ಸೋನಿಯಾ ಗಾಂಧಿ ಭದ್ರತಾ ಸಿಬ್ಬಂದಿ ನಿಗೂಢವಾಗಿ ನಾಪತ್ತೆ

ನವದೆಹಲಿ, ಸೆ. 06 : ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬೆಂಗಾವಲು ಪಡೆಯ ಕಮಾಂಡೋ ಒಬ್ಬರು ಸಂಶಯಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಸೋನಿಯಾ ಅವರಿಗೆ ಭದ್ರತೆ ಒದಗಿಸಲು ನಿಯುಕ್ತರಾಗಿದ್ದ ಎಸ್ ಪಿಜಿ ಕಮಾಂಡೋ ರಾಕೇಶ್ ಕುಮಾರ್ ಎಂಬುವವರು ಕರ್ತವ್ಯ ನಿರತರಾಗಿದ್ದಾಗಲೇ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಸೆಪ್ಟೆಂಬರ್ 01ರಂದು ಬೆಳಗ್ಗೆ ವೇಳೆಗೆ ರಾಕೇಶ್ ಕುಮಾರ್ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ, ತಡವಾಗಿ ಕರ್ತವ್ಯಕ್ಕೆ ಹಾಜರಾದರು.

Sonia Gandhi's SPG Commando goes missing under suspicious circumstances

31 ವರ್ಷ ವಯಸ್ಸಿನ ರಾಕೇಶ್ ಅವರು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಸೋನಿಯಾ ಗಾಂಧಿ ಅವರ ನಿವಾಸವನ್ನು ತೊರೆದಿದ್ದಾರೆ. ನಂತರ ಕೆಲ ಹೊತ್ತು ತನ್ನ ಗೆಳೆಯರೊಂದಿಗೆ ಕಾಲ ಕಳೆದಿದ್ದಾರೆ. ಆದರೆ, ಅವರು ಬಳಸುತ್ತಿದ್ದ ಮೊಬೈಲ್ ಫೋನ್ ಹಾಗೂ ಸರ್ವೀಸ್ ರಿವಾಲ್ವರ್ ಗಳನ್ನು ಸೋನಿಯಾ ಅವರ ನಿವಾಸದಲ್ಲೇ ಇರಿಸಿ ಹೋಗಿದ್ದಾರೆ.

ಸೆಪ್ಟೆಂಬರ್ 02ರಂದು ರಾಕೇಶ್ ಅವರ ಕುಟುಂಬಸ್ಥರು, ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇನ್ನೂ ಕರ್ತವ್ಯದಲ್ಲಿರಬೇಕು ಎಂದುಕೊಂಡು ಸುಮ್ಮನಾಗಿದ್ದಾರೆ. ಮರುದಿನ ಕೂಡಾ ಯಾವುದೇ ಸುಳಿವು ಸಿಗದ ಕಾರಣ, ಕುಟುಂಬಸ್ಥರು ಕಂಗಾಲಾಗಿದ್ದಾರೆ. ರಾಕೇಶ್ ಅವರ ತಂದೆ ನೇರವಾಗಿ ನಂ 10, ಜನಪಥ್ ನಿವಾಸಕ್ಕೆ ಬಂದು ಮಾಹಿತಿ ಪಡೆದು, ಪೊಲೀಸ್ ಕಚೇರಿಗೆ ತೆರಳಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ. (ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+