ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಕೀಲರು ಕೋಟ್‌ ಮತ್ತು ನಿಲುವಂಗಿ ಧರಿಸುವುದು ಬೇಡ- ಸುಪ್ರೀಂಕೋರ್ಟ್

|
Google Oneindia Kannada News

ದೆಹಲಿ, ಮೇ 14: ಕೊರೊನಾ ವೈರಸ್‌ ಭೀತಿಯಿಂದ ವಕೀಲರು ಮತ್ತು ನ್ಯಾಯಾಧೀಶರು ತಮ್ಮ ಸಮವಸ್ತ್ರದ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ಮಹಾ ಕಾರ್ಯದರ್ಶಿ ಹೇಳಿದ್ದಾರೆ.

ಮುಂದಿನ ಆದೇಶದವರೆಗೂ ವಕೀಲರು ಹಾಗೂ ನ್ಯಾಯಾಧೀಶರುಗಳು ಕೋಟ್ ಮತ್ತು ಗೌನ್ ಧರಿಸುವಂತಿಲ್ಲ ಎಂದು ಸೂಚಿಸಿದೆ. ಸುಪ್ರೀಂಕೋರ್ಟ್‌ನ ಮಹಾಕಾರ್ಯದರ್ಶಿ ಸಂಜೀವ್ ಎಸ್ ಕಲಗಾಂವ್ಕರ್ ಈ ಕುರಿತು ಬುಧವಾರ ಅಧಿಸೂಚನೆ ಹೊರಡಿಸಿದ್ದಾರೆ.

ನಿಟ್ಟುಸಿರು ಬಿಟ್ಟಿದ್ದ ಗೋವಾಗೆ ಮತ್ತೆ ಕಂಟಕ: 7 ಹೊಸ ಕೇಸ್ ಪತ್ತೆ!ನಿಟ್ಟುಸಿರು ಬಿಟ್ಟಿದ್ದ ಗೋವಾಗೆ ಮತ್ತೆ ಕಂಟಕ: 7 ಹೊಸ ಕೇಸ್ ಪತ್ತೆ!

ನಿಲುವಂಗಿ ಮೂಲಕ ಕೊರೊನಾ ವೈರಸ್‌ ಹರುಡುವ ಸಾಧ್ಯತೆ ಹೆಚ್ಚಿದೆ. ನಿಲುವಂಗಿಗಳನ್ನು ದಿನನಿತ್ಯ ಬಳಸಲಾಗುತ್ತೆ, ಪ್ರತಿದಿನವೂ ಅದನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಹಾಗಾಗಿ, ವೈದ್ಯಕೀಯ ಸಲಹೆಯಂತೆ ಕೋರ್ಟ್ ಕಲಾಪಗಳು ಮತ್ತು ವಿಡಿಯೋ ಕಾನ್ಫೆರೆನ್ಸ್ ವೇಳೆ ಇದನ್ನು ಧರಿಸಬಾರದು ಎಂದು ಕಾರ್ಯದರ್ಶಿ ಆದೇಶಿಸಿದ್ದಾರೆ. ವೈದ್ಯಕೀಯ ಅಗತ್ಯತೆ ಇರುವವರೆಗೂ ಆದೇಶ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ

ಮುಂದಿನ ಆದೇಶದವರೆಗೂ ಬಿಳಿ ಶರ್ಟ್, ಬಿಳಿ ಸಲ್ವಾರ್, ಬಿಳಿ ಸೀರೆ, ಬಿಳಿ ಬಣ್ಣದ ನೆಕ್ ಬ್ಯಾಂಡ್‌ಗಳನ್ನು ಧರಿಸಬಹುದು ಎಂದು ಕಾರ್ಯದರ್ಶಿ ಸೂಚಿಸಿದ್ದಾರೆ. ಈ ಆದೇಶ ತಕ್ಷಣ ಜಾರಿಬರಲಿದೆ ಎಂದು ಹೇಳಿದ್ದಾರೆ.

Supreme court Says Advocates Should not wear coat and gown Until next order

ಅದರಂತೆ ಮುಖ್ಯನಾಯಮೂರ್ತಿ ಎಸ್ ಎ ಬೊಬಡೆ, ನ್ಯಾಯಮೂರ್ತಿ ಇಂದೂ ಮಲ್ಹೋತ್ರ ಹಾಗು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠವೂ ವಿಡಿಯೋ ಕಾನ್ಫೆರೆನ್ಸ್ ಮೂಲಕ ಅರ್ಜಿಯೊಂದರ ವಿಚಾರಣೆ ನಡೆಸಿದರು. ಈ ವೇಳೆ ಇವರೆಲ್ಲ ಕೋಟ್ ಹಾಗೂ ನಿಲುವಂಗಿಗಳನ್ನು ಧರಿಸಿದ ಕಾರ್ಯನಿರ್ವಹಿಸಿದರು.

English summary
Advocates may wear “plain white-shirt/white-salwar-kameez/white saree, with a plain-white neck band” during hearings before the Supreme Court until further orders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X