ಆರೋಗ್ಯ ಸೇತುವಿನಲ್ಲಿ ಬಳಕೆದಾರರ ಗೌಪ್ಯತೆ ಎಷ್ಟು ಸುರಕ್ಷಿತ?
ನವದೆಹಲಿ, ಮೇ 1: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ ಹಾಗೂ ಅವರಿಗೆ ಸೂಕ್ತ ಚಿಕಿತ್ಸೆ ನೀಡುವ ಕೆಲಸವನ್ನು ಯುದ್ದೋಪಾದಿಯಲ್ಲಿ ಮಾಡುತ್ತಿವೆ. ಜೊತೆಗೆ ಕೊರೊನಾ ವೈರಸ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದೆ.
Recommended Video
ಕೊರೊನಾ ಬಗ್ಗೆ ಜನರಿಗೆ ಅಗತ್ಯ ಮಾಹಿತಿ ನೀಡುವ ಹಾಗೂ ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚುವ, ನಿಗಾ ಇಡುವ ಸಲುವಾಗಿ ಆರೋಗ್ಯ ಸೇತು ಆಪ್ ಅನ್ನು ಸಹ ಪರಿಚಯಿಸಲಾಗಿದೆ.
ಸದ್ಯ ಈ ಆಪ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ದೇಶದ ಜನತೆ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ಮಾಹಿತಿಯನ್ನ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆ ಈ ಆಪ್‌ನಲ್ಲಿ ನಿಡಿರುವ ಮಾಹಿತಿ ಸೋರಿಕೆ ಆಗುತ್ತದೆ ಎಂಬ ಆತಂಕವೂ ಬಹಳ ಜನರಿಗೆ ಕಾಡುತ್ತಿದೆ. ಸ್ವತಃ, ಇದಕ್ಕೆ ಆರೋಗ್ಯ ಸೇತು ಅಪ್ಲಿಕೇಶನ್ ವಿನ್ಯಾಸಗೊಳಿಸಿದ MyGovIndia ಸಂಸ್ಥೆಯ ಸಿಇಒ ಅಭಿಷೇಕ್ ಸಿಂಗ್, ಆರೋಗ್ಯ ಸೇತುವಿನಲ್ಲಿ ಯಾವುದೇ ರೀತಿಯಲ್ಲೂ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಆರೋಗ್ಯ ಸೇತು ಹೇಗೆ ಸುರಕ್ಷಿತ ಎಂಬುದರ ಬಗ್ಗೆ ಸಿಂಗ್ ಹೇಳಿದ್ದಾರೆ. ಮುಂದೆ ಓದಿ....

MyGovIndiaದಿಂದ ಆಪ್ ಅಭಿವೃದ್ಧಿ
ಕೊರೊನಾ ವೈರಸ್ ವಿರುದ್ದ ಹೋರಾಟಕ್ಕೆ ಜನರಲ್ಲಿ ಜಾಗೃತಿ ಅಗತ್ಯ, ಅದರಲ್ಲೂ 130 ಕೋಟಿಗೂ ಅಧಿಕ ಜನರು ಇರುವ ಭಾರತದಲ್ಲಿ ಇದು ಅತ್ಯಗತ್ಯ ಅನ್ನೊದು ಎಲ್ಲರಿಗೂ ಗೊತ್ತಿರುವಂತಹದ್ದೆ. ಇದೇ ಕಾರಣಕ್ಕೆ ಭಾರತ ಸರ್ಕಾರ ಆರೋಗ್ಯ ಸೇತು ಆಪ್ ಅನ್ನು ಪರಿಚಯಿಸಿತ್ತು. ಸದ್ಯ ಈ ಅಪ್ಲಿಕೇಶನ್ MyGovIndia ವಿನ್ಯಾಸಗೊಳಿಸಿದ್ದು, ಜನರ ಸ್ಥಳದ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮತ್ತು ಸೋಂಕಿತ ವ್ಯಕ್ತಿಯು ಸುತ್ತಮುತ್ತಲ ಪ್ರದೇಶದಲ್ಲಿದ್ದರೆ ಬಳಕೆದಾರರಿಗೆ ಎಚ್ಚರಿಕೆ ನಿಡುವ ಕಾರ್ಯವನ್ನ ಮಾಡುವಂತೆ ಆ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ಇದಕ್ಕಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ ಕೋವಿಡ್ -19 ಪರೀಕ್ಷೆಗಳ ಡೇಟಾಬೇಸ್‌ನ ಜೊತೆ ಇದನ್ನು ಲಿಂಕ್ ಮಾಡಿ ಅಪ್ಲಿಕೇಶನ್ ಅನ್ನು ಏಪ್ರಿಲ್ 2 ರಂದು ಪ್ರಾರಂಭಿಸಲಾಗಿತ್ತು.

