'ನಾವು ಬಿಜೆಪಿ ತೊರೆದಿರಬಹುದು. ಆದರೆ, ಹಿಂದುತ್ವ ತೊರೆದಿಲ್ಲ'
ಅಯೋಧ್ಯೆ, ಮಾರ್ಚ್ 7: ನಾವು ಬಿಜೆಪಿ ತೊರೆದಿರಬಹುದು. ಆದರೆ, ಹಿಂದುತ್ವ ತೊರೆದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನೂರು ದಿನಗಳ ತರುವಾಯ ಅವರು ಶನಿವಾರ ಅಯೋಧ್ಯೆಗೆ ಭೇಟಿ ನೀಡಿ ಮಾತನಾಡಿದ್ದಾರೆ.
ನಾವು ಮಹಾರಾಷ್ಟ್ರದ ಹಿತಕ್ಕಾಗಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇರುವ ಎನ್‌ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿರಬಹುದು. ಆದರೆ, ಹಿಂದುತ್ವವನ್ನು ನಾವು ಬಿಟ್ಟು ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಎಂದರೆ ಹಿಂದುತ್ವ ಅಲ್ಲ. ಬಿಜೆಪಿ ಒಂದೇ ಹಿಂದೂತ್ವ ಪ್ರತಿನಿಧಿಸುವುದಿಲ್ಲ. ಹಿಂದುತ್ವಕ್ಕಾಗಿ ಶಿವಸೇನೆಯೂ ಇದೆ. ಇದ್ದೆ ಇರುತ್ತದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications