ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರು ವರ್ಷಗಳ ನಂತರ ದೆಹಲಿಗೆ ದಲೈಲಾಮಾ ಆಗಮನ, ಯಾಕೆ?

|
Google Oneindia Kannada News

ನವದೆಹಲಿ, ಆಗಸ್ಟ್‌ 26: ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ಮೂರು ವರ್ಷಗಳ ನಂತರ ಶುಕ್ರವಾರ ದೆಹಲಿಗೆ ಆಗಮಿಸಿದ್ದಾರೆ. ಅವರು ಲಡಾಖ್‌ನಲ್ಲಿ ಒಂದು ತಿಂಗಳ ಕಾಲ ವಾಸ್ತವ್ಯದ ನಂತರ ರಾಷ್ಟ್ರ ರಾಜಧಾನಿಗೆ ಬಂದಿಳಿದ್ದು, ರಾಜಕೀಯ ನಾಯಕರೊಂದಿಗೆ ಸಭೆ ನಡೆಸುತ್ತಾರೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಇದಕ್ಕೂ ಮುನ್ನ ಮಂಗಳವಾರ ಟಿಬೆಟಿಯನ್ನರು ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ನಿಜವಾದ ಸ್ವಾಯತ್ತತೆಯನ್ನು ಬಯಸುತ್ತಿದ್ದಾರೆ. ಲಡಾಕಿಗಳು ಮತ್ತೆ ಲಾಸಾಗೆ ಭೇಟಿ ನೀಡಲು ಸಾಧ್ಯವಾಗುವ ಸಮಯ ಶೀಘ್ರದಲ್ಲೇ ಬರಲಿದೆ. ಇಲ್ಲಿ ಸಮಯಗಳು ಬದಲಾಗುತ್ತಿವೆ. ಲಡಾಕಿಗಳು ಮತ್ತೆ ಲಾಸಾಗೆ ಭೇಟಿ ನೀಡಲು ಸಾಧ್ಯವಾಗುವ ಸಮಯ ಬರಲಿದೆ ಎಂದು ಲೇಹ್‌ನಲ್ಲಿರುವ ಥುಪ್‌ಸ್ಟಾನ್ಲಿಂಗ್ ಗೊನ್ಪಾ, ಡಿಸ್ಕಿಟ್ ತ್ಸಾಲ್‌ನಲ್ಲಿ ಹೊಸ ಕಲಿಕೆಯ ಕೇಂದ್ರವನ್ನು ಉದ್ಘಾಟಿಸಿದಾಗ ಸಭಿಕರನ್ನು ಉದ್ದೇಶಿಸಿ ಹೇಳಿದ್ದರು.

ಭಾರತದಲ್ಲಿಯೇ ಉಳಿಯುತ್ತೇನೆ ಎಂದ ದಲೈ ಲಾಮಾ, ಕಾರಣವೇನು?ಭಾರತದಲ್ಲಿಯೇ ಉಳಿಯುತ್ತೇನೆ ಎಂದ ದಲೈ ಲಾಮಾ, ಕಾರಣವೇನು?

ಲೇಹ್‌ನಲ್ಲಿ ಹೊಸ ಕಲಿಕೆಯ ಕೇಂದ್ರವು ಸ್ಥಳೀಯರಿಂದ ನಿರ್ಮಿಸಲಾಗಿದ್ದು, ಅಲ್ಲಿ ಬೌದ್ಧ ತತ್ವಶಾಸ್ತ್ರ, ಗ್ರಂಥಾಲಯ, ಪಾಳಿ ಭಾಷೆ ಮೇಲೆ ತರಗತಿಗಳನ್ನು ನಡೆಸಲು ಸೌಲಭ್ಯಗಳಿವೆ. ದಲೈಲಾಮ ಭೇಟಿ ವೇಳೆ ಸಭಾಂಗಣವು ಪೂರ್ಣ ತುಂಬಿತ್ತು. ಒಳಗೆ 1,500ಕ್ಕೂ ಹೆಚ್ಚು ಜನರು ಮತ್ತು ಹೊರಗೆ ಅಂಗಳದಲ್ಲಿ ಅಷ್ಟೇ ಸಂಖ್ಯೆಯಲ್ಲಿ ಸೇರಿದ್ದರು.

