ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರಿಗೆ ಸ್ವಾಮಿ ನೀಡಿದ ಸಂಡೇ ಪ್ಯಾಕೇಜ್: 'ಲಾರ್ಡ್ ಕೃಷ್ಣ'

By Mahesh
|
Google Oneindia Kannada News

ನವದೆಹಲಿ, ಜ. 10: ಮೋದಿ ಅವರ ಸರ್ಕಾರ 2016ರಲ್ಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಲಿದೆ ಎಂದು ಹೇಳುತ್ತಾ ಬಂದಿರುವ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಮುಸ್ಲಿಮರಿಗೆ ಹೊಸ ಪ್ಯಾಕೇಜ್ ಘೋಷಿಸಿದ್ದಾರೆ. ಸ್ವಾಮಿ ನೀಡಿರುವ ಸಂಡೇ ಆಫರ್ ಗೆ 'ಲಾರ್ಡ್ ಕೃಷ್ಣ' ಪ್ಯಾಕೇಜ್ ಎಂದು ಹೆಸರಿಡಲಾಗಿದ್ದು, ಮೂರು ಮಂದಿರ ನೀಡಿ, 39,997 ಮಸೀದಿ ಇಟ್ಟುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

"ಹಿಂದುಗಳಾದ ನಾವು ಮುಸ್ಲಿಮರಿಗೆ ಕೃಷ್ಣ ದೇವರ ಹೆಸರಿನಲ್ಲಿ ಪ್ಯಾಕೆಜ್ ನೀಡುತ್ತಿದ್ದು, ಮೂರು ದೇವಾಲಯಗಳನ್ನು ನಮಗೆ ನೀಡಿ ಮತ್ತು 39, 997 ಮಸೀದಿಗಳನ್ನು ಇಟ್ಟುಕೊಳ್ಳಿ. ಮುಸ್ಲಿಂ ನಾಯಕರು ದುರ್ಯೋಧನನಂತೆ ವರ್ತಿಸಲ್ಲ ಎನ್ನುವ ವಿಶ್ವಾಸವನ್ನು ಇಟ್ಟುಕೊಂಡಿದ್ದೇನೆ" ಎಂದು ಸ್ವಾಮಿ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

Senior Bharatiya Janata Party leader Subramanian Swamy

ಈ ವರ್ಷ ನಾವು ಈ ನಿರ್ಮಾಣ ಮಾಡದೇ ಮುಂದಿನ ವರ್ಷ ಚುನಾವಣೆ ಬರುತ್ತದೆ. ಈ ವೇಳೆ ನಿರ್ಮಾಣ ಮಾಡಿದರೆ ನೀವು ಲೋಕಸಭಾ ಚುನಾವಣೆ ಬರುತ್ತದೆ, ಇಲ್ಲದಿದ್ದರೆ ಮುಂದಿನ ವರ್ಷ 2018 ಎಂದು ಹೇಳುತ್ತೀರಿ. ಪ್ರತಿವರ್ಷ ಒಂದಲ್ಲ ಒಂದು ಚುನಾವಣೆ ಬರುತ್ತಲೇ ಇರುತ್ತದೆ. ಚುನಾವಣೆ ಬರುತ್ತದೆ ಎನ್ನುವ ಕಾರಣಕ್ಕೆ ನಮ್ಮ ಕೆಲಸಗಳನ್ನು ನಾವು ನಿಲ್ಲಿಸುವುದಿಲ್ಲ ಎಂದು ಅವರು ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.


ದೆಹಲಿ ವಿಶ್ವವಿದ್ಯಾಲಯದಲ್ಲಿ ಅರುಂಧತಿ ವಶಿಷ್ಠ ಅನುಸಂಧಾನ ಪೀಠ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಹಾಯ ಮಾಡುವುದಾಗಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನನಗೆ ಭರವಸೆ ನೀಡಿದ್ದರು ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.[ಬಿಜೆಪಿ ಅಧಿಕಾರ ಅವಧಿಯಲ್ಲೇ ರಾಮಮಂದಿರ ನಿರ್ಮಾಣ]

ರಾಮ ಮಂದಿರವನ್ನು ನಿರ್ಮಾಣ ಮಾಡುವ ಬಗ್ಗೆ ಸರ್ಕಾರ ಕೊಟ್ಟ ಆಶ್ವಾಸನೆಯಂತೆ ನಡೆದುಕೊಳ್ಳಲಿದೆ. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ಮನ್ನಣೆ ನೀಡಲಾಗುವುದು. ಸುಪ್ರೀಂ ಕೋರ್ಟಿನ ಪೂರ್ಣ ಆದೇಶಕ್ಕೆ ಕಾಯುತ್ತಿದ್ದೇವೆ ಎಂದು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮ ರಾಜ್ಯ ಸಚಿವ (ಸ್ವತಂತ್ರ ಖಾತೆ) ಮಹೇಶ್ ಶರ್ಮಾ ಹೇಳಿದ್ದಾರೆ.

English summary
Senior Bharatiya Janata Party leader Subramanian Swamy on Sunday and offered the "Lord Krishna' package to the Muslim community where in return for 'three temples' they get to keep '39,997 mosques' in return.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X