2.1 ಲಕ್ಷ ಶೆಲ್ ಕಂಪನಿಗಳ ಆಸ್ತಿ ಗುರುತಿಸಲು ರಾಜ್ಯ ಸರಕಾರಗಳಿಗೆ ಸೂಚನೆ

ನವದೆಹಲಿ, ಅಕ್ಟೋಬರ್ 27: 2.1 ಲಕ್ಷದಷ್ಟಿರುವ ಶೆಲ್ ಕಂಪನಿಗಳ ಆಸ್ತಿಗಳನ್ನು ಗುರುತಿಸಬೇಕು ಎಂದು ಕೇಂದ್ರ ಸರಕಾರವು ರಾಜ್ಯ ಸರಕಾರಗಳಿಗೆ ತಿಳಿಸಿದೆ. ಕಾನೂನು, ನ್ಯಾಯ ಹಾಗೂ ಕಂಪನಿ ವ್ಯವಹಾರಗಳ ರಾಜ್ಯ ಖಾತೆ ಸಚಿವ ಪಿ.ಪಿ.ಚೌಧರಿ ಈ ಬಗ್ಗೆ ರಾಜ್ಯ ಸರಕಾರಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದ್ದಾರೆ.

ಅಂಥ ಆಸ್ತಿಗಳ ಮಾಹಿತಿಯನ್ನು ಶೀಘ್ರದಲ್ಲಿ ಕಲೆ ಹಾಕಬೇಕು. ನಿರ್ದಿಷ್ಟ ಕಾಲಾವಧಿಯಲ್ಲಿ ಕಂಪನಿ ವ್ಯವಹಾರಗಳ ಸಚಿವಾಲಯದ ಜತೆಗೆ ಮಾಹಿತಿಯನ್ನು ಹಂಚಿಕೊಳ್ಳಬೇಕು ಎಂದಿದ್ದಾರೆ.

States told to identify properties of 2.1 lakh shell companies

ದೇಶದಾದ್ಯಂತ ಭೂ ದಾಖಲೆಗಳು ಕಂಪ್ಯೂಟರ್ ಗಳಲ್ಲಿ ಸಿಗುತ್ತಿವೆ. ಆದ್ದರಿಂದ ಆಯಾ ರಾಜ್ಯ ಸರಕಾರಗಳು ಜಿಲ್ಲಾಡಳಿತಗಳಿಗೆ ಮಾಹಿತಿ ರವಾನಿಸಿ, ಅಲ್ಲಿಂದ ದಾಖಲೆಗಳನ್ನು ತರಿಸಿಕೊಂಡು, ಅವುಗಳನ್ನು ಕೇಂದ್ರಕ್ಕೆ ತಲುಪಿಸುವುದು ಅಂಥ ಕಷ್ಟವೇನಲ್ಲ ಎಂದು ಚೌಧರಿ ಅಭಿಪ್ರಾಯ ಪಟ್ಟಿದ್ದಾರೆ.

ರಿಜಿಸ್ಟ್ರಾರ್ ಆಫ್ ಕಂಪನಿ ಅವರ ಬಳಿ ಇರುವ ಆರೋಪ ಹೊತ್ತಿರುವ ಕಂಪನಿಗಳ ಪಟ್ಟಿಯನ್ನು ಗಮನಿಸಿ, ಅಸ್ತಿತ್ವದಲ್ಲೇ ಇರದ ಆ ಕಂಪನಿಗಳ ಒಡೆತನದ ಆಸ್ತಿಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕು. ಅಂಥ ಕಂಪನಿಗಳ ನಿರ್ದೇಶಕರು ಆಸ್ತಿ ಮಾರಾಟಕ್ಕೆ ಪ್ರಯತ್ನಿಸಬಹುದು. ಆ ಪ್ರಯತ್ನವನ್ನು ತಡೆಯುವುದು ಜಿಲ್ಲಾಡಳಿತಗಳ ಹೊಣೆ ಎಂದು ಚೌಧರಿ ತಿಳಿಸಿದ್ದಾರೆ.

ಅಂಥ ಆಸ್ತಿಗಳು ಮಾರಾಟ ಆಗಿ, ನೋಂದಣಿ ಆಗಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಶೆಲ್ ಕಂಪನಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಕಪ್ಪು ಹಣದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಪ್ರಮುಖವಾದದ್ದು. ಇದಕ್ಕೆ ರಾಜ್ಯ ಸರಕಾರಗಳೂ ನೆರವು ನೀಡಬೇಕು ಎಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+