ಮೋದಿ ಪ್ರಧಾನಿಯಾಗಿ ಇಂದೇ ಪ್ರಮಾಣವಚನ ಸ್ವೀಕರಿಸೋದು ಯಾಕೆ ಗೊತ್ತಾ?
Recommended Video
ನವದೆಹಲಿ, ಮೇ 30: ಭಾರತದ ಹದಿನೈದನೇ ಪ್ರಧಾನಿಯಾಗಿ ನರೇಂದ್ರ ದಾಮೋದರದಾಸ್ ಮೋದಿ ಅವರು ಗುರುವಾರ ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಅಷ್ಟಕ್ಕೂ ಮೋದಿ ಅವರು ಪ್ರಮಾಣ ವಚನ ಸ್ವೀಕಾರಕ್ಕೆ ಇದೇ ದಿನವನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತಾ?
ಟ್ರೋಲ್ ಹೈಕ್ಳ ಪ್ರಕಾರ, ಮೇ 30 ಏಕಾದಶಿಯಾಗಿರುವುದರಿಂದ ತಾವೂ ತಿನ್ನದ, ಬೇರೆಯವರಿಗೆ ತಿನ್ನುವುದಕ್ಕೂ ಬಿಡದ ನರೇಂದ್ರ ಮೋದಿ ಅವರು 'ಉಪವಾಸ'ದ ಜೊತೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

"ಮೋದಿ ತಾವೂ ಲಂಚ ಮುಟ್ಟುವುದಿಲ್ಲ, ಲಂಚ ತಿನ್ನುವವರಿಗೂ ಅದಕ್ಕೆ ಅವಕಾಶ ನೀಡುವುದಿಲ್ಲ" ಎಂಬ ಮಾತು ಅವರು 2014 ರಲ್ಲಿ ಪ್ರಧಾನಿಯಾದ ದಿನದಿಂದಲೂ ಚಾಲ್ತಿಯಲ್ಲಿತ್ತು. ಅದನ್ನೇ ಮತ್ತೆ ನೆನಪಿಸಿಕೊಂಡಿರುವ ಮೋದಿ ಅಭಿಮಾನಿಗಳು ಏಕಾದಶಿ ದಿನವೇ ಮೋದಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದಕ್ಕೆ ಕಾರಣ ಅದೇ ಎಂದಿದ್ದಾರೆ.
ಆದರೆ ಅಸಲಿಗೆ ಇಂದು ಬೆಳಗ್ಗೆ ಮಾತ್ರ ಏಕಾದಶಿ ಇದ್ದು, ಸಂಜೆಯ ಹೊತ್ತಿಗೆ ದ್ವಾದಶಿ ಆರಂಭವಾಗುತ್ತದೆ.
ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಮೋದಿ ಅವರು ಪ್ರಧಾನಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಮೋದಿ ಅವರೊಂದಿಗೆ 50-60 ಸಚಿವರೂ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನದ ,ಮುಹೂರ್ತವನ್ನು ವಿಶ್ಲೇಷಿಸಿರುವ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ, ಅವರಿಗೆ ಶುಭಾಶುಭ ಫಲಗಳೆರಡೂ ಇವೆ ಎಂದಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications