FAKE: JEE ಮುಖ್ಯ ಪರೀಕ್ಷೆ ಜುಲೈನಲ್ಲಿ ನಡೆಯುತ್ತಿಲ್ಲ
ನವದೆಹಲಿ, ಏಪ್ರಿಲ್ 15: JEE (Joint Entrance Examination) ಮುಖ್ಯ ಪರೀಕ್ಷೆ ಈ ವರ್ಷದ ಜುಲೈನಲ್ಲಿ ನಡೆಯಲಿದೆ ಎನ್ನುವ ಸರ್ಕ್ಯುಲರ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಆದರೆ, ಇದೊಂದು ಸುಳ್ಳು ಸುದ್ದಿ ಎನ್ನುವ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.
ದಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸರ್ಕ್ಯುಲರ್ ಫೇಕ್ ಎಂದು ಹಾಗೂ JEE ಮುಖ್ಯ ಪರೀಕ್ಷೆ ಜುಲೈನಲ್ಲಿ ನಡೆಯುತ್ತಿಲ್ಲ ಎಂದು ತಿಳಿಸಿದೆ.
''ಜೆಇಇ (ಮುಖ್ಯ) ಪರೀಕ್ಷೆಯನ್ನು 2020 ರ ಜುಲೈ ಮೊದಲ ವಾರದಲ್ಲಿ ನಡೆಯುವ ಬಗ್ಗೆ ನಕಲಿ ಸಾರ್ವಜನಿಕ ಪ್ರಕಟಣೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗಮನಕ್ಕೆ ಬಂದಿದೆ. ಪರೀಕ್ಷೆಗೆ ಹಾಜರಾಗಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಈ ನಕಲಿ ಸಾರ್ವಜನಿಕ ಪ್ರಕಟಣೆಯಲ್ಲಿ ಯಾವುದೇ ಸತ್ಯವಿಲ್ಲ'' ಎಂದು ಎನ್‌ಟಿಎ ಸ್ಪಷ್ಟನೆ ನೀಡಿದೆ.

ಈ ರೀತಿಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ IT Act ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎನ್‌ಟಿಎ ತಿಳಿಸಿದೆ.
ಜೆಇಇ ಬಗ್ಗೆ ಅಧಿಕೃತವಾಗಿ ಬರುವ ಮಾಹಿತಿಯನ್ನು ಮಾತ್ರ ನಂಬುವಂತೆ ಪೋಷಕರಿಗೆ ಎನ್‌ಟಿಎ ತಿಳಿಸಿದೆ. ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್‌ಗೆ ಭೇಟಿ ನೀಡಲು ಹೇಳಿದೆ.
ವೆಬ್ ಸೈಟ್‌ನೊಂದಿಗೆ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. 8287471852, 8178359845, 9650173668, 9599676953 and 8882356803.












Click it and Unblock the Notifications