ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ 1 ಮಿಲಿಯನ್ ಬ್ಲ್ಯಾಕ್‌ ಫಂಗಸ್‌ ಔಷಧಿ ಪೂರೈಸಲಿದೆ ಯುಎಸ್ ಸಂಸ್ಥೆ

|
Google Oneindia Kannada News

ನವದೆಹಲಿ, ಮೇ 27: ದೇಶದಲ್ಲಿ ಬ್ಲ್ಯಾಕ್‌ ಫಂಗಸ್‌ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವಂತೆ, ಔಷಧಿಗಳ ಕೊರತೆಯೂ ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿಶ್ವದ ಯಾವ ದೇಶದಿಂದಲಾದರೂ ಬ್ಲ್ಯಾಕ್‌ ಫಂಗಸ್‌ನ ಔಷಧಿ ತಡೆಬೇಕಾಗಿದೆ ಎಂದು ಹೇಳಿದ್ದರು. ಈ ಸೂಚನೆಯ ಬೆನ್ನಲ್ಲೇ ಯುಎಸ್ ಸಂಸ್ಥೆ ಭಾರತಕ್ಕೆ 1 ಮಿಲಿಯನ್ ಬ್ಲ್ಯಾಕ್‌ ಫಂಗಸ್‌ ಔಷಧಿ ಪೂರೈಸಲಿದೆ ಎಂದು ವರದಿಯಾಗಿದೆ.

ಅಮೆರಿಕದ ಜೈವಿಕ ಔಷಧೀಯ ಸಂಸ್ಥೆ ಗಿಲ್ಯಾಡ್ ಸೈನ್ಸಸ್ ಭಾರತಕ್ಕೆ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ (ಆಂಬಿಸೋಮ್) ಪೂರೈಕೆಯನ್ನು ವೇಗಗೊಳಿಸಲು ಕೆಲಸ ಮಾಡುತ್ತಿದೆ. ಈ ಔಷಧಿಯು ಮ್ಯೂಕಾರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕಿನ ಚಿಕಿತ್ಸೆಗೆ ಬಳಸಲಾಗುತ್ತದೆ ಎಂದು ವರದಿ ತಿಳಿಸಿದೆ.

ಭಾರತ ತಲುಪಲಿವೆ 40 ಸಾವಿರ ವಯಲ್ಸ್ ಬ್ಲ್ಯಾಕ್ ಫಂಗಸ್ ಔ‍ಷಧಿಭಾರತ ತಲುಪಲಿವೆ 40 ಸಾವಿರ ವಯಲ್ಸ್ ಬ್ಲ್ಯಾಕ್ ಫಂಗಸ್ ಔ‍ಷಧಿ

"ಗಿಲ್ಯಾಡ್ ಸೈನ್ಸಸ್ ಮೈಲಾನ್ ಮೂಲಕ ಭಾರತಕ್ಕೆ ಆಂಬಿಸೋಮ್ ಸರಬರಾಜನ್ನು ಚುರುಕುಗೊಳಿಸುವ ಕೆಲಸ ಮಾಡುತ್ತಿದೆ. ಇದುವರೆಗೆ 121,000 ಬಾಟಲುಗಳು ಭಾರತವನ್ನು ತಲುಪಿದೆ. ಇನ್ನೂ 85,000 ಬಾಟಲುಗಳು ಅಲ್ಲಿಂದ ಕಳುಹಿಸಲಾಗಿದೆ. ಕಂಪನಿಯು 1 ಮಿಲಿಯನ್ ಡೋಸ್ ಆಂಬಿಸೋಮ್ ಅನ್ನು ಭಾರತಕ್ಕೆ ಮೈಲಾನ್ ಮೂಲಕ ಪೂರೈಸಲಿದೆ" ಎಂದು ಸರ್ಕಾರ ಮೂಲಗಳು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿವೆ.

US firm Gilead Sciences to supply 1 mn black fungus drug to India

ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಚುಚ್ಚುಮದ್ದನ್ನು ಜಗತ್ತಿನ ಎಲ್ಲೆಡೆಯಿಂದ ಖರೀದಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಜೀವ ಉಳಿಸುವ ಔಷಧಿಗಾಗಿ ವಿವಿಧ ದೇಶಗಳಿಗೆ ಭಾರತ ಮನವಿ ಮಾಡಿತ್ತು. ಈ ಪ್ರಯತ್ನದ ಭಾಗವಾಗಿ ಗಿಲ್ಯಾಡ್ ಔಷಧಿಗಳನ್ನು ಭಾರತಕ್ಕೆ ಕಳುಹಿಸಿದೆ.

 ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ

ಈ ಔಷಧಿಯನ್ನು ತಯಾರಿಸಲು ಔಷಧೀಯ ತಯಾರಕರಿಗೆ ಪರವಾನಗಿ ನೀಡುವ ಮೂಲಕ ಕೇಂದ್ರ ಸರ್ಕಾರವು ಆಂಫೊಟೆರಿಸಿನ್ ಬಿ ಯ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಈ ಔಷಧಿಯ ಉತ್ಪಾದನೆಯಲ್ಲಿ ಈಗಾಗಲೇ ತೊಡಗಿಸಿಕೊಂಡಿರುವ ಸಂಸ್ಥೆಯೊಂದಿಗೆ ಮತ್ತೆ 5 ಸಂಸ್ತೆಗಳು ಸೇರಿಕೊಂಡಿದೆ. ಆಂಫೊಟೆರಿಸಿನ್ ಬಿ ಚುಚ್ಚುಮದ್ದಿನ ಕೊರತೆಯಿಂದ ರಾಜ್ಯಗಳಿಗೆ ತೀವ್ರ ತೊಂದರೆ ಉಂಟಾಗಿದೆ.

(ಒನ್ಇಂಡಿಯಾ ಸುದ್ದಿ)

English summary
US firm Gilead Sciences to supply 1 mn black fungus drug to India. The Prime Minister had instructed officials to get this drug from anywhere it is available in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X