Breaking: ಅತ್ಯಾಚಾರ ಪ್ರಕರಣ; ಸೈಯದ್ ಶಾನವಾಜ್‌ಗೆ ಸುಪ್ರೀಂನಿಂದ ರಿಲೀಫ್

ಮುಂಬೈ, ಆಗಸ್ಟ್ 22: ಆಪಾದಿತ ಅತ್ಯಾಚಾರ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸೈಯದ್ ಶಾನವಾಜ್ ಹುಸೇನ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ಬಿಗ್ ರಿಲೀಫ್ ನೀಡಿದೆ.

ಸೈಯದ್ ಶಾನವಾಜ್ ಹುಸೇನ್‌ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ನಿರ್ದೇಶನ ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ.

ನ್ಯಾಅ. ಉದಯ್ ಉಮೇಶ್ ಲಲಿತ್ ನೇತೃತ್ವದ ಪೀಠವು ದೆಹಲಿ ಪೊಲೀಸರು ಮತ್ತು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿ ಸೆಪ್ಟೆಂಬರ್‌ನಲ್ಲಿ ವಿಚಾರಣೆ ನಡೆಸುವಂತೆ ಆದೇಶಿಸಿದೆ.

Supreme Court Stayed The Delhi High Court Order On Shahnawaz Hussain Case

"ಪ್ರಕರಣ ಹೆಚ್ಚಿನ ಪರಿಗಣನೆಗೆ ಬಾಕಿಯಿದೆ. 2018ರ ಕ್ರಿಮಿನಲ್ ದೂರಿಗೆ ಸಂಬಂಧಿಸಿದಂತೆ ಪ್ರಸ್ತುತ ಸವಾಲಿಗೆ ಒಳಪಟ್ಟಿರುವ ಉಚ್ಚ ನ್ಯಾಯಾಲಯದ ಆದೇಶದ ಪರಿಣಾಮ ಮತ್ತು ಕಾರ್ಯಾಚರಣೆಯನ್ನು ಮುಂದಿನ ಪ್ರಕ್ರಿಯೆಗಳಿಗೆ ತಡೆ ನೀಡಲಾಗುವುದು" ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಪೀಠವು ಹೇಳಿದೆ.

ಆಗಸ್ಟ್ 17 ರಂದು ದೆಹಲಿ ಹೈಕೋರ್ಟ್, ದೆಹಲಿ ಪೊಲೀಸರಿಗೆ ಸೈಯದ್ ಶಾನವಾಜ್ ಹುಸೇನ್ ವಿರುದ್ಧ ಎಫ್‌ಐಆರ್‌ ದಾಖಲಿಸಲು ತರಾಟೆಗೆ ತೆಗೆದುಕೊಂಡಿತ್ತು. ತಕ್ಷಣವೇ ಪ್ರಕರಣ ದಾಖಲಿಸಿ, ಮೂರು ತಿಂಗಳೊಳಗೆ ಅವರ ವಿರುದ್ಧದ ಅತ್ಯಾಚಾರದ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ನಿರ್ದೇಶಿಸಿತ್ತು.

ಏಪ್ರಿಲ್ 2018 ರಲ್ಲಿ ದೆಹಲಿಯ ಚತ್ತರ್‌ಪುರದ ಫಾರ್ಮ್‌ಹೌಸ್‌ನಲ್ಲಿ ಆಕೆಗೆ ಮಾದಕ ದ್ರವ್ಯ ನೀಡಿ ಅತ್ಯಾಚಾರ ಎಸಗಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ. ದೂರುದಾರರು ತಮ್ಮ ಸಹೋದರನೊಂದಿಗೆ ವೈವಾಹಿಕ ಭಿನ್ನಾಭಿಪ್ರಾಯ ಹೊಂದಿದ್ದರು. ಹೀಗಾಗಿ ಅವರನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹುಸೇನ್ ಆರೋಪಗಳನ್ನು ನಿರಾಕರಿಸಿದ್ದರು.

Supreme Court Stayed The Delhi High Court Order On Shahnawaz Hussain Case

ಹುಸೇನ್ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಮುಕುಲ್ ರೋಹಟಗಿ ಮತ್ತು ಸಿದ್ಧಾರ್ಥ್ ಲೂತ್ರಾ ಅವರು, ಅರ್ಜಿದಾರರು ಸಾರ್ವಜನಿಕ ವ್ಯಕ್ತಿಯಾಗಿದ್ದು, ದಿನದ 24 ಗಂಟೆ ಭದ್ರತೆ ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಸಂತ್ರಸ್ತೆಯ ಆರೋಪಗಳನ್ನು ಆಧಾರರಹಿತವೆಂದು ಪರಿಗಣಿಸಿದ ಹೈಕೋರ್ಟ್ ಪೊಲೀಸರಿಂದ ಸ್ಥಿತಿ ವರದಿಯನ್ನು ಕೇಳಿದೆ ಎಂದು ಹೇಳಿದರು.

2013 ರ ನವೆಂಬರ್‌ನಲ್ಲಿ ಹುಸೇನ್ ಅವರ ಸಹೋದರ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ದೂರುದಾರ ಆರೋಪಿಸಿದ್ದರು. ಬಳಿಕ 2018 ರಲ್ಲಿ ಹುಸೇನ್ ಮೇಲೆ ಅತ್ಯಾಚಾರದ ಆರೋಪ ಹೊರಿಸಲಾಯಿತು. ಪ್ರತಿ ಹಂತದಲ್ಲೂ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸುತ್ತಿದ್ದಾರೆ ಎಂದು ವಕೀಲ ರೋಹಟಗಿ ನ್ಯಾಯಾಲಯಕ್ಕೆ ಹೇಳಿದರು.

ದೂರುದಾರರ ಪರ ವಕೀಲ ಸಂಜೀವ್ ಕುಮಾರ್ ಸಿಂಗ್ ಹಾಜರಾಗಿ, ಅರ್ಜಿದಾರರು ಸುಳ್ಳು ಸಂಗತಿಗಳನ್ನು ಹೇಳಿದ್ದಾರೆ ಎಂದು ಆರೋಪಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+