ಸುನಂದಾ ಸಾವು ಅಸ್ವಾಭಾವಿಕ-ಹಠಾತ್: ದಿಲ್ಲಿ ವೈದ್ಯರು
ನವದೆಹಲಿ, ಜ.18: ಕೇಂದ್ರ ಸಚಿವ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ ಅವರಿಗೆ ಯಾವುದೇ ರೀತಿಯ ಇರಲಿಲ್ಲವೆಂದು ತಿರುವನಂತಪುರದ ಕಿಮ್ಸ್ ಆಸ್ಪತ್ರೆಯ ವೈದ್ಯರು ನೀಇಡರುವ ವರದಿಯನ್ನು ಪುಷ್ಠೀಕರಿಸುವಂತೆ ದೆಹಲಿಯಲ್ಲಿ ಸುನಂದಾ ಪುಷ್ಕರ್ ಶವಪರೀಕ್ಷೆ ನಡೆಸಿದ ಏಮ್ಸ್ ವೈದ್ಯರು 'ಸುನಂದಾ ಅಸ್ವಾಭಾವಿಕವಾಗಿ ಮತ್ತು ಹಠಾತ್ತಾಗಿ ಸಾವನ್ನಪ್ಪಿದ್ದಾರೆ. ಸುನಂದಾ ದೇಹದ ಮೇಲೆ ಗಾಯಗಳು ಸಹ ಪತ್ತೆಯಾಗಿವೆ' ಎಂದು ತಿಳಿಸಿದ್ದಾರೆ.

ಶುಕ್ರವಾರ ಲೀಲಾ ಪ್ಯಾಲೆಸ್ ಹೋಟೆಲಿನಲ್ಲಿ ನಿಗೂಢ ಸಾವನ್ನಪಿರುವ ಸುನಂದಾ ಪುಷ್ಕರ್ ಅವರ ಶವಪರೀಕ್ಷೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ AIIMS ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಗುಪ್ತಾ ಅವರು ಟಾಕ್ಸಿಕೋಲಜಿ ಮತ್ತು ಪೆಥಾಲಜಿಗೆ ಬೇಕಾದ ಮಾದರಿಗಳನ್ನು ಈಗಾಗಲೇ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.
( ಸುನಂದಾ ಪುಷ್ಕರಗೆ ಯಾವುದೇ ಕಾಯಿಲೆಯಿರಲಿಲ್ಲ: ಕಿಮ್ಸ್ ವೈದ್ಯರು )
ಸುನಂದಾ ಅವರ ಮೃತದೇಹದಲ್ಲಿ ಗಾಯಗಳು ಪತ್ತೆಯಾಗಿವೆ. ಎರಡು ದಿನಗಳ ನಂತರ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಲಿದೆ. ಸುನಂದಾ ಅವರದ್ದು ಅಸ್ವಾಭಾವಿಕ ಮತ್ತು ಹಠಾತ್ ಸಾವು ಆಗಿದ್ದು (unnatural and sudden death), ಮುಂದೆ ವೈದ್ಯಕೀಯ ಪರೀಕ್ಷಾ ವರದಿಗಳ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂದು ಗುಪ್ತಾ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಸುನಂದಾ ಸಾವು ಬಗ್ಗೆ ವರದಿ ಸಿದ್ದಪಡಿಸುವುದಾಗಿ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಲೋಧಿ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಸುನಂದಾ ಅಂತ್ಯಕ್ರಿಯೆ ನಡೆಯಲಿದೆ.












Click it and Unblock the Notifications