ಈ ಹಿಂದೆ ಲಡಾಖ್‌ನಲ್ಲಿ ಭಾರತೀಯ ಯೋಧರು, ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದ ಸಂದರ್ಭ ಚೀನಾದ ಸೈನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಚೀನಾ ಹಾಗೂ ತೈವಾನ್ ಎರಡೂ ದೇಶಗಳ ನಡುವೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೌದ್ಧ ಧಾರ್ಮಿಕ ಗುರು ದಲೈ ಲಾಮಾ ಭಾರತದಲ್ಲಿಯೇ ಉಳಿಯುತ್ತೇನೆ ಎಂದು ಹೇಳಿದ್ದರು.

 ನಿಜವಾದ ಸ್ವಾಯತ್ತತೆ ಬಯಸುತ್ತಿದ್ದೇವೆ: ದಲೈಲಾಮಾ

ನಿಜವಾದ ಸ್ವಾಯತ್ತತೆ ಬಯಸುತ್ತಿದ್ದೇವೆ: ದಲೈಲಾಮಾ

ಸಭೆಯನ್ನುದ್ದೇಶಿಸಿ ಮಾತನಾಡಿದ ದಲೈಲಾಮಾ ಅವರು, ನಾನು ರಾಜಕೀಯ ಜವಾಬ್ದಾರಿಯಿಂದ ಹಿಂಜರಿಯುವ ಮೊದಲು ಟಿಬೆಟಿಯನ್ನರು ಟಿಬೆಟ್ ಸಮಸ್ಯೆಗೆ ಪರಸ್ಪರ ಸ್ವೀಕಾರಾರ್ಹ ಪರಿಹಾರಕ್ಕಾಗಿ ಯತ್ನಿಸಬೇಕು. ಇದರರ್ಥ ನಾವು ಸಂಪೂರ್ಣ ಸ್ವಾತಂತ್ರ್ಯಕ್ಕಿಂತ ನಿಜವಾದ ಸ್ವಾಯತ್ತತೆಯನ್ನು ಬಯಸುತ್ತಿದ್ದೇವೆ. ಪ್ರಾಥಮಿಕವಾಗಿ ಎಲ್ಲಾ ಟಿಬೆಟಿಯನ್ ಮಾತನಾಡುವ ಪ್ರದೇಶಗಳಲ್ಲಿ ನಮ್ಮ ಗುರುತು, ಭಾಷೆ ಮತ್ತು ಶ್ರೀಮಂತ ಬೌದ್ಧ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಕಾಳಜಿ ವಹಿಸುತ್ತೇವೆ ಎಂದು ಅವರು ಹೇಳಿದರು.

 ದಲೈಲಾಮಾ ಭೇಟಿಗೆ ಚೀನಾ ಕಣ್ಣು

ದಲೈಲಾಮಾ ಭೇಟಿಗೆ ಚೀನಾ ಕಣ್ಣು

ಜಗತ್ತಿನಲ್ಲಿ ಅತ್ಯಂತ ಮೆಚ್ಚುಗೆ ಪಡೆದ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬರಾದ ದಲೈಲಾಮಾ ಅವರು ತಮ್ಮ ದೇಶಕ್ಕೆ ಮಾತ್ರವಲ್ಲದೆ ಜಗತ್ತಿಗೆ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ನಾಯಕ ಆಗಿದ್ದಾರೆ. ದಲೈಲಾಮಾ ಅವರ ದೆಹಲಿಯ ಭೇಟಿಯ ನಡುವೆ ಚೀನಾ ಅವರ ಮೇಲೆ ಸೂಕ್ಷ್ಮವಾಗಿ ಕಣ್ಣಿಟ್ಟಿದೆ. ಏಕೆಂದರೆ ಚೀನಾ ಜಾಗತಿಕವಾಗಿ ಗೌರವಾನ್ವಿತ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈಲಾಮರನ್ನು ಪ್ರತ್ಯೇಕತಾವಾದಿ ಎಂದು ಪರಿಗಣಿಸುತ್ತದೆ. ಅವರು ಟಿಬೆಟ್ ಅನ್ನು ವಿಭಜಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಚೀನಾ ಆರೋಪಿಸುತ್ತದೆ.

