ಬಾಲಿವುಡ್ ಹಿರಿಯ ನಟ ಖಾದರ್ ಖಾನ್ ನಿಧನ, ಕೆನಡಾದಲ್ಲಿ ಅಂತ್ಯಕ್ರಿಯೆ
ನವದೆಹಲಿ, ಜನವರಿ 01: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ಖಾದರ್ ಖಾನ್(81) ಸೋಮವಾರ ಮೃತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕೆನಡಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಖಾದರ್ ಖಾನ್, ಅಲ್ಲಿನ ಕಾಲಮಾನದ ಪ್ರಕಾರ ಸೋಮವಾರ ಸಂಜೆ 6 ಕ್ಕೆ ಮೃತರಾದರು ಎಂದು ಅವರ ಪುತ್ರ ಸರ್ಫರಾಜ್ ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಬಾಲಿವುಡ್ ನಟ, ಸಂಭಾಷಣೆಕಾರ ಖಾದರ್ ಖಾನ್ ವಿಧಿವಶ
ಅವರ ಅಂತ್ಯಕ್ರಿಯೆಯನ್ನು ಕೆನಡಾದಲ್ಲೇ ಮಾಡಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ. ಅವರ ಇಡೀ ಕುಟುಂಬವೂ ಕೆನಡಾದಲ್ಲೇ ವಾಸಿಸುತ್ತಿರುವುದರಿಂದ, ಅಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಹಿಂದಿ ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಸಾಕಷ್ಟು ಹೆಸರು ಗಳಿಸಿದ್ದ ಅವರು ಅತ್ಯುತ್ತಮ ಸಂಭಾಷಣಾಕಾರರಾಗಿಯೂ ಹೆಸರು ಗಳಿಸಿದ್ದರು. ನಾಡದ ಟೋರಾಂಟೋದಲ್ಲಿರುವ ಆಸ್ಪತ್ರೆಯೊಂದರಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ಸುಮಾರು 250ಕ್ಕೂ ಹೆಚ್ಚು ಸಿನಿಮಾಗಳಿಗೆ ಅವರು ಸಂಭಾಷಣೆಯನ್ನು ಬರೆದಿದ್ದರು. ಲಾವಾರಿಸ್, ದಾಗ್, ಅಮರ್ ಅಕ್ಬರ್ ಅಂಥೋನಿ, ಮುಕದ್ದರ್ ಕಾ ಸಿಖಂದರ್, ಸುಹಾಗ್, ಕೂಲಿ, ಶರಾಬಿ ಮುಂತಾದ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದರು.












Click it and Unblock the Notifications