ವಾರಾಂತ್ಯದಲ್ಲಿ ಭುಗಿಲೆದ್ದ JNU, ಕ್ಯಾಂಪಸಿನಲ್ಲಿ ನಡೆದಿದ್ದೇನು?

ನವದೆಹಲಿ, ಜನವರಿ 05: ದೆಹಲಿಯ ಜವಾಹರ ಲಾಲ್ ನೆಹರೂ ವಿವಿಯಲ್ಲಿ ಮಾಸ್ಕ್ ಧಾರಿ ಗೂಂಡಾಗಳಿಂದ ನಡೆದ ಹಲ್ಲೆಯಲ್ಲಿ ಸುಮಾರು 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 18 ಮಂದಿಯನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಸಂಜೆಯಿಂದ ನಡೆದ ಹಿಂಸಾಚಾರದಲ್ಲಿ ವಿದ್ಯಾರ್ಥಿ ಸಂಘಟನೆಗಳ ಪರಸ್ಪರ ಕೆಸರೆರಚಾಟ, ಕೂಗಾಟ, ತಳ್ಳಾಟ, ಘೋಷಣೆ ನಡುವೆ ಪೊಲೀಸರು ಕ್ಯಾಂಪಸಿಗೆ ಎಂಟ್ರಿ ಕೊಟ್ಟಿದ್ದಾರೆ. ವಿವಿ ಆವರಣದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದ್ದು, ಕ್ಯಾಂಪಸ್ ಒಳಗೂ- ಹೊರಗೂ ಆತಂಕದ ವಾತಾವರಣ ಮುಂದುವರೆದಿದೆ...

ಜೆಎನ್ ಯು ಹಿಂಸಾಚಾರದಲ್ಲಿ ಗಾಯಗೊಂಡ 18 ಮಂದಿಗೆ ಏಮ್ಸ್ ನಲ್ಲಿ trauma ಕೇಂದ್ರದಲ್ಲಿ ಸದ್ಯಕ್ಕೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕ್ಯಾಂಪಸಿನಲ್ಲಿದ್ದ ವಿದ್ಯಾರ್ಥಿಗಳು, ಶಿಕ್ಷಕರು, ಟಿವಿ ವರದಿಗಾರರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ನಡೆದಿದೆ. ದೆಹಲಿಯ ಈ ಕೇಂದ್ರ ವಿಶ್ವವಿದ್ಯಾಲಯದಲ್ಲಿನ ಆತಂಕ ವಾತವರಣ, ಹಲ್ಲೆ ಹಿಂದೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಇದೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ಹೇಳಿಕೆ ನೀಡಿದೆ. ಆದರೆ, ಈ ಗಲಾಟೆ ಶುರುವಾಗಿದ್ದು ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳಿಂದ ಎಂದು ಎಬಿವಿಪಿ ಹೇಳಿದೆ.

Violence in JNU: Police enters the campus, many injured

"50ಕ್ಕೂ ಅಧಿಕ ಮಾಸ್ಕ್ ಧಾರಿಗಳು ಒಮ್ಮೆಗೆ ಕ್ಯಾಂಪಸಿನಲ್ಲಿ ಕಾಣಿಸಿಕೊಂಡು, ಎಲ್ಲರ ಮೇಲೆ ಹಲ್ಲೆ ಮಾಡತೊಡಗಿದರು. ಮಾಸ್ಕ್ ಧಾರಿಗಳ ಕೈಯಲ್ಲಿ ಆಯುಧಗಳಿತ್ತು. ಅವರೆಲ್ಲರೂ ವಿದ್ಯಾರ್ಥಿಗಳಲ್ಲ, ಪೂರ್ವನಿಯೋಜಿತವಾಗಿ ಈ ರೀತಿ ಕೃತ್ಯ ಎಸಗಿದ್ದಾರೆ" ಎಂದು ಪ್ರತ್ಯಕ್ಷದರ್ಶಿ ವಿದ್ಯಾರ್ಥಿ ಅಮಿತ್ ಥೋರಟ್ ಪ್ರತಿಕ್ರಿಯಿಸಿದ್ದಾರೆ. ಈ ನಡುವೆ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶ್ ಘೋಶ್ ಸೇರಿದಂತೆ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ, ವಿದ್ಯಾರ್ಥಿಗಳು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ.

ಫ್ಲಾಗ್ ಮಾರ್ಚ್: ಕ್ಯಾಂಪಸ್ ಪ್ರವೇಶಿಸಿದ ಪೊಲೀಸರು, ಮುಖ್ಯ ಗೇಟ್ ಬಾಗಿಲು ಬಂದ್ ಮಾಡಿದ್ದಾರೆ. ಫ್ಲಾಗ್ ಮಾರ್ಚ್ ನಡೆಸಿದ್ದಾರೆ. ಮೂರು ಹಾಸ್ಟೆಲ್ ಪ್ರದೇಶದಲ್ಲಿ ಪರಿಶೀಲನೆ ನಡೆಸಿದ್ದೆವೆ. ಪರಿಸ್ಥಿತಿ ಶಾಂತವಾಗಿದೆ ಎಂದು ಡಿಸಿಪಿ(ನೈಋತ್ಯ) ದೇವೇಂದ್ರ ಆರ್ಯ ಹೇಳಿದ್ದಾರೆ.

ಮುಂದುವರೆದ ಪ್ರತಿಭಟನೆ: ಜೆಎನ್ ಯುನಲ್ಲಿ ನಡೆದ ಹಿಂಸಾಚಾರವನ್ನು ಖಂಡಿಸಿ, ದೆಹಲಿ ಪೊಲೀಸ್ ಕೇಂದ್ರ ಕಚೇರಿ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು,ಹಲ್ಲೆ ನಡೆಸಿದ ಗೂಂಡಾಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.

ಹಲ್ಲೆಗೆ ಖಂಡನೆ: ದೆಹಲಿ ರಾಜ್ಯಪಾಲರಾದ ಲೆ. ಅನಿಲ್ ಬೈಜಾಲ್ ಅವರು ಹಿಂಸಾಚಾರವನ್ನು ಖಂಡಿಸಿದ್ದು, ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ದೆಹಲಿ ಪೊಲೀಸರು ಹಾಗೂ ವಿವಿ ಆಡಳಿತ ಮಂಡಳಿಗೆ ನಿರ್ದೇಶಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರತಿಕ್ರಿಯಿಸಿ, ಘಟನೆ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆಯಲಾಗುತ್ತಿದ್ದು, ಹಲ್ಲೆಕೋರರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ. ಈ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಘಟನೆ ಬಗ್ಗೆ ದೆಹಲಿ ಪೊಲೀಸರಿಂದ ಮಾಹಿತಿ ಪಡೆದುಕೊಂಡಿರುವ ಸುದ್ದಿ ಬಂದಿದೆ.

ಏಮ್ಸ್ ಗೆ ಭೇಟಿ ನೀಡಿದ ಪ್ರಿಯಾಂಕಾ: ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ನೋಡಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಧ್ರಾ ಅವರು ಧಾವಿಸಿ ಬಂದಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಪರಿಸ್ಥಿತಿ ವಿಚಾರಿಸಿದ ಬಳಿಕ, ಟ್ವೀಟ್ ಮಾಡಿ, ದೆಹಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+