 60 ವರ್ಷಗಳ ಕಾಲ ದೇಶದಿಂದ ಹೊರಗೆ

60 ವರ್ಷಗಳ ಕಾಲ ದೇಶದಿಂದ ಹೊರಗೆ

ದಲೈಲಾಮಾ ಅವರು 7 ದಶಲಕ್ಷಕ್ಕೂ ಹೆಚ್ಚು ಟಿಬೆಟಿಯನ್ ಬೌದ್ಧರ ಆಧ್ಯಾತ್ಮಿಕ ನಾಯಕನ ಸ್ಥಾನವನ್ನು ತ್ಯಜಿಸಿದ್ದರು. ಅಲ್ಲದೆ ಚೀನಾದ ಆಕ್ರಮಣದಿಂದಾಗಿ 60 ವರ್ಷಗಳ ಕಾಲ ಟಿಬೆಟ್‌ ದೇಶದ ಹೊರಗೆ ಇದ್ದರು. ಶ್ರೀಲಂಕಾದ ಬೌದ್ಧ ಮತ್ತು ಪಾಲಿ ವಿಶ್ವವಿದ್ಯಾನಿಲಯದ ವೆನ್ ಪ್ರೊ.ಲೆನಾಗಲಾ ಸಿರಿನಿವಾಸ ಅವರು ದಲೈಲಾಮಾ ಅವರ 87ನೇ ಜನ್ಮದಿನದಂದು ಮಾತನಾಡುತ್ತಾ, ದಲೈಲಾಮಾ ಅವರು ಜಗತ್ತಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಕಾಣಲು ಬಯಸುವ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದ್ದರು.

 ಪಟ್ಟುಬಿಡದ ಕಠಿಣ ಪರಿಶ್ರಮ

ಪಟ್ಟುಬಿಡದ ಕಠಿಣ ಪರಿಶ್ರಮ

ದಲೈಲಾಮಾ ಅವರು ಶಾಂತತೆಯನ್ನು ಕಳೆದುಕೊಳ್ಳದಿರುವ, ಹಾಸ್ಯಪ್ರಜ್ಞೆ, ಪರಹಿತಚಿಂತನೆಯ ಪ್ರವೃತ್ತಿಗಳು, ಸರಳವಾದ ಮಗುವಿನ ಸ್ವಭಾವ ಹಾಗೂ ಜಾಗತಿಕ ಮತ್ತು ರಾಷ್ಟ್ರೀಯ ಬದ್ಧತೆಗಳನ್ನು ಹೊಂದಿದ್ದಾರೆ. ಅವರ ಪಟ್ಟುಬಿಡದ ಕಠಿಣ ಪರಿಶ್ರಮವು ಬೌದ್ಧರಿಗೆ ನೆಲೆಯನ್ನು ರೂಪಿಸಲಿದೆ ಎಂದು ಸಿರಿನಿವಾಸ ಹೇಳಿರುವುದಾಗಿ ಶ್ರೀಲಂಕಾದ ಡೈಲಿ ಮಿರರ್ ವರದಿ ಮಾಡಿತ್ತು.

English summary
Tibetan spiritual leader Dalai Lama arrived in Delhi on Friday after a gap of three years. It is yet to be confirmed whether he will hold meetings with political leaders after arriving in the national capital after a month-long stay in Ladakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X