ಮೈಮೇಲೆ ಮೆಟ್ರೋ ರೈಲು ಹರಿದರೂ ಯುವತಿ ಪವಾಡದಂತೆ ಪಾರು

ನವದೆಹಲಿ, ಮಾರ್ಚ್ 13: ಮೈಮೇಲೆ ಮೆಟ್ರೋ ರೈಲು ಹರಿದರೂ ಯುವತಿ ಪವಾಡದಂತೆ ಬದುಕಿ ಬಂದಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಕೈ ತಪ್ಪಿ ಹಳಿಯ ಮೇಲೆ ಬಿದ್ದಿರುವ 2 ಸಾವಿರ ರೂವನ್ನು ಎತ್ತಿಕೊಳ್ಳಲು ಕೆಳಗಿಳಿದಿದ್ದ ಯುವತಿ ಮೇಲೆ ಮೆಟ್ರೋ ಹರಿದಿದೆ.ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಆಕೆ ಪಾರಾಗಿದ್ದಾಳೆ.

ಬೆಳಗ್ಗೆ 10.30 ಸುಮಾರಿಗೆ ಫ್ಲ್ಯಾಟ್‌ಫಾರ್ಮ್ ಮೇಲೆ ನಿಂತಿದ್ದ ಯುವತಿಯೊಬ್ಬಳು ನೀಲಿ ಲೈನ್‌ನಲ್ಲಿ ಸಂಚರಿಸುವ ಮೆಟ್ರೊಗಾಗಿ ಕಾಯುತ್ತಿದ್ದಳು.

Woman Jumps On Metro Track To Pick Rs 2000 Note

ಆಕೆಯ ಕೈಯಲ್ಲಿದ್ದ 2000 ರೂಪಾಯಿ ನೋಟೊಂದು ಹಾರಿ ಹಳಿಯ ಮೇಲೆ ಬಿದ್ದಿದೆ. ಅಷ್ಟರಲ್ಲಿ ಮೆಟ್ರೊ ಕೂಡ ಬಂದಿದೆ. ಆದರೆ ನೋಟನ್ನು ಎತ್ತಿಕೊಳ್ಳುವ ಭರದಲ್ಲಾಕೆ ಮೆಟ್ರೋ ಬರುತ್ತಿರುವುದು ನೋಡದೆ ಕೆಳಗೆ ಹಾರಿದ್ದಾಳೆ.

ಮೆಟ್ರೊ ಬರುತ್ತಿರುವುದು ಆಕೆಯ ಗಮನಕ್ಕೆ ಬಂದಿದೆ. ಹೀಗಾಗಿ ಪ್ರಾಣ ಕಾಪಾಡಿಕೊಳ್ಳಲು ಹಳಿಯ ಮಧ್ಯೆ ಮಲಗಿ ಬಿಟ್ಟಿದ್ದಾರೆ. ಅಲ್ಲಿದ್ದವರೆಲ್ಲ ಯುವತಿ ಸತ್ತಿದ್ದಾಳೆ ಎಂಬ ಆತಂಕದಿಂದ ನೋಡುತ್ತಿರುವಾಗ ಆಕೆ ಕೈಯಲ್ಲಿ 2ಸಾವಿರ ರೂಪಾಯಿ ನೋಟು ಹಿಡಿದುಕೊಂಡು ಎದ್ದು ಬಂದಿದ್ದಾಳೆ. ಸಣ್ಣಪುಟ್ಟ ಗಾಯಗಳನ್ನು ಬಿಟ್ಟರೆ ಆಕೆ ಸುರಕ್ಷಿತವಾಗಿದ್ದಾಳೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+