Breaking: ಜೆಎನ್‌ಯುನಲ್ಲಿ ವಿದ್ಯಾರ್ಥಿ ಮತ್ತು ಭದ್ರತಾ ಸಿಬ್ಬಂದಿ ಸಂಘರ್ಷ
ನವದೆಹಲಿ, ಆಗಸ್ಟ್ 22: ವಿದ್ಯಾರ್ಥಿ ವೇತನ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ಪ್ರತಿಭಟನೆ ಮಾಡುತ್ತಿದ್ದ ಬಲಪಂಥೀಯ ವಿದ್ಯಾರ್ಥಿಗಳ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿದ್ಯಾರ್ಥಿಗಳ ಮೇಲೆ ಕ್ಯಾಂಪಸ್‌ನಲ್ಲಿ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೆಎನ್‌ಯು ಆಡಳಿತದಿಂದ ಸಂಶೋಧನಾ ಫೆಲೋಶಿಪ್ ನಿಧಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ದಾಳಿ ನಡೆಸಿದ್ದಾರೆ ಎಂದು ಎಬಿವಿಪಿ ಸದಸ್ಯರು ದೂಷಿಸಿದ್ದಾರೆ.
ಜೆಎನ್‌ಯುನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಘರ್ಷಣೆಯ ನಂತರ ಎಬಿವಿಪಿ ಅಧ್ಯಕ್ಷ ಮತ್ತು ವಿಕಲಚೇತನ ವಿದ್ಯಾರ್ಥಿಯೊಬ್ಬರು ಗಾಯಗೊಂಡಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆ ಹೇಳಿಕೊಂಡಿದೆ. ಈ ದಾಳಿಯಲ್ಲಿ ಸುಮಾರು 12 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಬಲಪಂಥೀಯ ಗುಂಪು ಹೇಳಿದೆ.

ಎಬಿವಿಪಿ ಮಾಡುತ್ತಿರುವ ಆರೋಪವೇನು?:
"ಇಂದು ವಿದ್ಯಾರ್ಥಿಗಳು ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತ ಕಚೇರಿಗೆ 'ಘೇರಾವ್' ಹಾಕಲಾಗುತ್ತಿತ್ತು. ಫೆಲೋಶಿಪ್ ಮತ್ತು ಸ್ಕಾಲರ್‌ಶಿಪ್‌ಗಳನ್ನು ಬಿಡುಗಡೆ ಮಾಡಬೇಕು ಎಂಬುದು ತಮ್ಮ ಬೇಡಿಕೆ ಆಗಿತ್ತು. ಈ ವಿಷಯವನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ದೀರ್ಘಕಾಲದಿಂದ ನಿರ್ಲಕ್ಷಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ," ಎಂದು ಎಬಿವಿಪಿ ಅಧ್ಯಕ್ಷ ರೋಹಿತ್ ಕುಮಾರ್ ಹೇಳಿದರು.
ಘರ್ಷಣೆಯ ಕುರಿತಾದ ವಿಡಿಯೋ ಶೇರ್:
ಭದ್ರತಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವಿನ ಘರ್ಷಣೆಯ ವೀಡಿಯೊವನ್ನು ಬಲಪಂಥೀಯ ವಿದ್ಯಾರ್ಥಿ ಗುಂಪು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

"ಜೆಎನ್‌ಯು ರೆಕ್ಟರ್‌ನ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ ನಂತರ, ಜೆಎನ್‌ಯು ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ಗಾಗಿ ಹಲವು ವರ್ಷಗಳಿಂದ ಎಬಿವಿಪಿ ಜೆಎನ್‌ಯು ಕಾರ್ಯಕರ್ತರು ಆಂದೋಲನ ನಡೆಸುತ್ತಿದ್ದಾಗ, ಜೆಎನ್‌ಯು ಭದ್ರತಾ ಸಿಬ್ಬಂದಿ ಎಂದು ಪೋಸ್ಟ್ ಮಾಡಿದ ರೆಕ್ಟರ್‌ನ ಗೂಂಡಾಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದರು, "ಎಂದು ಬಿಜೆಪಿ-ಸಂಯೋಜಿತ ವಿದ್ಯಾರ್ಥಿಗಳ ಸಂಘ ಟ್ವೀಟ್ ಮಾಡಿದೆ.
JNU के रेक्टर के भ्रष्टाचार का खुलासा करने के बाद जब ABVP JNU के कार्यकर्ता JNU के छात्रों के वर्षों से ठप छत्रवृति के लिए आंदोलन कर रहे थे तब JNU के सिक्योरिटी गॉर्ड के रूप में तैनात रेक्टर के गुंडों ने छत्रों पर हमला किया। #JNURector_gunda_hai#JNURector_must_resign pic.twitter.com/2NWM6iOu2K
— ABVP JNU (@abvpjnu) August 22, 2022












Click it and Unblock the Notifications