ಬಯಲಾಯ್ತು ರಾಹುಲ್ ಗಾಂಧಿ ಗೋತ್ರ ರಹಸ್ಯ! ಯಾವ ಗೋತ್ರ ಗೊತ್ತಾ?
Recommended Video

ನವದೆಹಲಿ, ಅಕ್ಟೋಬರ್ 31: ಇತ್ತೀಚೆಗಷ್ಟೇ ರಾಹುಲ್ ಗಾಂಧಿ ಅವರ 'ಗೋತ್ರ' ಯಾವುದು ಎಂಬ ಬಗ್ಗೆ ಬಿಜೆಪ ಪ್ರಶ್ನೆ ಎತ್ತಿತ್ತು. ಆ ಕುರಿತು ಇದೀಗ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರ ಗೋತ್ರ ಯಾವುದು ಎಂಬುದನ್ನು ಬಯಲುಮಾಡಿದೆ!

'ರಾಹುಲ್ ಗಾಂಧಿಯವರ ಗೋತ್ರ, 'ಭಾರತೀಯ' ಎನ್ನುವ ಮೂಲಕ ಬಿಜೆಪಿಗೆ ಪ್ರತ್ಯುತ್ತರ ನೀಡಿದೆ. ರಾಹುಲ್ ಗಾಂಧಿ ಅವರ ಗೋತ್ರ ಈ ಸಂದರ್ಭದಲ್ಲಿ ಯಾಕೆ ಪ್ರಸ್ತುತ ಎಂಬುದು ಅರ್ಥವಾಗುತ್ತಿಲ್ಲ. ತನ್ನ್ ಹುಳುಕುಗಳ ಬಗ್ಗೆ ಮಾತನಾಡಲಾರದ ಬಿಜೆಪಿ ಇಂಥ ವಿಷಯಗಳ ಬಗ್ಗೆ ಫೋಕಸ್ ಮಾಡುತ್ತಿದೆ ಎಂದು ಅವರು ಹೇಳಿದರು.
ಚುನಾವಣೆಯ ಸಮಯದಲ್ಲಿ ಟೆಂಪಲ್ ರನ್ ಆರಂಭಿಸುವ ರಾಹುಲ್ ಗಾಂಧಿ, ತಮ್ಮ ಗೋತ್ರ ಯಾವುದು ಎಂಬುದನ್ನು ಹೇಳಲಿ. ಪ್ರತಿ ಹಿಂದುವೂ ಯಾವ ಋಷಿ ಪರಂಪರೆಯಿಂದ ಬಂದವರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಗೋತ್ರ ಯಾವುದು ಎಂಬುದು ತಿಳಿದಿರಬೇಕು ಎಂದು ಸಂಬಿತ್ ಪಾತ್ರ ಹೇಳಿದ್ದರು.
ಅಷ್ಟೇ ಅಲ್ಲ, ರಾಹುಲ್ ಗಾಂಧಿ ಅವರು ತೊಡುವ ಜನಿವಾರ(ಯಜ್ಞೋಪವಿತ) ಯಾವುದು ಎಂದೂ ಪಾತ್ರ ಪ್ರಶ್ನಿಸಿದ್ದರು.
ಆದರೆ ಈ ಗೋತ್ರ, ಜನಿವಾರದ ಸಂಗತಿಗಳು ಸದ್ಯಕ್ಕೆ ಪ್ರಸ್ತುತವೇ ಎಂದು ಹಲವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications