Facebook ಬಗ್ಗೆ ಎರಡು ವಿಚಿತ್ರ ಸುದ್ದಿಗಳು
ನವದೆಹಲಿ, ಫೆ.24- Facebook ಬಗ್ಗೆ ಎರಡು ವಿಚಿತ್ರ ಸುದ್ದಿಗಳು ಕೇಳಿ ಬಂದಿವೆ. ಹಿಂದೂಗಳ ಪವಿತ್ರ ತೀರ್ಥಕ್ಷೇತ್ರವಾದ ಕಾಶಿಗೆ ಹೋಗಿದ್ದ ಹೈದರಾಬಾದಿನ ಎನ್ನಾರೈ ಟೆಕ್ಕಿಯೊಬ್ಬರು ತಮ್ಮ ಫೇಸ್ ಬುಕ್ ಜತೆಗಿನ ಗೆಳೆತನವನ್ನು ಬಿಟ್ಟುಬಂದಿದ್ದಾರೆ.
Facebook addict ಆಗಿದ್ದ ಟೆಕ್ಕಿ: ವಾರಣಾಸಿಯ ಕಾಶಿಗೆ ಹೋದವರು ತಮಗೆ ಅತ್ಯಂತ ಪ್ರೀತಿಪಾತ್ರವಾದ ಯಾವುದಾದರೂ ಒಂದನ್ನು ಅಲ್ಲಿ ಬಿಟ್ಟುಬಂದರೆ ಒಳ್ಳೆಯದಾಗುತ್ತದೆ ಎಂಬ ಪ್ರತೀತಿಯಿದೆ. ಅದರಂತೆ, ಇತ್ತೀಚೆಗೆ ಕಾಶಿಗೆ ಹೋಗಿದ್ದ ಅಮೆರಿಕದಲ್ಲಿರುವ ಟೆಕ್ಕಿ ಅರಿಪಿರಲಾ ನಾಗಾ ಶ್ರೀನಿವಾಸ ಅವರು ಫೇಸ್ ಬುಕ್ ಗೆಳೆತನವನ್ನೇ ಬಿಟ್ಟುಬಂದಿದ್ದಾರೆ. ಇವರ ಸಾಹಸಕ್ಕೆ ನಿಜಕ್ಕೂ ಮೆಚ್ಚಬೇಕು. ಏಕೆಂದರೆ ಫೇಸ್ ಬುಕ್ ಎಂಬುದು ಜನಜೀವನದಲ್ಲಿ ವ್ಯಾಪಕವಾಗಿ ಹಾಸುಹೊಕ್ಕಿದೆ.

ಇನ್ನೊಂದು ವಿಚಿತ್ರ ಸುದ್ದಿ ಏನಪ್ಪಾ ಅಂದರೆ ... ಒಂದು ಕಡೆ ಫೇಸ್ ಬುಕ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದ್ದರೆ ಮತ್ತೊಂದೆಡೆ ಫೇಸ್ ಬುಕ್ ಪ್ರೇಮ ಪರಾಕಾಷ್ಠೆಯನ್ನೂ ಕಂಡಿದೆ. ದಂಪತಿಗಳು ತಮ್ಮ ಮಗುವಿಗೆ ಫೇಸ್ ಬುಕ್ ಹೆಸರನ್ನಿಡುವಷ್ಟು ಅದರ ಬಗ್ಗೆ ಹುಚ್ಚು ಪ್ರೇಮ ಬೆಳೆಸಿಕೊಂಡಿದ್ದರೆ, ಸ್ಥಳೀಯ ಆಡಳಿತ ಬೇಡವೆಂದಿದೆ.
ಮೆಕ್ಸಿಕೋದ ಸೊನಾರಾ ನಗರದಲ್ಲಿ ಹೊಸ ಕಾನೂನು ಜಾರಿಗೊಂಡಿದೆ. ಅದರ ಪ್ರಕಾರ ದಂಪತಿಗಳು ಯಾರೂ ತಮ್ಮ ಮಕ್ಕಳಿಗೆ 'ಫೇಸ್ ಬುಕ್' ಎಂಬ ಹೆಸರನ್ನಿಡುವಂತಿಲ್ಲ. ಫೇಸ್ ಬುಕ್ ಜತೆಗೆ ಇನ್ನೂ ಕೆಲವು ಹೆಸರುಗಳ ನಾಮಕರಣವನ್ನು ನಿಷೇಧಿಸಿ, ಅಲ್ಲಿ ಸರಕಾರ ಹೊಸ ನೀತಿಯನ್ನು ಜಾರಿಗೊಳಿಸಿದೆ.
ಮುಂದೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿರುವ ಮೆಕ್ಸಿಕೋ ಸರಕಾರ ಯಾರೂ ತಮ್ಮ ಮಕ್ಕಳಿಗೆ ಫೇಸ್ ಬುಕ್ ಹೆಸರನ್ನಿಡಬಾರದು ಎಂದು ಕಟ್ಟೆಚ್ಚ್ರ ನೀಡಿದೆ. ಹೆಸರಿಗೆ ಅರ್ಥವೇ ಇಲ್ಲ ಅಥವಾ ಮಕ್ಕಳು ದೊಡ್ಡವರಾದ ಮೇಲೆ ಅವರ ಮೇಲೆ ಅಡ್ಡ ಪರಿಣಾಮ ಬೀರುವ ಅಥವಾ ಅನಗತ್ಯವಾಗಿ ಕಿರುಕುಳ ಅನುಭವಿಸುವಂತಹ ಒಟ್ಟು 61 ಹೆಸರುಗಳನ್ನು ಮೆಕ್ಸಿಕೋದ ಸೊನಾರಾ ಸ್ಥಳೀಯ ಆಡಳಿತ ಪಟ್ಟಿ ಮಾಡಿದ್ದು, ಅವುಗಳಲ್ಲಿ ಯಾವುದನ್ನೂ ಬಳಸಬಾರದು ಎಂದು ಎಚ್ಚರಿಸಿದೆ.












Click it and Unblock the Notifications