ಕೇಂದ್ರ ಸಚಿವ ನಿತಿನ್ ಗಡ್ಕರಿ ಕೆಲಸವನ್ನು ಶ್ಲಾಘಿಸಿದ ಸೋನಿಯಾ ಗಾಂಧಿ

ನವದೆಹಲಿ, ಫೆಬ್ರವರಿ 7: ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರದಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಹೊಗಳಿದ್ದಾರೆ. ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ನಿತಿನ್ ಗಡ್ಕರಿ 'ಅದ್ಭುತ'ವಾದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಸಂಸತ್ ನ ಪ್ರಶ್ನೆ ವೇಳೆಯಲ್ಲಿ, ಗಡ್ಕರಿ ಅವರ ಜವಾಬ್ದಾರಿ ಇರುವ ಸಚಿವಾಲಯದ ಎರಡು ಪ್ರಶ್ನೆಯನ್ನು ಎತ್ತಲಾಯಿತು. ಅದಕ್ಕೆ ಗಡ್ಕರಿ ಕೆಲಸ ಅನುಷ್ಠಾನದ ಬಗ್ಗೆ ವಿಸ್ತೃತವಾದ ಮಾಹಿತಿ ನೀಡಿದರು. "ತಮ್ಮ ರಾಜಕೀಯ ನಂಟುಗಳ ಹೊರತಾಗಿಯೂ ಇಲ್ಲಿರುವ ಎಲ್ಲ ಸಂಸದರು ತಮ್ಮ ಕ್ಷೇತ್ರದಲ್ಲಿ ಆಗಿರುವ ನನ್ನ ಜವಾಬ್ದಾರಿ ಇರುವ ಸಚಿವಾಲಯದ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ" ಎಂದು ಹೇಳಿದರು.

ಬಿಜೆಪಿ ಸದಸ್ಯರು ಮೇಜು ಕುಟ್ಟುವುದರ ಮೂಲಕ ಗಡ್ಕರಿ ತಮ್ಮ ಭಾಷಣ ಮುಗಿಸಿದರು. ಆಗ ಮಧ್ಯಪ್ರದೇಶದ ಬಿಜೆಪಿ ಸಂಸದ ಗಣೇಶ್ ಸಿಂಗ್ ಎದ್ದು ನಿಂತು, ಕೇಂದ್ರ ರಸ್ತೆ ಸಾರಿಗೆ ಸಚಿವರು ಮಾಡಿದ "ಅದ್ಭುತ" ಕೆಲಸವನ್ನು ಸದನವು ಮೆಚ್ಚಬೇಕು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಗೆ ಹೇಳಿದರು.

Sonia Gandhi appreciated road transport minister Nitin Gadkari work

ಅಲ್ಲಿಯ ತನಕ ಸಮಾಧಾನವಾಗಿ ಸಚಿವ ಗಡ್ಕರಿ ಅವರ ಮಾತು ಕೇಳಿಸಿಕೊಂಡು ಕುಳಿತಿದ್ದ ಸೋನಿಯಾ ಗಾಂಧಿ ಪ್ರತಿಕ್ರಿಯೆಯಾಗಿ, ನಕ್ಕು, ಮೇಜು ಕುಟ್ಟಿ ಮೆಚ್ಚುಗೆ ಸೂಚಿಸಿದರು. ಇದನ್ನು ನೋಡಿ, ಕಾಂಗ್ರೆಸ್ ಸಂಸದರು ಮಲ್ಲಿಕಾರ್ಜುನ ಖರ್ಗೆ ಸೇರಿ ಇತರರು ಸಹ ಮೆಚ್ಚುಗೆ ಸೂಚಿಸಿದರು.

ವರದಿ ಪ್ರಕಾರ, ಕಳೆದ ವರ್ಷ ಆಗಸ್ಟ್ ನಲ್ಲಿ ಸೋನಿಯಾ ಗಾಂಧಿ ಅವರು ಗಡ್ಕರಿಗೆ ಪತ್ರ ಬರೆದಿದ್ದರು. ಉತ್ತರಪ್ರದೇಶದ ತಾವು ಪ್ರತಿನಿಧಿಸುವ ರಾಯ್ ಬರೇಲಿ ಕ್ಷೇತ್ರದ ರಸ್ತೆ ಸಮಸ್ಯೆಗೆ "ಸಕಾರಾತ್ಮಕವಾಗಿ ಸಂದಿಸಿದ್ದಕ್ಕೆ" ಧನ್ಯವಾದಗಳು ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+