ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟಿ ವಿಜಯ ಶಾಂತಿ ಕೊನೆಗೂ ಕಾಂಗ್ರೆಸ್ಸಿಗೆ ಸೇರ್ಪಡೆ

By Srinath
|
Google Oneindia Kannada News

ನವದೆಹಲಿ, ಫೆ. 28-ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ, ತೆಲಂಗಾಣ ಪ್ರತ್ಯೇಕ ರಾಜ್ಯ ಉದಯವಾದ ಸಂದರ್ಭದಲ್ಲಿ ತೆಲುಗು ಖ್ಯಾತ ನಟಿ, ಟಿಆರೆಸ್ ಸಂಸದೆ ಎಂ ವಿಜಯ ಶಾಂತಿ ಕೊನೆಗೂ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ವಿಜಯ ಶಾಂತಿ ಅವರು ಮೇಡಕ್ ಲೋಕಸಭಾ ಕ್ಷೇತ್ರದ ತೆಲಂಗಾಣ ರಾಜ್ಯ ಸಮಿತಿ ಪಕ್ಷದ ಸಂಸದೆಯಾಗಿದ್ದರು.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಂಧ್ರದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್ಸಿಗೆ ಅಂಕಿತರಾಗಿದ್ದಾರೆ. 50 ವರ್ಷದ ವಿಜಯ ಶಾಂತಿ ಕಾಂಗ್ರೆಸ್ ಸೇರುವುದು ಖಚಿತವಾಗುತ್ತಿದ್ದಂತೆ ಇತ್ತೀಚೆಗೆ ಅವರನ್ನು TRSನಿಂದ ಉಚ್ಚಾಟನೆ ಮಾಡಲಾಗಿತ್ತು. ವಿಜಯ ಶಾಂತಿ ಜತೆಗೆ ಆ ಪಕ್ಷದ ಮತ್ತೊಬ್ಬ ಮುಖಂಡ ಅರವಿಂದ್ ರೆಡ್ಡಿ ಸಹ ಕಾಂಗ್ರೆಸ್ ಸೇರಿದ್ದಾರೆ.

ಅಂದಹಾಗೆ, ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಪಟ್ಟುಹಿಡಿದಿದ್ದ Telangana Rajya Samithi ಪಕ್ಷದ ಸ್ಥಾಪಕ ಕೆ ಚಂದ್ರಶೇಖರ್ ರಾವ್ ಮತ್ತು ವಿಜಯ ಶಾಂತಿ ಅವರಿಬ್ಬರೇ ಹಾಲಿ ಲೋಕಸಭೆಯಲ್ಲಿನ TRS ಪಕ್ಷದ ಇಬ್ಬರು ಸಂಸದರು. ಚೆನ್ನೈನಲ್ಲಿ ಜನಿಸಿದ ವಿಜಯ ಶಾಂತಿ ಸಪ್ತಭಾಷಾ ತಾರೆಯಾಗಿ 189 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಜಯ ಶಾಂತಿ ಮತ್ತು ಅರವಿಂದ್ ರೆಡ್ಡಿ ಅವರಿಬ್ಬರನ್ನೂ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡಿರುವುದರ ವಿರುದ್ಧ TRS ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

Telugu actor Vijaya Shanthi joins Congress
ಆದರೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ತನ್ನ ಧ್ಯೇಯೋದ್ದೇಶವಾಗಿತ್ತು. ಇದೀಗ ಗುರಿ ಸಾಧನೆಯಾಗಿದೆ. ಅದನ್ನು ಸಾಕಾರಗೊಳಿಸಿದ ಕಾಂಗ್ರೆಸ್ ಪಕ್ಷದ ಜತೆ ಸೇರುತ್ತಿರುವುದಾಗಿ ವಿಜಯ ಶಾಂತಿ ಪ್ರತಿಕ್ರಿಯಿಸಿದ್ದಾರೆ.

ಗಮನಾರ್ಹವೆಂದರೆ ತೆಲಂಗಾಣ ರಚನೆ ಕೈಗೂಡುತ್ತಿದ್ದಂತೆ, ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತಾವು ಕಾಂಗ್ರೆಸ್ ಕೈಹಿಡಿಯುವುದಾಗಿ ಸ್ವತಃ ಚಂದ್ರಶೇಖರ್ ರಾವ್ ಅವರೇ ಹೇಳುತ್ತಿದ್ದರು. ಆದರೆ ಕೊಟ್ಟು-ತೆಗೆದುಕೊಳ್ಳುವ ಮಾತುಕತೆ ಸದ್ಯಕ್ಕೆ ಮುರಿದುಬಿದ್ದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಇನ್ನೂ ಕಾಂಗ್ರೆಸ್ ಕೈಗೆ ಎಟುಕಿಲ್ಲ.

English summary
TRS MP M. Vijaya Shanthi joined the Congress after meeting party president Sonia Gandhi on Thursday. AICC general secretary in-charge of Andhra Pradesh Digvijay Singh has accompanied the MP. According to Mr. Singh, Ms. Shanthi had said that her fight was for Telangana and after it is achieved, she would join Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X