ಡೇಟಾ ಸುರಕ್ಷತೆಯ ಬಗ್ಗೆ ಅಪಸ್ವರ
ಆದರೆ ಆರೋಗ್ಯ ಸೇತುದಲ್ಲಿನ ಬಳಕೆದಾರರ ಡೇಟಾ ಸುರಕ್ಷತೆಯ ಬಗ್ಗೆ ಅಪಸ್ವರ ಎದ್ದಿತ್ತು. ಏಕೆಂದರೆ ಈ ಅಪ್ಲಿಕೇಶನ್ ನಲ್ಲಿ ಬಳಕೆದಾರರು ಮುಂದುವರೆಯಬೇಕಾದರೆ ಗೌಪ್ಯತೆ ಮಾನದಂಡಗಳ ಬಗ್ಗೆ ಮಾಹಿತಿ ನೀಡಬೇಕು ಬಳಕೆದಾರರ ಹೆಸರು, ಲಿಂಗ, ವೃತ್ತಿ, ಮತ್ತು ಕಳೆದ 30 ದಿನಗಳಲ್ಲಿ ಎಲ್ಲಿಗೆ ಬೇಟಿ ನಿಡಿದ್ದೀರಾ ಹಾಗೂ ಯಾವ ದೇಶಕ್ಕೆ ಬೇಟಿ ನಿಡಿದ್ದೀರಾ ಎಲ್ಲಾ ಮಾಹಿತಿಯನ್ನ ತುಂಬಬೇಕು. ಇಂತಹ ಬಳಕೆದಾರರ ಗೌಪ್ಯ ಮಾಹಿತಿ ಸೋರಿಕೆ ಆಗಲಿದೆ. ಇದರಿಂದ ದೇಶದ ಭದ್ರತೆಗೆ ದಕ್ಕೆ ಆಗಲಿದೆ ಅನ್ನೊ ಸುದ್ದಿ ಹರಿದಾಡಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಮೈಗೊಇಂಡಿಯಾ ಸಿಇಒ ಬಳಕೆದಾರರ ಡೇಟಾವನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗಳಂತಹ ನಿರ್ಣಾಯಕ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುವುದು. ಅಲ್ಲದೆ ಈ ಅಪ್ಲಿಕೇಶನ್ ಕೋವಿಡ್ ರೋಗಿಯ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಆರೋಗ್ಯಾ ಸೇತು ಮೊಬೈಲ್ ಅಪ್ಲಿಕೇಶನ್ ಅನ್ನು ಜನರ ಡೇಟಾವನ್ನು 'ಕದಿಯಲು' ಆಗುವುದಿಲ್ಲ. ನೂರಕ್ಕೆ ನೂರರಷ್ಟು ಬಳಕೆದಾರರ ಡೇಟಾ ಸುರಕ್ಷತೆಯಿಂದ ಕೂಡಿದೆ ಎಂದು ಹೇಳಿದ್ದಾರೆ.

60 ದಿನಗಳ ಮಿತಿಯಲ್ಲಿ ತೆಗೆದುಹಾಕಲಾಗುತ್ತದೆ
ಅಲ್ಲದೆ ಈ ಆಪ್ಲಿಕೇಶನ್ ಅಲ್ಲಿ ಗೌಪ್ಯ ಮಾಹಿತಿಯನ್ನ ಸಾಮಾನ್ಯ ಜನರು ಆಗಿದ್ದರೆ 30 ದಿನಗಳ ನಂತರ ಸರ್ವರ್‌ನಿಂದ ಡೇಟಾವನ್ನು ಅಳಿಸುತ್ತೇವೆ. ಕೊರೊನಾ ಸೋಂಕಿತ ರೋಗಿ ಆಗಿದ್ದರೆ ಆತನ ಡೇಟಾವನ್ನು 60 ದಿನಗಳ ಮಿತಿಯಲ್ಲಿ ತೆಗೆದುಹಾಕಲಾಗುತ್ತದೆ ಎಂದಿದ್ದಾರೆ. ಇದಲ್ಲದೆ ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ವಿವರಿಸಿದ ಸಿಂಗ್, ಬಳಕೆದಾರರು ಯಾವುದೇ ಕರೋನವೈರಸ್ ಪೀಡಿತ ವಲಯಗಳಿಗೆ ಪ್ರವೇಶಿಸಿದ ತಕ್ಷಣ ಅಥವಾ ಕರೋನವೈರಸ್-ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ತಕ್ಷಣ, ಅವರು ಆಲರ್ಟ್ ನೊಟೀಫೀಕೇಶನ್ ಅನ್ನು ಸ್ವೀಕರಿಸುತ್ತಾರೆ ಎಂದಿದ್ದಾರೆ ಸಿಂಗ್.

ಆರೋಪಗಳನ್ನು ಲೇಬಲ್ ಮಾಡುವುದು ಅತ್ಯಂತ ಅರ್ಥಹೀನ
ಸದ್ಯ ಕೊರೋನಾ ಎಂಬ ಮಾರಕ ವೈರಸ್ ದೇಶದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಇಂತಹ ಆರೋಪಗಳನ್ನು ಲೇಬಲ್ ಮಾಡುವುದು ಅತ್ಯಂತ ಅರ್ಥಹೀನ ಎಂದು ಅಭಿಷೇಕ್ ಸಿಂಗ್ ಹೇಳಿದ್ದಾರೆ. ಇನ್ನು ಮೈಗೊ ಇಂಡಿಯಾ ಆನ್‌ಲೈನ್ ವೇದಿಕೆಯಾಗಿದ್ದು ಅದು ನಾಗರಿಕರನ್ನು ಸರ್ಕಾರದ ಜೊತೆ ನೇರವಾಗಿ ಕನೆಕ್ಟ್ ಮಾಡುವ ಗುರಿಯನ್ನು ಹೊಂದಿದೆ. ಸದ್ಯ ಆರೋಗ್ಯಾ ಸೇತುವನ್ನು ಆಕ್ರಮಣಕಾರಿಯಾಗಿ ಅಳವಡಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸಹ ಬಳಸುವಂತೆ ಕರೆ ನಿಡಿದ್ದಾರೆ. ಇದು ದೇಶಾದ್ಯಂತ ಇದುವರೆಗೆ 8.2 ಕೋಟಿ ಡೌನ್‌ಲೋಡ್‌ಗಳನ್ನು ಪಡೆದುಕೊಂಡಿದೆ ಎಂದು ಸಿಂಗ್ ಹೇಳಿದ್ದಾರೆ.












Click it and Unblock the Notifications