.

ಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂ ಗೋವಾ; ಎಎಪಿ & ಟಿಎಂಸಿ ಸ್ಪರ್ಧೆ ಬಗ್ಗೆ ವಿಶ್ಲೇಷಿಸಿದ ಪಿ. ಚಿದಂಬರಂ

"ನಾವು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದೇವೆ. ಸಂಸದೀಯ ಮಂಡಳಿಗೆ ಪಟ್ಟಿಯನ್ನು ಕಳಿಸಿದ್ದೇವೆ. ಕೆಲವು ಸ್ಥಾನಗಳಿಗೆ ಇನ್ನು ಒಂದು ಸುತ್ತಿನ ಚರ್ಚೆ ಬಳಿಕ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ" ಎಂದು ಸಿ. ಟಿ. ರವಿ ತಿಳಿಸಿದರು.

ಗೋವಾ; ಬಿಜೆಪಿ ಹಸಿರು ನಿಶಾನೆಗಾಗಿ ಕಾದು ಕೂತ ಉತ್ಪಲ್ ಪರಿಕ್ಕರ್! ಗೋವಾ; ಬಿಜೆಪಿ ಹಸಿರು ನಿಶಾನೆಗಾಗಿ ಕಾದು ಕೂತ ಉತ್ಪಲ್ ಪರಿಕ್ಕರ್!

"ಪಕ್ಷ ರಾಜ್ಯದ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ದೆಹಲಿಯಲ್ಲಿ ಪ್ರಕಟಿಸಲಾಗುತ್ತದೆ" ಎಂದು ಸಿ. ಟಿ. ರವಿ ಸ್ಪಷ್ಟಪಡಿಸಿದರು.

ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ ಗೋವಾ ಚುನಾವಣೆ; ಮಾಜಿ ಸಚಿವ ಮಿಚೆಲ್ ಲೋಬೊ ಕಾಂಗ್ರೆಸ್ ಸೇರ್ಪಡೆ

"ರಾಜ್ಯದಲ್ಲಿ ಯಾವುದೇ ಪಕ್ಷದ ಜೊತೆ ಈಗ ಮೈತ್ರಿ ಮಾಡಿಕೊಳ್ಳುವುದಿಲ್ಲ" ಎಂದು ಸಿ. ಟಿ. ರವಿ ಹೇಳಿದರು. ಗೋವಾದ 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

2017ರ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿತ್ತು. ಆದರೆ 17 ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷವನ್ನು ಪ್ರತಿಪಕ್ಷ ಸ್ಥಾನದಲ್ಲಿ ಕೂರಿಸಿ ಇತರ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.

ಪ್ರಸ್ತುತ ಬಿಜೆಪಿ 2 ಸ್ಥಾನಗಳಿಗೆ ಬಿಟ್ಟು 38 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಸಲ್ಲಿಕೆ ಮಾಡಿದೆ. ಜನವರಿ 16ರಂದು ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.

ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ರಾಜ್ಯದ ಹಿರಿಯ ನಾಯಕರು ಜನವರಿ 15ರಂದು ದೆಹಲಿಗೆ ಭೇಟಿ ನೀಡಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಲಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಕುರಿತು ಮಾತುಕತೆ ನಡೆಸಲಿದ್ದಾರೆ" ಎಂದು ಹೇಳಿದ್ದಾರೆ.

ಉತ್ಪಲ್ ಪರಿಕ್ಕರ್‌ಗೆ ಟಿಕೆಟ್?; ಗೋವಾದ ಮಾಜಿ ಮುಖ್ಯಮಂತ್ರಿ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಈ ಬಾರಿಯ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಪಕ್ಷದ ಹೈಕಮಾಂಡ್ ನಾಯಕರ ಹಸಿರು ನಿಶಾನೆಗಾಗಿ ಅವರು ಕಾಯುತ್ತಿದ್ದಾರೆ.

ಉತ್ಪಲ್ ಪರಿಕ್ಕರ್ ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಪಣಜಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಆದರೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಹಲವಾರು ಆಕಾಂಕ್ಷಿಗಳಿದ್ದಾರೆ. ಪ್ರಸ್ತುತ ಕ್ಷೇತ್ರದ ಕಾಂಗ್ರೆಸ್ ವಶದಲ್ಲಿದೆ.

ಮನೋಹರ್ ಪರಿಕ್ಕರ್ ಪುತ್ರನಿಗೆ ಟಿಕೆಟ್ ನೀಡುವ ಕುರಿತು ಪಕ್ಷದ ರಾಜ್ಯ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಉತ್ಪಲ್ ಪರಿಕ್ಕರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಶಿವಸೇನೆ ನಾಯಕ ಸಂಜಯ್ ರಾವತ್ ಉತ್ಪಲ್ ಪರಿಕ್ಕರ್ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದರೆ ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಉತ್ಪಲ್ ಪರಿಕ್ಕರ್‌ಗೆ ಬಿಜೆಪಿ ಟಿಕೆಟ್ ಸಿಗಲಿದೆಯೋ?, ಇಲ್ಲವೋ? ಎಂಬುದು ಇನ್ನೂ ಅಂತಿಮವಾಗಿಲ್ಲ.

   ರೊಚ್ಚಿಗೆದ್ದು ಮಾತನಾಡಿದ ರಾಹುಲ್ ಕೊಹ್ಲಿ ಮಾತು ಸ್ಟಂಪ್ ಮೈಕ್ ನಲ್ಲಿ ರೆಕಾರ್ಡ್ | Oneindia Kannada

   ಗೋವಾದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಹೇಳಿವೆ. ಆದರೆ ಪ್ರತಿಪಕ್ಷ ಕಾಂಗ್ರೆಸ್ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಶೇ 65ರಷ್ಟು ಜನರು ರಾಜ್ಯದಲ್ಲಿ ಬದಲಾವಣೆ ಬಯಸಿದ್ದಾರೆ ಎಂದು ಹೇಳುತ್ತಿದೆ. ಪಕ್ಷದ ಅಧಿಕಾರ ಹಿಡಿಯಲಿದೆ ಎಂದು ನಾಯಕರು ವಿಶ್ವಾಸದಲ್ಲಿದ್ದಾರೆ.

   ಚಿಕ್ಕಮಾಗರವಲ್ಲಿ ತಿಮ್ಮೇಗೌಡ ರವಿ
   Know all about
   ಚಿಕ್ಕಮಾಗರವಲ್ಲಿ ತಿಮ್ಮೇಗೌಡ ರವಿ
   English summary
   BJP national general secretary CT Ravi said that BJP has shortlisted the names of candidates for 40 seats for the 2022 Goa assembly elections.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X