ಕಪ್ಪುಹಣ ತನಿಖೆ ವಿಳಂಬ : ಕೇಂದ್ರಕ್ಕೆ ಸುಪ್ರೀಂ ಚಾಟಿ

Supreme Court of India pulls up Centre over black money
ನವದೆಹಲಿ, ಏ. 23 : ಕಪ್ಪುಹಣ ಕುರಿತ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ವಹಿಸಿಕೊಡಬೇಕೆಂಬ ತನ್ನ ನಿರ್ದೇಶನವನ್ನು ಪಾಲಿಸದಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ಭಾರತದ ಸುಪ್ರೀಂ ಕೋರ್ಟ್‌ ಚಾಟಿಯೇಟು ನೀಡಿದೆ.

ಕಳೆದ ಆರು ದಶಕಗಳಿಂದ ಸರ್ಕಾರಗಳು ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಏನು ಕ್ರಮಕೈಗೊಂಡಿಲ್ಲ. ಈ ಸಂಬಂಧ ಮೂರು ವರ್ಷ‌ಗಳ ಹಿಂದೆ ನೀಡಿದ ಆದೇಶ ಇನ್ನು ಕಾರ್ಯ ರೂಪಕ್ಕೆ ಬಾರದ್ದಕ್ಕೆ ಸುಪ್ರೀಂ ಕೋರ್ಟ್‌‌ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ವಿದೇಶದಿಂದ ಕಪ್ಪು ಹಣವನ್ನು ಮರಳಿ ಭಾರತಕ್ಕೆ ತರಲು ಕ್ರಮ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್‌‌ಗೆ 2009 ಮೇ ತಿಂಗಳಿನಲ್ಲಿ ಅಫಿಡವಿಟ್‌ ಸಲ್ಲಿಸಿತ್ತು. ಅಫಿಡವಿಟ್‌ ಸಲ್ಲಿಸಿದ ಬಳಿಕ ಕೇಂದ್ರ ಸರ್ಕಾರ ಕಪ್ಪು ಹಣದ ತನಿಖೆಗೆ ಉನ್ನತ ಸಮಿತಿಯೊಂದನ್ನು ರಚಿಸಿತ್ತು. ಜುಲೈ 2011ರಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರ ನೇಮಿಸಿದ್ದ ಉನ್ನತ ಸಮಿತಿಯನ್ನು ವಿಶೇಷ ತನಿಖಾ ದಳವನ್ನಾಗಿ (Special Investigation Team)ಪರಿವರ್ತ‌ನೆ ಮಾಡಿ ಎಂದು ಆದೇಶ ನೀಡಿತ್ತು.[ಸ್ವಿಸ್ ಬ್ಯಾಂಕ್ ನಲ್ಲಿರುವ ಕಪ್ಪುಹಣ ತರುತ್ತೇವೆ: ಕೇಂದ್ರ]

ತಾನು ನಿಯೋಜಿಸಿದ ಉನ್ನತ ಸಮಿತಿಯನ್ನು ವಿಶೇಷ ತನಿಖಾ ದಳವನ್ನಾಗಿ ಸುಪ್ರೀಂಕೋರ್ಟ್‌ ನೀಡಿದ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್‌‌‌ನಲ್ಲಿ ಮನವಿ ಮಾಡಿತ್ತು. ಆದರೆ 2011 ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಮನವಿಯನ್ನು ತಿರಸ್ಕರಿಸಿತ್ತು

ಸ್ವಿಸ್‌ ಬ್ಯಾಂಕ್‌ನಲ್ಲಿರುವ ಭಾರತದ ಕಪ್ಪು ಹಣ ಎಷ್ಟು ಎನ್ನುವುದರ ಬಗ್ಗೆ ಇಲ್ಲಿಯವರೆಗೂ ಯಾರು ಅಧಿಕೃತವಾಗಿ ಹೇಳಿಲ್ಲ. ಆದರೆ ಸಿಬಿಐನ ಮಾಜಿ ನಿರ್ದೇಶಕ ಎ.ಪಿ.ಸಿಂಗ್‌ ಈ ಹಿಂದೆ 500 ಬಿಲಿಯನ್ ಅಮೆರಿಕನ್ ಡಾಲರ್‌ಗಳನ್ನು ಭಾರತೀಯರು ಸ್ವಿಸ್‌ ಬ್ಯಾಂಕಿನಲ್ಲಿ ಇಟ್ಟಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದರು. ಎ.ಪಿ.ಸಿಂಗ್‌ ಹೇಳಿಕೆಯನ್ನು ಅಲ್ಲಗೆಳೆದು ಪ್ರತಿಕ್ರಿಯಿಸಿದ್ದ ಸ್ವಿಸ್‌ ದೂತಾವಾಸ ಬ್ಯಾಂಕಿನಲ್ಲಿ ಎಷ್ಟು ಹಣ ಇಟ್ಟಿದ್ದಾರೆ ಎನ್ನುವುದಕ್ಕೆ ಸಾಕಷ್ಟು ಸಾಕ್ಷಗಳ ಕೊರತೆ ಇದೆ. ಇಂಥವುಗಳನ್ನು ಈ ರೀತಿಯ ಹೇಳಿಕೆಗಳಿಂದ ದೃಢೀಕರಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.[50000 ಕೋಟಿ $ ಕಪ್ಪುಹಣ: ಸ್ವಿಸ್ ಕಿಡಿಕಿಡಿ]

ಕೇಂದ್ರ ಸರ್ಕಾರ ಕಪ್ಪುಹಣ ತರಲು ವಿಳಂಬ ಮಾಡುತ್ತಿದ್ದರೆ ಬಿಜೆಪಿ ಪ್ರಧಾನಿ ಅಭ್ಯರ್ಥಿ‌ ನರೇಂದ್ರ ಮೋದಿ ಒಂದು ವೇಳೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದರೆ ಭಾರತಕ್ಕೆ ಕಪ್ಪುಹಣ ತರಲು ಬದ್ಧ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಕಪ್ಪುಹಣ ತರಲು ವಿಶೇಷ ಟಾಸ್ಕ್‌ ಫೋರ್ಸ್‌ ರಚಿಸುವುದಾಗಿ ಈಗಾಗಲೇ ಘೋಷಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+