ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಯಕ್ತಿಕ ಆದಾಯ ತೆರಿಗೆ ದರದಲ್ಲಿ ಕಡಿತ, ವದಂತಿ ಬಗ್ಗೆ ಸರ್ಕಾರ ಹೇಳಿದ್ದು...

|
Google Oneindia Kannada News

ನವದೆಹಲಿ, ಅಕ್ಟೋಬರ್ 30: ವೈಯಕ್ತಿಕ ಆದಾಯ ತೆರಿಗೆ ದರವನ್ನು ಕಡಿತ ಮಾಡಲಾಗುತ್ತದೆ ಎಂಬ ವದಂತಿಯನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದ್ದು, ಅಂಥ ಯಾವುದೇ ಯೋಚನೆ ಸರ್ಕಾರಕ್ಕಿಲ್ಲ ಎಂದಿದೆ.

ಇತ್ತೀಚೆಗಷ್ಟೇ ಕಾರ್ಪೋರೇಟ್ ಟ್ಯಾಕ್ಸ್ ಅನ್ನು ಕಡಿತಗೊಳಿಸಿದ್ದ ಸರ್ಕಾರ ವೈಯಕ್ತಿಕ ಆದಾಯ ತೆರಿಗೆ ದರವನ್ನೂ ಕಡಿತಗೊಳಿಸುತ್ತದೆ ಎನ್ನಲಾಗಿತ್ತು.

ತೆರಿಗೆದಾರರಿಗೆ ಕಾದಿದೆ ಬಂಪರ್ ಸುದ್ದಿ! Tax Slab ನಲ್ಲಿ ಮಹತ್ವದ ಬದಲಾವಣೆ?ತೆರಿಗೆದಾರರಿಗೆ ಕಾದಿದೆ ಬಂಪರ್ ಸುದ್ದಿ! Tax Slab ನಲ್ಲಿ ಮಹತ್ವದ ಬದಲಾವಣೆ?

ಈಗಾಗಲೇ ಭಾರತದಲ್ಲಿ ವೈಯಕ್ತಿಕ ಕಳೆದ ಹಣಕಾಸು ವರ್ಷದ ಆಯವ್ಯವದ ನಂತರ ವೈಯಕ್ತಿಕ ಆದಾಯ ತೆರಿಗೆ ದರವನ್ನು ಶೇ.42 ಕ್ಕೆ ಏರಿಸಲಾಗಿತ್ತು. ಅತೀ ಹೆಚ್ಚು ವೈಯಕ್ತಿಕ ಆದಾಯ ಹೊಂದಿರುವವರು ಈ ತೆರಿಗೆಯನ್ನು ಕಟ್ಟಬೇಕಿತ್ತು. ಇದನ್ನು ಸರ್ಕಾರ ಗತ್ತಿಸಲು ಯೋಚಿಸುತ್ತದೆ ಎಂಬ ವದಂತಿ ಹಬ್ಬಿತ್ತು.

There Is No Reduction In Personal Income Tax Rates

ಸ್ವಿಡನ್, ಬ್ರೆಜಿಲ್ ಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ದರ ಕ್ರಮವಾಗಿ ಶೆ.25 ಮತ್ತು ಶೆ.27.5 ರಷ್ಟಿದೆ. ಭಾರತದಲ್ಲಿ ಇದು ಶೇ.42 ರಷ್ಟಿದ್ದು, ಇದನ್ನು ಕಡಿತಗೊಳಿಸಲಾಗುತ್ತಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಅದನ್ನು ಸರ್ಕಾರ ತಳ್ಳಿಹಾಕಿದೆ.

ಆರ್ಥಿಕತೆಗೆ ಜೀವ ತುಂಬಲು ಹಲವು ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್ಆರ್ಥಿಕತೆಗೆ ಜೀವ ತುಂಬಲು ಹಲವು ಘೋಷಣೆ ಮಾಡಿದ ನಿರ್ಮಲಾ ಸೀತಾರಾಮನ್

ಈಗಾಗಲೇ ಇರುವ ಟ್ಯಾಕ್ಸ್ ಸ್ಲ್ಯಾಬ್ ಪ್ರಕಾರ 5 ಲಕ್ಷ ರೂ. ಗಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರಿಗೆ ಯಾವುದೇ ತೆರಿಗೆಯಿಲ್ಲ. ಅದಕ್ಕಿಂತ ಹೆಚ್ಚಿನ ಆದಾಯ ತೆರಿಗೆ ಹೊಂದಿರುವವರಿಗೆ 2.5 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆಯಿಲ್ಲ. 2.5 ಲಕ್ಷ ರೂ.ನಿಂದ 5 ಲಕ್ಷ ರೂ. ವರೆಗೆ ಶೇ. 5, 5 ರಿಂದ 10 ಲಕ್ಷ ರೂ. ವಾರ್ಷಿಕ ಆದಾಯಕ್ಕೆ ಶೇ. 20 ಮತ್ತು 10 ಲಕ್ಷ ರೂ. ಗಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. 30 ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ.

English summary
There Is No Reduction In Personal Income Tax Rates
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X