• search
  • Live TV
ನವದೆಹಲಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಇಂದಿರಾ ಗಾಂಧಿಗೆ ಮಾರಕ ಕ್ಯಾನ್ಸರ್ ಇತ್ತು'

By Srinath
|

ನವದೆಹಲಿ, ಏ.26: ಕಾಂಗ್ರೆಸ್ ಪಕ್ಷದ ಹಾಲಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕ್ಯಾನ್ಸರ್ ಇದ್ದು, ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಗಳು ಈ ಹಿಂದೆ ಕೇಳಿಬಂದಿದ್ದವು. ಆದರೆ ತಾಜಾ ಏನಪ್ಪಾ ಅಂದರೆ ಸೋನಿಯಾರ ಅತ್ತೆ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರಿಗೆ ಮಾರಕ ಕ್ಯಾನ್ಸರ್ ಇತ್ತು ಎಂಬ ಮಾಹಿತಿ ಬಯಲಾಗಿದೆ.

ಇಂತಹ ಸೂಕ್ಷ್ಮ ಮಾಹಿತಿಯನ್ನು ಪ್ರಸ್ತುತ ಬಿಜೆಪಿಯಲ್ಲಿರುವ ಸುಬ್ರಮಣ್ಯ ಸ್ವಾಮಿ ಅವರು ಅಮೆರಿಕದ ಗುಪ್ತಚರ ದಳಕ್ಕೆ ರವಾನಿಸಿದ್ದರು ಎಂದು ಪತ್ರಿಕೆಯೊಂದರ ವರದಿಯನ್ನು ಉಲ್ಲೇಖಿಸಿ 'ವಿಕಿಲೀಕ್ಸ್‌' ತಿಳಿಸಿದೆ.

ಇಂದಿರಾ ಗಾಂಧಿ ಅವರ ಆರೋಗ್ಯಕ್ಕೆ ಸಂಬಂಧಿಸಿದ ಗುಪ್ತ ಮಾಹಿತಿಯಷ್ಟೇ ಅಲ್ಲ. ಪ್ರಧಾನಿಯಾಗಿ 1977ರಲ್ಲಿ ತುರ್ತುಪರಿಸ್ಥಿತಿ ವೇಳೆ ಇಂದಿರಾ ಏನೆಲ್ಲಾ ಚುನಾವಣಾ ತಂತ್ರಗಳನ್ನು ಅಳವಡಿಸಿಕೊಂಡಿದ್ದರು ಎಂಬುದರ ಕುರಿತೂ ಬಿಜೆಪಿಯ ಹಿರಿಯ ನಾಯಕ ಸುಬ್ರಮಣ್ಯ ಸ್ವಾಮಿ ಅವರು ಅಮೆರಿಕಕ್ಕೆ ಮಾಹಿತಿ ನೀಡಿದ್ದರು.

ಇಂದಿರಾ ಅವರು ಅಂತಿಮ ಹಂತದ ಕ್ಯಾನ್ಸರಿನಿಂದ ಬಳಲುತ್ತಿದ್ದಾರೆ ಎಂಬುದು ಸಂದೇಶದ ತಾತ್ಪರ್ಯವಾಗಿತ್ತು. ಆಗ ಜಗಜೀವನ್ ರಾಮ್ ಅವರು ರಾಜೀನಾಮೆ ಪತ್ರ ಸಲ್ಲಿಸುತ್ತಾ 'ಮೇಡಂ ತಾವು ಬೇಗನೇ ಗುಣಮುಖರಾಗಬೇಕೆಂದು ಪ್ರಾರ್ಥಿಸುವೆ' ಎಂದು ಕೋರಿದ್ದರಂತೆ.

ಅಂದಹಾಗೆ ಭಾರತದಿಂದ ಅಮೆರಿಕಕ್ಕೆ ರವಾನೆಯಾದ ಅತ್ಯುನ್ನತ ಖಾಸಗಿ ಮಾಹಿತಿಗಳ ಪ್ರಮುಖ ಮೂಲವೇ ಸುಬ್ರಮಣ್ಯ ಸ್ವಾಮಿ ಅವರಾಗಿದ್ದರು ಎಂದೂ ವಿಕಿಲೀಕ್ಸ್‌ (WikiLeaks) ಹೇಳುತ್ತಿದೆ.

'ಆರೋಗ್ಯ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಮಾರ್ಚ್‌ ತಿಂಗಳಲ್ಲಿ ಚುನಾವಣೆ ನಡೆಸಲು ಇಂದಿರಾ ಬಯಸಿದ್ದಾರೆ' ಎಂದು ಸ್ವಾಮಿ 1977ರಲ್ಲಿ ಅಮೆರಿಕಕ್ಕೆ ತಿಳಿಸಿದ್ದರಂತೆ. 'ಕ್ಯಾನ್ಸರ್‌ ಇರುವ ಕಾರಣಕ್ಕೆ, ಮುಂದಿನ 60-90 ದಿನಗಳಲ್ಲಿ ಪುತ್ರ ಸಂಜಯ್‌ ಗಾಂಧಿ ಅವರನ್ನು ದಿಢೀರ್‌ ಉತ್ತರಾಧಿಕಾರಿ ಮಾಡಲು ಅಚ್ಚರಿಯ ಚುನಾವಣೆಗೆ ಇಂದಿರಾ ಗಾಂಧಿ ಮುಂದಾಗಿದ್ದರು' ಎಂದು ಅಮೆರಿಕ ಮೂಲದ ನ್ಯೂಸ್‌ ವೀಕ್‌ ಆಗ ವರದಿ ಪ್ರಕಟಿಸಿತ್ತು ಎಂದು ವಿಕಿಲೀಕ್ಸ್‌ ಹೇಳಿದೆ.

English summary
WikiLeaks says Subramanian Swamy informed US about Indira Gandhi's cancer. The report states that Indira Gandhi was 'indisposed' and wanted to set March as the election date to square things in her favour in light of her alleged bad health (according to the report, she was suffering from terminal cancer).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X