ಕೇಂದ್ರದ ವಿರುದ್ಧ ಟಿಡಿಪಿಯಿಂದ ಇಂದು ಅವಿಶ್ವಾಸ ಮಂಡನೆ
ನವದೆಹಲಿ, ಮಾರ್ಚ್ 19: ಇತ್ತೀಚೆಗಷ್ಟೇ ಎನ್ ಡಿಎ ಮೈತ್ರಿಕೂಟದಿಂದ ಮೈತ್ರಿ ಕಡಿದುಕೊಂಡ ಟಿಡಿಪಿ(ತೆಲುಗು ದೇಶಂ ಪಕ್ಷ)ಯು ವೈ ಎಸ್ ಆರ್ ಕಾಂಗ್ರೆಸ್ ಜೊತೆ ಸೇರಿ ಇಂದು(ಮಾ.19) ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಅವಿಶ್ವಾಸ ನಿರ್ಣಯ ಮಾಡಲಿರುವ ಟಿಡಿಪಿಯೊಡದನೆ ಕಾಂಗ್ರೆಸ್ ಮತ್ತು ಆರ್ ಜೆಡಿ ಪಕ್ಷಗಳು ಸಹ ಕೈಜೋಡಿಸಿವೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸದ ಕಾರಣ ಅವರು ಎನ್ ಡಿಎಯಿಂದ ಮೈತ್ರಿ ಕಡಿದುಕೊಂಡಿದ್ದರು.












Click it and Unblock the Notifications