ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್‌ಗೆ ನಾವು ನಿಷ್ಠರು: ಡಿ.ಕೆ.ಶಿವಕುಮಾರ್
Recommended Video
ನವದೆಹಲಿ, ಜೂನ್ 19: ದೆಹಲಿಯಲ್ಲಿರುವ ಸಚಿವ ಡಿ.ಕೆ.ಶಿವಕುಮಾರ್ ಅವರು ರೋಷನ್ ಬೇಗ್ ಉಚ್ಛಾಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರ ಪ್ರತಿಕ್ರಿಯೆ ಅವರ ಅಸಮಾಧಾನವನ್ನು ಪರೋಕ್ಷವಾಗಿ ಸೂಚಿಸುವಂತಿದೆ.
ಮಾಧ್ಯಮಗಳನ್ನು ಇಂದು ಬೆಳಿಗ್ಗೆ ಎದುರುಗೊಂಡ ಡಿ.ಕೆ.ಶಿವಕುಮಾರ್ ಅವರು, ರೋಶನ್ ಬೇಗ್ ಅವರನ್ನು ಉಚ್ಛಾಟಿಸಿದ್ದು ಗೊತ್ತೇ ಇಲ್ಲ, ಈಗ ಯಾರೋ ಇಲ್ಲಿ (ಎಐಸಿಸಿ) ಕಚೇರಿಯಲ್ಲಿ ಮಾತನಾಡುತ್ತಿದ್ದರು ಎಂದು ಹೇಳಿದರು.
ಪತ್ರಕರ್ತರು ಬಿಡದೆ ಮತ್ತೆ ಪ್ರಶ್ನೆ ಕೇಳಿದಾಗ, ಈ ಬಗ್ಗೆ ಮಾಹಿತಿ ಇಲ್ಲವೆಂದು, ಮಾಹಿತಿ ಪಡೆದುಕೊಂಡು ಮಾತನಾಡುವುದಾಗಿ ನುಣುಚಿಕೊಳ್ಳುವ ಯತ್ನವನ್ನು ಡಿ.ಕೆ.ಶಿವಕುಮಾರ್ ಮಾಡಿದರು.

ರೋಶನ್ ಬೇಗ್ ಆರೋಪಿಸಿರುವಂತೆ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ ಇದೆಯೇ? ಸಿದ್ದರಾಮಯ್ಯ ಬಣ ಅಸ್ಥಿತ್ವದಲ್ಲಿಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ವ್ಯಕ್ತಿ ಪೂಜೆ ತಪ್ಪು ಎಂಬುದನ್ನು ಮುಂಚಿನಿಂದಲೂ ಹೇಳಿಕೊಂಡು ಬಂದಿದ್ದೇನೆ. ನಾವು ಗಾಂಧಿ ಕುಟುಂಬಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರು ಎಂದು ಅವರು ಹೇಳಿದರು.
ಮುಂದುವರೆದು ಮಾತನಾಡಿದ ಅವರು, ಪಕ್ಷದಲ್ಲಿ ಶಿಸ್ತು ಕಾಪಾಡುವುದು ಅನಿವಾರ್ಯ, ಸಿದ್ದರಾಮಯ್ಯ ಅವರು ಸಿಎಲ್‌ಪಿ ನಾಯಕರು ಅವರಿಗೆ ಗೌರವ ಕೊಡಲೇ ಬೇಕು, ಪಕ್ಷದ ಅಧ್ಯಕ್ಷರಿಗೂ ಗೌರವ ಕೊಡಲೇ ಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.












Click it and Unblock the Notifications