ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿಯಲ್ಲಿ ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸಿದ ಯೋಗಿ ಸರ್ಕಾರ

|
Google Oneindia Kannada News

ನೋಯ್ಡಾ, ಮೇ 18: ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿದ್ದ ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಹೊಸ ಮದರಸಾಗಳಿಗೆ ತನ್ನ ಅನುದಾನದ ಪಟ್ಟಿಯಿಂದ ಹೊರಗಿಡುವ ಪ್ರಸ್ತಾಪಕ್ಕೆ ಉತ್ತರ ಪ್ರದೇಶದ ಕ್ಯಾಬಿನೆಟ್ ಅಂಗೀಕರಿಸಿದೆ.

ಯೋಗಿ ಆದಿತ್ಯನಾಥ್‌ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ಅಖಿಲೇಶ್ ಯಾದವ್ ಸರ್ಕಾರದ ನೀತಿಗೆ ಅಂತ್ಯವಾಡಿದೆ. ಯೋಗಿ ಆದಿತ್ಯನಾಥ್ ನೇತೃತ್ವದ ಸಂಪುಟದಲ್ಲಿ ಇನ್ನು ಮುಂದೆ ಹೊಸ ಮದರಸಾಗಳಿಗೆ ಯಾವುದೇ ಅನುದಾನ ನೀಡದಿರುವುದಕ್ಕೆ ನಿರ್ಧರಿಸಿದೆ.

Hoax Bomb Threat- ಹುಸಿ ಬಾಂಬ್ ಕರೆ: ರೈಲ್ವೆ ಗಲಿಬಿಲಿ- ಗೋರಖಪುರ್ ರೈಲು ಗಂಟೆಗಟ್ಟಲೆ ಸ್ಥಗಿತHoax Bomb Threat- ಹುಸಿ ಬಾಂಬ್ ಕರೆ: ರೈಲ್ವೆ ಗಲಿಬಿಲಿ- ಗೋರಖಪುರ್ ರೈಲು ಗಂಟೆಗಟ್ಟಲೆ ಸ್ಥಗಿತ

ಸರಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಮದರಸಾ ಆಧುನೀಕರಣ ಯೋಜನೆಯಡಿಯಲ್ಲಿ 479 ಕೋಟಿ ರೂ.ಗಳನ್ನು ವಿನಿಯೋಗಿಸಿತ್ತು. ರಾಜ್ಯದಲ್ಲಿ ಸುಮಾರು 16,000 ನೋಂದಾಯಿತ ಮದರಸಾಗಳ 558 ಸಂಸ್ಥೆಗಳಿಗೆ ಹಣವನ್ನು ಮಂಜೂರು ಮಾಡಿದೆ.

UP Cabinet Accepts Proposal to Stop Grants to New Madarasas

ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ಒಂದು ವಾರದಲ್ಲೇ ಈ ನಿರ್ಧಾರ:
ಯುಪಿ ಸರಕಾರ ವಾರದ ಹಿಂದೆಯಷ್ಟೇ ರಾಜ್ಯದ ಎಲ್ಲಾ ಮದರಸಾಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ತರಗತಿಗಳನ್ನು ಆರಂಭಿಸುವ ಮೊದಲು ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿತ್ತು. ಒಂದು ವಾರದ ಅಂತರದಲ್ಲಿ, ಹೊಸ ಮದರಸಾಗಳಿಗೆ ಧನಸಹಾಯವನ್ನು ನಿಲ್ಲಿಸುವ ನಿರ್ಧಾರವನ್ನು ಪ್ರಕಟಿಸಿದೆ. ಈ ಆದೇಶವನ್ನು ಮೇ 12 ರಂದು ಜಾರಿಗೊಳಿಸಲಾಗಿತ್ತು. ಯುಪಿ ಸರ್ಕಾರ ರಾಷ್ಟ್ರಗೀತೆ ಕಡ್ಡಾಯಗೊಳಿಸಿದ ನಂತರ ಬಿಜೆಪಿ ನೇತೃತ್ವದ ಸರಕಾರವಿರುವ , ಮಧ್ಯಪ್ರದೇಶ, ಹರಿಯಾಣ ಮತ್ತು ಕರ್ನಾಟಕದ ಬಿಜೆಪಿ ಸರಕಾರಗಳು ಕೂಡ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸುವುದರ ಬಗ್ಗೆ ಚಿಂತಿಸುತ್ತಿವೆ.

ಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸುಲಕ್ನೋ: ವಿಗ್ರಹ ಕದ್ದ ಕಳ್ಳರನ್ನು ಕಾಡಿದ ಕೆಟ್ಟ ಕನಸು, ಬದಲಾಯ್ತು ಕಳ್ಳರ ಮನಸು

ಡ್ಯಾನಿಶ್ ಆಜಾದ್ ಅನ್ಸಾರಿ ಘೋಷಣೆ
ಹೊಸ ಮದರಸಾಗಳಿಗೆ ಅನುದಾನ ನಿಲ್ಲಿಸುವ ಈ ಆದೇಶವನ್ನು ಉತ್ತರ ಪ್ರದೇಶದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಮಂಡಿಸಿದ ಪ್ರಸ್ತಾವನೆಯನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಆದೇಶ ಮಂಡಿಸಿದರು. ಮಾರ್ಚ್ 24 ರಂದು ನಡೆದ ಯುಪಿ ಮದರಸಾ ಶಿಕ್ಷಣ ಮಂಡಳಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ನಕಲಿ ಮದರಸಾಗಳ ಬಗ್ಗೆ ಸರ್ಕಾರಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಸಮಿತಿಯನ್ನು ಸಹ ಘೋಷಿಸಲಾಗಿತ್ತು. ಉತ್ತರ ಪ್ರದೇಶದಲ್ಲಿ 7,000ಕ್ಕೂ ಹೆಚ್ಚು ಮದರಸಾಗಳಿವೆ. ಇದರ ಪ್ರಕಾರ ಬ್ಲಾಕ್ ಶಿಕ್ಷಣಾಧಿಕಾರಿಗಳು ಹಾಗೂ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ತಿಳಿಸಲಾಗಿದೆ. ಇತ್ತೀಚೆಗಷ್ಟೇ ಯೋಗಿ ಸರ್ಕಾರ ರಾಜ್ಯದ ಮದರಸಾಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಿತ್ತು. ಈ ಆದೇಶವು ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಿಗೆ ಅನ್ವಯಿಸುತ್ತದೆ ಎಂದು ಮದರಸಾ ಶಿಕ್ಷಣ ಮಂಡಳಿ ಆದೇಶದಲ್ಲಿ ತಿಳಿಸಿದೆ.

(ಒನ್ಇಂಡಿಯಾ ಸುದ್ದಿ)

English summary
Yogi Adityanath cabinet on Tuesday accepted a proposal to exclude new madrasas from its grants list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X