ನಾಯ್ಡುಗೆ ಮತ್ತೊಂದು ಆಘಾತ, ಬಿಜೆಪಿ ಸೇರಿದ ಟಿಡಿಪಿ ಮುಖಂಡ
ನವದೆಹಲಿ, ಜುಲೈ 12: ಇತ್ತೀಚೆಗಷ್ಟೆ ಟಿಡಿಪಿಯ ನಾಲ್ವರು ರಾಜ್ಯ ಸಭಾ ಸದಸ್ಯರು ಬಿಜೆಪಿಗೆ ಸೇರುವ ಮೂಲಕ ನೀಡಿದ್ದ ಆಘಾತದಿಂದಲೇ ಹೊರಬಂದಿರದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ.
ಟಿಡಿಪಿಯ ವಿಧಾನ ಪರಿಷತ್ ಸದಸ್ಯ ಅಣ್ಣಂ ಸತೀಶ್ ಪ್ರಭಾಕರ್ ರೆಡ್ಡಿ ಅವರು ಶುಕ್ರವಾರ ಬಿಜೆಪಿಗೆ ಸೇರಿದ್ದಾರೆ.
ನವದೆಹಲಿಯಲ್ಲಿ ಬಿಜೆಪಿ ಕಾರ್ಯಾಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರ ಉಪಸ್ಥಿತಿಯಲ್ಲಿ ರೆಡ್ಡಿ ಅಧಿಕೃತವಅಗಿ ಬಿಜೆಪಿ ಸೇರಿದರು.

ರಾಜೀನಾಮೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರವೊಂದನ್ನು ಬರೆದಿರುವ ಪ್ರಭಾಕರ್ ರೆಡ್ಡಿ, "ತಮ್ಮ ಪಕ್ಷದ ಸದಸ್ಯನಾಗಿ ನಾನು ಸಾಕಷ್ಟನ್ನು ಕಲಿತಿದ್ದೇನೆ. ಇಂಥ ಅವಕಾಶ ನೀಡಿದ್ದಕ್ಕೆ ತಮಗೆ ಧನ್ಯವಾದಗಳು" ಎಂದಿದ್ದಾರೆ.
ಇತ್ತೀಚೆಗಷ್ಟೇ ಟಿಡಿಪಿ ಹಿರಿಯ ನಾಯಕ ಇ ಪೆದ್ದಿರೆಡ್ಡಿ ಸಹ ಬಿಜೆಪಿಗೆ ಸೇರಿದ್ದರು. ಮಾಜಿ ಶಾಸಕ ಬೊಡಾ ಜನಾರ್ದನ್, ವಾರಂಗಲ್ ನ ಮಾಜಿ ಸಂಸದ ಚಡಾ ಸುರೇಶ್ ರೆಡ್ಡಿ ಅವರು ಬಿಜೆಪಿ ಸೇರಿದ್ದರು.
ಲೋಕಸಭೆ ಚುನಾವಣೆ ಮತ್ತು ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಎರಡರಲ್ಲೂ ಟಿಡಿಪಿಯ ಕಳಪೆ ಪ್ರದರ್ಶನವೇ ಪಕ್ಶಃ ತೊರೆಯಲು ಪ್ರಮುಖ ಕಾರಣ ಎಂದು ರಾಜೀನಾಮೆ ನೀದಿದ ಸದಸ್ಯರು ಹೇಳಿದ್ದಾರೆ.












Click it and Unblock the Notifications