ಭಾರತದಲ್ಲಿಯೇ ಕೋವಿಡ್-19 ಟೆಸ್ಟಿಂಗ್ ಕಿಟ್‌ಗಳ ಉತ್ಪಾದನೆ

ನವ ದೆಹಲಿ, ಏಪ್ರಿಲ್ 22: ಕೊರೊನಾ ಪರೀಕ್ಷೆಗೆ ಬೇಕಾದ ಕೋವಿಡ್-19 ಟೆಸ್ಟಿಂಗ್ ಕಿಟ್‌ಗಳ ಉತ್ಪಾದನೆ ಭಾರತದಲ್ಲಿಯೇ ಆಗಲಿದೆ. ಸೌತ್ ಕೊರಿಯನ್ ಸಂಸ್ಥೆಯೊಂದು ತನ್ನ ಭಾರತೀಯ ಘಟಕದಲ್ಲಿ ಟೆಸ್ಟಿಂಗ್ ಕಿಟ್‌ಗಳ ಉತ್ಪಾದನೆ ಪ್ರಾರಂಭ ಮಾಡಿದೆ. ಈ ವಿಷಯವನ್ನು ಭಾರತೀಯ ರಾಯಭಾರ ಕಚೇರಿ ಮಂಗಳವಾರ ಪ್ರಕಟಿಸಿದೆ.

''ಭಾರತದಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನೆಯನ್ನು ಹೆಚ್ಚಿಸಲು ಕಂಪನಿಯು ಯೋಜಿಸುತ್ತಿರುವುದೆ. ಇದು ಭಾರತದ 'ಮೇಕ್ ಇನ್ ಇಂಡಿಯಾ ಫಾರ್ ದಿ ವರ್ಲ್ಡ್'ಗೆ ಅತ್ಯುತ್ತಮ ಉದಾಹರಣೆಯಾಗಿದೆ.'' ಎಂದು ಪ್ರಕರಣೆಯಲ್ಲಿ ತಿಳಿಸಲಾಗಿದೆ.

ಮಂಗಳವಾರ ದಕ್ಷಿಣ ಕೊರಿಯಾದ ಭಾರತೀಯ ರಾಯಭಾರಿ ಶ್ರೀಪ್ರಿಯಾ ರಂಗನಾಥನ್ ಎಸ್‌ಡಿ ಬಯೋಸೆನ್ಸರ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಸಿಇಒ ಲೀ ಹ್ಯೋ-ಕೀನ್ ಅವರೊಂದಿಗೆ ಉತ್ಪಾದನಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ.

South Korean Firms Starts Production Of COVID-19 Testing Kits In India

ವಾರಕ್ಕೆ 500,000 ಪರೀಕ್ಷೆಗಳ ಸಾಮರ್ಥ್ಯವನ್ನು ಹೊಂದಿರುವ ಟೆಸ್ಟ್ ಕಿಟ್‌ಗಳನ್ನು ಎಸ್‌ಡಿ ಬಯೋಸೆನ್ಸರ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಉತ್ಪಾದಿಸುತ್ತಿದೆ.

ಈ ಕಂಪನಿಯ ಗುರಿ ವಿಶೇಷವಾಗಿ ವೈದ್ಯಕೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಬಲವಾದ ಸಹಭಾಗಿತ್ವವನ್ನು ತೋರಿಸುತ್ತದೆ.

ಎಸ್‌ಡಿ ಬಯೋಸೆನ್ಸರ್ ಸದ್ಯಕ್ಕೆ ವಾರಕ್ಕೆ 500,000 ಪರೀಕ್ಷಾ ಕಿಟ್‌ಗಳ ಉತ್ಪಾದನೆಯನ್ನು ಮಾಡುತ್ತಿದೆ. ಮುಂಬರುವ ವಾರಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಉತ್ಪಾದನಾ ಪ್ರಮಾಣವನ್ನು ಹೆಚ್ಚು ಮಾಡಲಾಗುವುದು ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+