ಸಂಗೀತ ದಿಗ್ಗಜರ ಬದುಕು ಬರಹ ಕೃತಿ ಮೋದಿಗೆ ಅರ್ಪಣೆ

Posted By:
Subscribe to Oneindia Kannada

ನವದೆಹಲಿ, ಜೂನ್ 13: ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರಿಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಹಿರಿಯ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರು ಸಮಕಾಲೀನ 20 ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜರ ಬದುಕು ಕುರಿತ ತಮ್ಮ 'ಮಾಸ್ಟರ್ ಆನ್ ಮಾಸ್ಟರ್ಸ್' ಕೃತಿಯನ್ನು ಪ್ರಧಾನಿಯವರಿಗೆ ಅರ್ಪಿಸಿದರು.

Ustad Amjad Ali Khan calls on PM presents Master on Masters book

ಸಾಮಾಜಿಕ ಮಾಧ್ಯಮಗಳಿಂದ ಕುತ್ತು: ಭಾರತೀಯ ಪರಂಪರೆ, ಸಾಹಿತ್ಯ, ಸಂಸ್ಕೃತಿ, ಸಂಗೀತವನ್ನು ಉಳಿಸಿ ಬೆಳೆಸಲು ಕಾರ್ಯದಲ್ಲಿ ಸಂಗೀತ ದಿಗ್ಗಜರು ಮುಂದಾಗಿದ್ದಾರೆ. ಇದಕ್ಕೆ ನಾವೆಲ್ಲರೂ ಕೈಜೋಡಿಸಬೇಕು ಎಂದು ಪ್ರಧಾನಿ ಮೋದಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಸಾಮಾಜಿಕ ಮಾಧ್ಯಮಗಳಿಂದ ಶಾಸ್ತ್ರೀಯ ಸಂಗೀತಕ್ಕೆ ಧಕ್ಕೆ ಉಂಟಾಗಿದೆ ಎಂದು ಉಸ್ತಾದ್ ಅಮ್ಜದ್ ಖಾನ್ ಅವರು ಅಭಿಪ್ರಾಯಪಟ್ಟರು.

ಮಹೋನ್ನತ ಕೃತಿ : 20ನೇ ಶತಮಾನದ 12 ಸಂಗೀತ ದಿಗ್ಗಜರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಕೃತಿ ಇದಾಗಿದೆ. ಬಡೇ ಗುಲಾಂ ಅಲಿ ಖಾನ್, ಅಮೀರ್ ಖಾನ್, ಬೇಗಂ ಅಖ್ತರ್, ಅಲ್ಲಾ ರಖಾ, ಕೇಸರ್ ಬಾಯಿ ಕೇರ್ಕರ್, ಕುಮಾರ ಗಂಧರ್ವ, ಎಂಎಸ್ ಸುಬ್ಬಲಕ್ಷ್ಮಿ, ಭೀಮಸೇನ್ ಜೋಶಿ, ಬಿಸ್ಮಿಲ್ಲಾ ಖಾನ್, ರವಿಶಂಕರ್, ವಿಲಾಯತ್ ಖಾನ್ ಹಾಗು ಕಿಶನ್ ಮಹಾರಾಜ್ ಅವರ ಬಗ್ಗೆ ಅಮ್ಜದ್ ಖಾನ್ ಅವರು ಬರೆದಿದ್ದಾರೆ. ಘರಾನಾ ಪದ್ಧತಿ, ಸಂಗೀತ ಪರಂಪರೆಯ ಬಗ್ಗೆ ಬೆಳಕು ಚೆಲ್ಲುವ ಈ ಕೃತಿ ಸಂಗೀತ ಪ್ರೇಮಿಗಳ ಮನೆಯಲ್ಲಿ ಇರಲೇಬೇಕಾದ ಕೃತಿ ಎನಿಸಿದೆ.

ಅಮೆಜಾನ್ ನಲ್ಲಿ ಈ ಪುಸ್ತಕ ಖರೀದಿಸಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The veteran musician and Sarod Maestro Ustad Amjad Ali Khan, called on the Prime Minister Shri Narendra Modi, today and presented his book ‘Master on Masters’ on the lives and times of 20 greatest icons of Indian Classical Music.
Please Wait while comments are loading...