ವಿಶ್ವದಲ್ಲೇ ಅತ್ಯಂತ ದುಬಾರಿ ಮಾಸ್ಕ್: ಬೆಲೆ 11 ಕೋಟಿ ರೂಪಾಯಿ
ನವದೆಹಲಿ, ಆಗಸ್ಟ್ 10: ಇಸ್ರೇಲ್‌ನ ಆಭರಣ ಕಂಪನಿಯೊಂದು ವಿಶ್ವದ ಅತ್ಯಂತ ದುಬಾರಿ ಕೊರೊನಾವೈರಸ್ ಮಾಸ್ಕ್‌ವೊಂದನ್ನು ತಯಾರಿಸಿದೆ. ಚಿನ್ನ, ವಜ್ರದಿಂದ ಮಾಡಿರುವ ಈ ಮಾಸ್ಕ್‌ನ ಬೆಲೆ ಬರೋಬ್ಬರಿ 1.5 ಮಿಲಿಯನ್ ಡಾಲರ್. ಅಂದರೆ ಭಾರತದ ರೂಪಾಯಿಗಳಲ್ಲಿ ಸುಮಾರು 11 ಕೋಟಿ ರೂಪಾಯಿ
18 ಕ್ಯಾರೆಟ್ ಬಿಳಿ ಚಿನ್ನದ ಮಾಸ್ಕ್ ಅನ್ನು 3,600 ಬಿಳಿ ಮತ್ತು ಕಪ್ಪು ವಜ್ರಗಳಿಂದ ಅಲಂಕರಿಸಲಾಗಿದೆ ಮತ್ತು ಖರೀದಿದಾರರ ಕೋರಿಕೆಯ ಮೇರೆಗೆ ಉನ್ನತ ದರ್ಜೆಯ N99 ಫಿಲ್ಟರ್‌ಗಳನ್ನು ಅಳವಡಿಸಲಾಗುವುದು ಎಂದು ಡಿಸೈನರ್ ಐಸಾಕ್ ಲೆವಿ ತಿಳಿಸಿದ್ದಾರೆ.
ಯವೆಲ್ ಕಂಪನಿಯ ಮಾಲೀಕರಾದ ಲೆವಿ, ಖರೀದಿದಾರರ ಬೇಡಿಕೆ ಪೂರೈಸುವುದು ನಮ್ಮ ಕೆಲಸವಾಗಿದ್ದು, ಇದು ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳುತ್ತದೆ ಮತ್ತು ಇದು ವಿಶ್ವದ ಅತ್ಯಂತ ಬೆಲೆಬಾಳುವ ಫೇಸ್ ಮಾಸ್ಕ್ ಎಂದು ಹೇಳಿದರು.

ಕಳೆದ ತಿಂಗಳು ಕೊಯಮತ್ತೂರ ಮೂಲದ ಆಭರಣ ತಯಾರಕರೊಬ್ಬರು 2.75 ಲಕ್ಷ ರೂಪಾಯಿ ಬೆಲೆಬಾಳುವ ಮಾಸ್ಕ್ ಮತ್ತು 15,000 ರೂ. ಬೆಲೆ ಬಾಳುವ ಚಿನ್ನ, ಬೆಳ್ಳಿ ಎಳೆಗಳನ್ನು ಮಾಡಿದ್ದರು. ಆದರೆ ಇಸ್ರೇಲಿ ಕಂಪನಿಯು ಬರೋಬ್ಬರಿ 11 ಕೋಟಿ ಮೌಲ್ಯದ ಮಾಸ್ಕ್ ತಯಾರಿಸಿದ್ದು ಅಚ್ಚರಿ ಸೃಷ್ಠಿಸಿದೆ.












Click it and Unblock the Notifications